Home » ಬೈಕ್ – ಟಿಪ್ಪರ್ ಮುಖಾಮುಖಿ ಡಿಕ್ಕಿ: ಬಿಂಡಹಳ್ಳಿ ವ್ಯಕ್ತಿ ಸಾವು

ಬೈಕ್ – ಟಿಪ್ಪರ್ ಮುಖಾಮುಖಿ ಡಿಕ್ಕಿ: ಬಿಂಡಹಳ್ಳಿ ವ್ಯಕ್ತಿ ಸಾವು

by manager manager

ಮಂಡ್ಯ: ಬೈಕ್ ಮತ್ತು ಟಿಪ್ಪರ್(tipper ) ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಬಸ್ತಿಹಳ್ಳಿ ಬಾರೆ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ತಾಲ್ಲೂಕಿನ ಬಿಂಡಹಳ್ಳಿ ಗ್ರಾಮದ ಪ್ರಕಾಶ್(54) ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಬೈಕ್ ಸವಾರನ ಹಿಂದೆ ಕುಳಿತಿದ್ದ ಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮುಂಜಾನೆ 6:45ರಲ್ಲಿ ಈ ಅವಗಡ ನಡೆದಿದ್ದು, ದಂಪತಿ ನಂಜನಗೂಡು ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಬೈಕ್ – ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದು. ಈ ಸಂಬಂಧ ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The bike collided with a tipper lorry and a bike rider died on the spot. Prakash (50), a resident of Bindalli village, died at the spot.

You may also like