Home » ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 14

ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 14

by manager manager

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..

ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..

1 ಭಾರತೀಯ ಯಾವ ಕ್ರೀಡಾಪಟು ಬಾರ್ಬೀ ರೋಲ್ ಮಾಡೆಲ್‌ ಗೆ ಆಯ್ಕೆ ಅಗಿದ್ದಾರೆ?

2 SIPRI ಯ ‘ಟ್ರೆಂಡ್ಸ್‌ ಇನ್ ಇಂಟರ್‌ನ್ಯಾಷನಲ್ ಆರ್ಮ್ಸ್ ಟ್ರ್ಯಾನ್ಸ್‌ಫರ್-2018’ ವರದಿ ಪ್ರಕಾರ 2014-18 ನೇ ಅವಧಿಯಲ್ಲಿ ಹೆಚ್ಚು ಶಸ್ತ್ರಾಸ್ತ್ರ ಆಮದುದಾರ ದೇಶ ಯಾವುದು?

3 ‘ಗ್ಲೋಬಲ್ ಕ್ಲಸ್ಟರ್ ಎನ್‌ಜಿಸಿ 2808’ ನಲ್ಲಿ ಹೊಸ ನಕ್ಷತ್ರಗಳ ಗುಂಪನ್ನು ಗುರುತಿಸಲು ಭಾರತೀಯ ಖಗೋಳಶಾಸ್ತ್ರಜ್ಞರು ಯಾವ ಬಾಹ್ಯಾಕಾಶ ವೀಕ್ಷಣಾಲಯವನ್ನು ಬಳಸಿಕೊಂಡರು?

4 2018 ಯಶವಂತರಾವ್ ಚೌವಾಣ್ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಭಾರತೀಯ ಆರ್ಥಶಾಸ್ತ್ರಜ್ಞ ಯಾರು?

5 ನೂತನ ‘ಜಾಗತಿಕ ಶೀತಜ್ವರ ತಂತ್ರ’ವನ್ನು(Global Influenza Strategy) ವಿಶ್ವ ಆರೋಗ್ಯ ಸಂಸ್ಥೆ ಯಾವ ಅವಧಿಗೆ ಆರಂಭಿಸಿದೆ?

6 ಭಾರತದ ಮೊದಲ LGBTQ ಕ್ಲಿನಿಕ್ ಮತ್ತು ಎಚ್‌ಐವಿ ಚಿಕಿತ್ಸೆ ಕೇಂದ್ರ ಯಾವ ನಗರದಲ್ಲಿ ಉದ್ಘಾಟನೆಗೊಂಡಿದೆ?

7 ‘ಕುಸುಮಗ್ರಜ್ ಸಾಹಿತ್ಯ ಪುರಸ್ಕಾರ’ ಸ್ವೀಕರಿಸಿದವರು ಯಾರು?

8 ವಿಶ್ವ ಚಿನ್ನ ಮಂಡಳಿ(WGC) ಲೇಟೆಸ್ಟ್ ವರದಿ ಪ್ರಕಾರ ಚಿನ್ನ ಹೊಂದಿರುವವರ ಪೈಕಿ ಭಾರತದ ಶ್ರೇಯಾಂಕ ಎಷ್ಟು?

9 ನೈಸ್ ಅಗ್ರಿಮೆಂಟ್ ಇತ್ತೀಚೆಗೆ ಸುದ್ದಿಯಲ್ಲಿತ್ತು. ಇದು ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?

10 ಭಾರತ- ಆಫ್ರಿಕ ಯೋಜನೆಯ ಪಾಲುದಾರಿಕೆಯ 14ನೇ CII-EXIM ಬ್ಯಾಂಕ್‌ ಸಭೆಯ ಆಯೋಜನೆ ಹೊಣೆಯನ್ನು ಯಾವ ಕೇಂದ್ರೀಯ ಸಚಿವಾಲಯ ಹೊತ್ತಿದೆ?

ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಕೆಳಗಿನಂತಿವೆ

1 ದೀಪಾ ಕರ್ಮಾಕರ್

2 ಸೌಧಿ ಅರೇಬಿಯಾ

3 Astrosat

4 ರಘುರಾಂ ರಾಜನ್

5 2019-2030

6 ಮುಂಬೈ

7 ವೆಡ್ ರಹಿ

8 11ನೇ ಶ್ರೇಯಾಂಕ

9 ಇಂಟೆಲೆಕ್ಚುವಲ್ ಪ್ರಾಪರ್ಟಿ

10 ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ

Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.

You may also like