Home » ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 16 & 17

ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 16 & 17

by manager manager

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..

ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..

1 ಇತ್ತೀಚೆಗೆ ಜಿಐ ಟ್ಯಾಗ್ ಪಡೆದ ಸಿರ್ಸಿ ಸುಪಾರಿ ಯಾವ ರಾಜ್ಯಕ್ಕೆ ಸಂಬಂಧಿಸಿದ್ದು?

2 ವಿಶ್ವ ಗ್ರಾಹಕ ಹಕ್ಕುಗಳ ದಿನ 2019 ರ ಥೀಮ್ ಏನು?

3 70 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು ವಿಶೇಷ ಚೇತನರಿಗಾಗಿ ಡೋರ್‌ಸ್ಟೆಪ್ ಬ್ಯಾಂಕಿಂಗ್ ಸೇವೆ ಆರಂಭಿಸಿದ ಬ್ಯಾಂಕ್‌ ಯಾವುದು?

4 ಯಾವ ದೂರದರ್ಶಕದ ಮೂಲಕ, ಖಗೋಳ ಶಾಸ್ತ್ರಜ್ಞರು ಭೂಮಿಗಿಂತ 13 ಶತಕೋಟಿ ಬೆಳಕಿನ ವರ್ಷಗಳಿಂದ ದೂರವಿರುವ 83 ಭಾರಿ ಕಪ್ಪು ಕುಳಿಗಳನ್ನು ಪತ್ತೆ ಹಚ್ಚಿದ್ದಾರೆ?

5 ಮರ್ಸರ್ 2019 ಜೀವನ ಗುಣಮಟ್ಟ ಸೂಚ್ಯಂಕದಲ್ಲಿ ಮೊದಲ ಸ್ಥಾನಗಳಿಸಿರುವ ನಗರ ಯಾವುದು?

6 ಏಷ್ಯಾ ವಿಭಾಗದಲ್ಲಿ 2019 ಕಾಮನ್‌ವೆಲ್ತ್ ಯೂತ್ ಪ್ರಶಸ್ತಿಯನ್ನು ಯಾವ ಭಾರತೀಯ ಉದ್ಯಮಿಗೆ ನೀಡಿ ಗೌರವಿಸಲಾಗಿದೆ?

7 2019 ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಆಗಿರುವ ಪರಿಸರವಾದಿ ಗ್ರೇಟಾ ಥನ್ಭರ್ಗ್ ಯಾವ ದೇಶದವರು?

8 ಆಲ್‌ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ 2019 ರಲ್ಲಿ ಪುರುಷ ಸಿಂಗಲ್ಸ್ ಪ್ರಶಸ್ತಿಯನ್ನು ಯಾರು ಗೆದ್ದರು?

9 ಇನ್ನೋವೇಶನ್ ಮತ್ತು ವಾಣಿಜ್ಯೋದ್ಯಮದ ಉತ್ಸವ(Fine-2019) ಎಲ್ಲಿ ಆರಂಭಗೊಂಡಿದೆ?

10 ಆಫ್ರಿಕಾ-ಭಾರತ ಜಂಟಿ ತರಬೇತಿ ಕಾರ್ಯಾಚರಣೆ(AFINDEX-19) ಅನ್ನು ಎಲ್ಲಿ ಆಯೋಜಿಸಲಾಗಿದೆ?

ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ

1 ಕರ್ನಾಟಕ

2 ನಂಬಿಕಾರ್ಹ ಸ್ಮಾರ್ಟ್‌ ಉತ್ಪನ್ನಗಳು

3 ಎಸ್‌ಬಿಐ

4 ಸುಬಾರು(Subaru)

5 ವಿಯೆನ್ನಾ

6 ಪದ್ಮನಾಭನ್ ಗೋಪಾಲ

7 ಸ್ವೀಡೆನ್

8 ಕೆಂಟೊ ಮೊಮೊಟಾ

9 ಗಾಂಧಿನಗರ

10 ಪುಣೆ

Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.

You may also like