Home » ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 13

ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 13

by manager manager

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..

ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..

1 ‘ಆಹಾರ್ 2019- ದಿ ಇಂಟರ್‌ನ್ಯಾಷನಲ್ ಫುಡ್ ಅಂಡ್ ಹಾಸ್ಪಿಟಾಲಿಟಿ ಫೇರ್’ 34ನೇ ಆವೃತ್ತಿಯನ್ನು ಯಾವ ದೇಶ ಆಯೋಜಿಸಿದೆ?

2 ಇತ್ತೀಚೆಗೆ ನಿಧನರಾದ ವಿನೋದ್ ಕಶ್ಯಪ್ ಯಾವ ಕ್ಷೇತ್ರದ ಹಿರಿಯ ವ್ಯಕ್ತಿ?

3 2019 ರ SAFF Women’s ಚಾಂಪಿಯನ್‌ಶಿಪ್ ಅನ್ನು ಯಾವ ದೇಶ ಆಯೋಜಿಸಲಿದೆ?

4 ಯಾವ ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳಿಗೆ(OBCs) ಶೇ.27 ಮೀಸಲಾತಿ ನೀಡಿದೆ?

5 ರಾಷ್ಟ್ರೀಯ ಅಪರಾಧ ದಾಖಲಾತಿಗಳ ಸಂಸ್ಥೆ(NCRB) ಕೇಂದ್ರ ಸರ್ಕಾರದ ಯಾವ ಸಚಿವಾಲಯದಡಿ ಕೆಲಸ ನಿರ್ವಹಿಸುತ್ತದೆ?

6 ಇತ್ತೀಚೆಗೆ ಸುದ್ದಿಯಲ್ಲಿದ್ದ ರೊಬೋಟಿಕ್ ಬಾಹ್ಯಾಕಾಶ ನೌಕೆ ‘ಲೂನಾರ್ ರಿಕಾನ್ನೈಸನ್ಸ್ ಆರ್ಬಿಟರ್(Lunar Reconnaissance Orbiter-LRO)’ ಯಾವ ಬಾಹ್ಯಾಕಾಶ ಸಂಸ್ಥೆಯದ್ದು?

7 ದೇಹದಲ್ಲಿನ ಸಣ್ಣ ಗಡ್ಡೆ ಕಂಡುಹಿಡಿಯಲು ಆಪ್ಟಿಕಲ್ ಇಮೇಜಿಂಗ್ ಸಿಸ್ಟಮ್ ‘DOLPHIN’ ಅನ್ನು ಯಾವ ಸಂಸ್ಥೆಯ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ?

8 ಮಧ್ಯ ಪ್ರದೇಶದ ‘ಮಾ ನರ್ಮದಾ, ಮಾ ಕ್ಷಿಪ್ರ ಈವಂ ಮಾ ಮಂದಾಕಿನಿ ನದಿ ಟ್ರಸ್ಟ್’ ನ ಅಧ್ಯಕ್ಷರಾಗಿ ಯಾರು ನೇಮಕಗೊಂಡರು?

9 2019 ವಿಶ್ವ ಕಿಡ್ನಿ ದಿನ’ದ ಥೀಮ್ ಏನು?

10 ಇತ್ತೀಚೆಗೆ ಪ್ರಚಲಿತದಲ್ಲಿದ್ದ ‘ಪಿನಾಕಾ ಗೈಡೆಡ್ ವೆಪನ್ ರಾಕೆಟ್ ಸಿಸ್ಟಮ್’ ಯಾವ ಸಂಸ್ಥೆಯಿಂದ ಅಭಿವೃದ್ಧಿಗೊಂಡಿದೆ?

ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ

1 ಭಾರತ

2 ಪತ್ರಿಕೋಧ್ಯಮ

3 ನೇಪಾಳ

4 ಮಧ್ಯ ಪ್ರದೇಶ

5 ಗೃಹ ಸಚಿವಾಲಯ

6 ನಾಸಾ

7 ಮೆಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

8 ನಾಮ್‌ದೇವ್ ತ್ಯಾಗಿ

9 ಕಿಡ್ನಿಯ ಆರೋಗ್ಯ ಎಲ್ಲರಿಗಾಗಿ ಎಲ್ಲಾ ಕಡೆಯೂ

10 DRDO

Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.

You may also like