Home » ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 7

ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 7

by manager manager
March 7 Current affairs in Kannada for competitive exams

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..

ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..

1 ಏಷಿಯಾ ಒಲಿಂಪಿಕ್ ಕೌನ್ಸಿಲ್‌ನ ನೂತನ ಅಧ್ಯಕ್ಷರಾಗಿ ಶೇಕ್ ಅಹ್ಮದ್ ಅಲ್-ಫಹದ್ ಅಲ್-ಸಬಾಹ್ ರವರು ಆಯ್ಕೆಯಾಗಿದ್ದಾರೆ. ಇವರು ಯಾವ ದೇಶದವರು?

2 ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ(The Geological Survey of India) ದೇಶದಾದ್ಯಂತ ಎಷ್ಟು ಜಿಪಿಎಸ್ ಕೇಂದ್ರಗಳನ್ನು ಆರಂಭಿಸಿದೆ?

3 ‘ಭಾರತದ ರಾಷ್ಟ್ರೀಯ ದಾಖಲೆಗಳು(NAI-National Archives of India)ದ ನೂತನ ಡಿಜಿ ಆಗಿ ಯಾರು ಆಯ್ಕೆ ಆಗಿದ್ದಾರೆ?

4 ‘New Delhi Declaration on Asian Rhinos 2019’ ಗೆ ಸಹಿ ಹಾಕಿದ ದೇಶಗಳು ಯಾವುವು?

5 ಯಾವ ರಾಜ್ಯ ಸರ್ಕಾರವು ಶಿಕ್ಷಕರಿಗೆ ತರಬೇತಿ ನೀಡಲೆಂದು ‘Notun Disha’ ಕಾರ್ಯಕ್ರಮವನ್ನು ಪ್ರಾರಂಭಿಸಿದೆ?

6 ಹೇಲಾಕಂಡಿ ಜಿಲ್ಲೆಯು ಇತ್ತೀಚೆಗೆ ಸುದ್ದಿಯಲ್ಲಿತ್ತು. ಇದು ಯಾವ ರಾಜ್ಯದಲ್ಲಿದೆ?

7 ‘ಸ್ವಚ್ಛ ಸರ್ವೇಕ್ಷಣ 2019’ ರ ಸ್ವಚ್ಛ ನಗರಿ ಗೌರವ ಮುಡಿಗೇರಿಸಿಕೊಂಡ ನಗರ?

8 ಇತ್ತೀಚೆಗೆ ಪ್ರಚಲಿತದಲ್ಲಿದ್ದ ಬೆರ್ಷೀಟ್ ಬಾಹ್ಯಾಕಾಶ ನೌಕೆ ಯಾವ ದೇಶಕ್ಕೆ ಸಂಬಂಧಿಸಿದ್ದು?

9 ಭಾರತದಲ್ಲಿ ಗ್ರಾಮೀಣ ಜನರ ಆದಾಯ ಹೆಚ್ಚಿಸಲು ಯಾವ ಅಂತರರಾಷ್ಟ್ರೀಯ ಸಂಸ್ಥೆಯು NRETP ಗೆ 250 ಮಿಲಿಯನ್ ಡಾಲರ್ ಸಾಲ ನೀಡಲು ಸಹಿ ಹಾಕಿದೆ?

10 ‘ಅಜಾದಿ ಕೆ ದಿವಾನೆ'(Azaadi ke Diwane Museum) ಮ್ಯೂಸಿಯಂ ಅನ್ನು ಯಾವ ನಗರದಲ್ಲಿ ತೆರೆಯಲಾಗಿದೆ?

11 ‘ಅಜಾದಿ ಕೆ ದಿವಾನೆ'(Azaadi ke Diwane Museum) ಮ್ಯೂಸಿಯಂ ಅನ್ನು ಯಾರು ಉದ್ಘಾಟನೆ ಮಾಡಿದರು?

ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ

1 ಕುವೈತ್

2 22

3 ಪಿ.ವಿ.ರಮೇಶ್

4 ಭಾರತ, ಭೂತಾನ್, ನೇಪಾಳ, ಇಂಡೋನೇಷಿಯಾ, ಮಲೇಷಿಯಾ

5 ತ್ರಿಪುರ

6 ಅಸ್ಸಾಂ

7 ಇಂದೋರ್

8 ಇಸ್ರೇಲ್

9 ವರ್ಲ್ಡ್ ಬ್ಯಾಂಕ್

10 ನವದೆಹಲಿ

11 ಡಾ|| ಮಹೇಶ್ ಶರ್ಮಾ

Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.

You may also like