Home » ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 18

ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 18

by manager manager
March 18 Current affairs in Kannada for competitive exams

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..

ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..

1. ಇತ್ತೀಚೆಗೆ ನಿಧನರಾದ ಮಾತೆ ಮಹಾದೇವಿಯವರು ಯಾವ ಸಮುದಾಯ ಜನರಿಗೆ ಆಧ್ಯಾತ್ಮಿಕ ಗುರುವಾಗಿದ್ದರು?

2. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿನ ವಿವಾದ ಬಗೆಹರಿಸಲು ನೇಮಕಗೊಂಡವರು ಯಾರು?

3. 2019 ಸೈಯದ್ ಮುಸ್ತಾಕ್ ಅಲಿ ಟ್ರೋಪಿ ಗೆದ್ದ ಕ್ರಿಕೆಟ್ ತಂಡ ಯಾವುದು?

4. 2020 ಟೊಕಿಯೊ ಒಲಿಂಪಿಕ್ಸ್‌ ಗೆ ಅರ್ಹತೆ ಪಡೆದ ಇಫ್ರಾನ್ ಕೆಟಿ ಯಾವ ಕ್ರೀಡೆಗೆ ಸಂಬಂಧಿಸಿದವರು?

5. ಭಾರತದ ಮೊದಲ ಸ್ಟೇಟ್-ಆಫ್-ಆರ್ಟ್ 1.3 ಪೆಟಾಫ್ಲಾಫ್ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಸೌಲಭ್ಯವನ್ನು ನಿರ್ಮಿಸಲು C-DAC ಯೊಂದಿಗೆ ಯಾವ ಐಐಟಿ ಸಹಿ ಹಾಕಿದೆ?

6. ಇತ್ತೀಚೆಗೆ ಭೌಗೋಳಿಕ ಸ್ಥಾನ ಪಡೆದ ಕೂರ್ಗ್ ಅರೇಬಿಕಾ ಕರ್ನಾಟಕದ ಯಾವ ಜಿಲ್ಲೆಯಲ್ಲಿ ವಿಶೇಷವಾಗಿ ಬೆಳೆಯಲಾಗುತ್ತದೆ?

7. 2020 ರಲ್ಲಿ U-17 ವಿಶ್ವ ಮಹಿಳಾ ಕಪ್‌ ಅನ್ನು ಯಾವ ದೇಶ ಆಯೋಜಿಸಲಿದೆ?

8. ಬ್ರೆಜಿಲ್ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಬ್ರಿಕ್ಸ್ ಶೆಫ್ರಾ ಸಭೆಯಲ್ಲಿ ಭಾರತವನ್ನು ಮುನ್ನಡೆಸಿದವರು ಯಾರು?

9. ಇತ್ತೀಚೆಗೆ ಸುದ್ದಿಯಾಗಿರುವ ವೆಸ್ಟ್ ನೈಲ್ ಫೀವರ್ ಯಾವುದರಿಂದ ಹರಡುತ್ತದೆ?

10. ಡ್ಯಾರಿಲ್ ಡಿ ಮಾಂಟೆ ಇತ್ತೀಚೆಗೆ ನಿಧನರಾದರು. ಇವರು ಯಾವ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು?

ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ

1. ಲಿಂಗಾಯತ

2. ಪಿ ಎಸ್ ನರಸಿಂಹ

3. ಕರ್ನಾಟಕ

4. ರೇಸಿಂಗ್

5. ಐಐಟಿ ಖಾರಗ್‌ಪುರ್

6. ಕೊಡಗು

7. ಭಾರತ

8. ಟಿ ಎಸ್ ತಿರುಮೂರ್ತಿ

9. ಸೊಳ್ಳೆ

10. ಪತ್ರಿಕೋದ್ಯಮ

Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.

You may also like