Home » ಕನ್ನಡ ರಾಜ್ಯೋತ್ಸವ ಪ್ರಯುಕ್ತ ಬಿಂಡಹಳ್ಳಿಯಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಬಿಂಡಹಳ್ಳಿಯಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ

by manager manager

ಪಾಂಡವಪುರ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ತಾಲ್ಲೂಕಿನ ಚಿನಕುರಳಿ ಹೋಬಳಿಯ ಬಿಂಡಹಳ್ಳಿ ಗ್ರಾಮದಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ‘ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ’ಯನ್ನು ಏರ್ಪಡಿಸಲಾಗಿದೆ.

ಬಿಂಡಹಳ್ಳಿ ಯುವಕರ ಬಳಗವು ಒಗ್ಗಟ್ಟಿನಿಂದ ಈ ಕ್ರೀಡಾ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು, ದಿನಾಂಕ 09-11-2019 ರಂದು (ಶನಿವಾರ) ರಾತ್ರಿ 8 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ದಿನಾಂಕ 10-11-2019 ರಿಂದ ನೋಂದಣಿ ಪಡೆದ ತಂಡಗಳಿಗೆ ಪಂದ್ಯಾವಳಿ ನಡೆಯಲಿವೆ.

ವಿಶೇಷ ಸೂಚನೆ: ಈ ಗ್ರಾಮದಲ್ಲಿ ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ಎಲ್ಲಾ ರೀತಿಯ ಮಾರ್ಗಗಳನ್ನು ಅನುಸರಿಸುತ್ತಿದ್ದು, ಪಂದ್ಯಾವಳಿಗೆ ಬರುವ, ನೋಡಲು ಬರುವ ಯಾರೇ ಆದರು ಪ್ಲಾಸ್ಟಿಕ್‌ ವಸ್ತುಗಳನ್ನು(ವಾಟರ್ ಬಾಟಲ್, ಸ್ನ್ಯಾಕ್ಸ್‌ ಪ್ಯಾಕೆಟ್‌, ಇತರೆ ಕವರ್‌ಗಳು) ಎಲ್ಲೆಂದರಲ್ಲಿ ಬೀಸಾಡುವ ಹಾಗಿಲ್ಲ. ಹಾಗೂ ಸ್ವಯಂ ಜಾಗೃತೆಯಿಂದ ಪ್ಲಾಸ್ಟಿಕ್‌ ವಸ್ತುಗಳ ಬಳಕೆಯನ್ನು ದಯವಿಟ್ಟು ಆದಷ್ಟು ತ್ಯಜಿಸಬೇಕಾಗಿದೆ.

ಪ್ರಥಮ ಬಹುಮಾನ : ರೂ.10,000.

ದ್ವಿತೀಯ ಬಹುಮಾನ: ರೂ.7,000.

ತೃತೀಯ ಬಹುಮಾನ: ರೂ.5,000.

ನಾಲ್ಕನೇ ಬಹುಮಾನ : 3,000.

ಪಂದ್ಯಾವಳಿಯ ಕಡ್ಡಾಯ ನಿಯಮಗಳು

– ಒಂದು ತಂಡದಲ್ಲಿ ಆಡಿದ ಆಟಗಾರರು ಮತ್ತೊಂದು ತಂಡದಲ್ಲಿ ಆಡುವಂತಿಲ್ಲ.

– ಒಂದೇ ಗ್ರಾಮದ ಆಟಗಾರರಾಗಿರಬೇಕು. ಆಧಾರ್ ಕಾರ್ಡ್ ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ.

– ಅಸಭ್ಯವಾಗಿ ವರ್ತಿಸಿದ ತಂಡವನ್ನು ಪಂದ್ಯಾವಳಿಯಿಂದ ಹೊರ ಹಾಕಲಾಗುತ್ತದೆ.

– ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ.

– ಪ್ರೋ ಮಾದರಿಯಲ್ಲಿ ಪಂದ್ಯ ನಡೆಸಲಾಗುತ್ತದೆ.

ಪ್ರತಿ ತಂಡಕ್ಕೆ ಪ್ರವೇಶ ಶುಲ್ಕ : ರೂ.555.

ಸೌಲಭ್ಯ: ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಇರುತ್ತದೆ.

ಸಂಪರ್ಕಕ್ಕಾಗಿ

ಚಿನ್ನ : 9164238706

ರಾಕೇಶ : 7619469423

ಗುರುರಾಜ: 9743682269

ಜಗ: 9741646706

ಸುನಿಲ್ : 9535102026

ಗ್ರಾಮೀಣ ಕ್ರೀಡೆಗಳು ಗ್ರಾಮೀಣ ಭಾಗದಲ್ಲಿ ಕಣ್ಮರೆ ಆಗುತ್ತಿದ್ದು, ಇಂತಹ ಪಂದ್ಯಾವಳಿಗಳು ಆಗಾಗ ನಡೆಯಬೇಕಿದೆ. ಇದರಿಂದ ಮಕ್ಕಳು ಸಹ ಸಾಧನೆ ಎಂದರೇ ಕೇವಲ ಓದುವುದು, ನೂರಕ್ಕೆ ನೂರು ಅಂಕಗಳನ್ನು ಗಳಿಸುವುದು ಮಾತ್ರವಲ್ಲ. ಕ್ರೀಡೆಯಲ್ಲೂ ಸಾಧನೆ ಮಾಡಬಹುದು ಎಂಬ ಜಾಗೃತಿ ಗ್ರಾಮೀಣ ಮಕ್ಕಳಿಗೂ ಅರಿವು ಮೂಡುತ್ತದೆ.

You may also like