Home » ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 1

ಪ್ರಮುಖ ಪ್ರಚಲಿತ ವಿದ್ಯಮಾನಗಳು: ಮಾರ್ಚ್ 1

by manager manager

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..

ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..

1 ಬಕಿಂಗ್ಹ್ಯಾಮ್ ಪ್ಯಾಲೇಸ್ ನಲ್ಲಿ ನೈಟ್‌ಹುಡ್ (Knighthood) ಪ್ರಶಸ್ತಿ ಪಡೆದ ಕ್ರಿಕೆಟಿಗ ಯಾರು?

2 ಕೇಂದ್ರ ಮಾನವ ಸಂಪನ್ಮೂಲ ಅಭಿವೃಧ್ದಿ ಸಚಿವಾಲಯವು ಇಂಡಸ್ಟ್ರಿ ಅಪ್ರೆಂಟೀಸ್ ಅವಕಾಶ ನೀಡಲು ಪ್ರಾರಂಭಿಸಿದ ಯೋಜನೆಯ ಹೆಸರೇನು?

3 ‘ಚಾಗೊಸ್ ದ್ವೀಪಗಳು'(Chagos Islands) ಇತ್ತೀಚೆಗೆ ಸುದ್ದಿಯಲ್ಲಿದ್ದವು. ಇದು ಯಾವ ಎರಡು ರಾಷ್ಟ್ರಗಳ ನಡುವಿನ ವಿವಾದಕ್ಕೆ ಕಾರಣವಾಗಿದೆ?

4 ಫೇಸ್‌ಬುಕ್ ಬಹುಪಾಲು ಅಂತರ್ಜಾಲ ಸೂಚ್ಯಂಕ(3i) 2019 ರಲ್ಲಿ ಭಾರತದ ಶ್ರೇಯಾಂಕ ಏನು?

5 2019 ರ ಮೆಟಾ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಸ್ವೀಕರಿಸಿದವರು ಯಾರು?

6 Tಟ್ವೆಂಟಿ’ಯಲ್ಲಿ ಮೊದಲ ಬಾರಿಗೆ 8 ಸಾವಿರ ರನ್‌ ಗಳಿಸಿದ ಭಾರತೀಯ ಕ್ರಿಕೆಟಿಗ ಯಾರು?

7 ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಪ್ ಡಿಸೈನ್( The National Institute of Design) ಇತ್ತೀಚೆಗೆ ಯಾವ ನಗರದಲ್ಲಿ ಉದ್ಘಾಟಿಸಲ್ಪಟ್ಟಿತು?

8 ‘ನ್ಯಾಷನಲ್ ಫಾರ್ಮಸೆಟಿಕಲ್ ಪ್ರೈಸಿಂಗ್ ಅಥಾರಿಟಿ'(NPPA) ಪ್ರಧಾನ ಕಾರ್ಯಾಲಯ ಎಲ್ಲಿದೆ?

9 2019 ರ ರಾಷ್ಟ್ರೀಯ ವಿಜ್ಞಾನ ದಿನ(NSD) ದ ಥೀಮ್ ಏನು?

10 ರಾಷ್ಟ್ರೀಯ ಪುಸ್ತಕ ಪ್ರಾಧಿಕಾರದ(NBT) ನೂತನ ಅಧ್ಯಕ್ಷರಾಗಿ ಯಾರು ನೇಮಕ ಗೊಂಡಿದ್ದಾರೆ?

ಮೇಲಿನ ಪ್ರಶ್ನೆಗಳಿಗೆ ಉತ್ತರಗಳು

1 ಅಲಸ್ಟೈರ್ ಕುಕ್

2 ಶ್ರೇಯಸ್

3 ಬ್ರಿಟನ್ ಮತ್ತು ಮಾರೀಷಿಯಸ್

4 47ನೇ

5 ಮಹೇಶ್ ಎಲ್ಕುಂಚ್‌ವಾರ್

6 ಸುರೇಶ್ ರೈನಾ

7 ಭೂಪಾಲ್ ಮತ್ತು ಜೋರ್ಹಟ್

8 ನವದೆಹಲಿ

9 ‘ಮಾನವರಿಗಾಗಿ ವಿಜ್ಞಾನ ಮತ್ತು ವಿಜ್ಞಾನಕ್ಕಾಗಿ ಮಾನವರು'(Science for the people and People for the Science)

10 ಗೋವಿಂದ್ ಪ್ರಸಾದ್ ಶರ್ಮ

You may also like