Home » ಮೈಸೂರು ಸುತ್ತಲಿನ ಪ್ರವಾಸಿ ತಾಣಗಳ ಪಟ್ಟಿಗೆ ಮತ್ತೊಂದು ಮನಮೋಹಕ ಸ್ಥಳ ಸೇರ್ಪಡೆ – ಹೆಸರು ‘ಜಲ್‌ ಬಾಗ್’

ಮೈಸೂರು ಸುತ್ತಲಿನ ಪ್ರವಾಸಿ ತಾಣಗಳ ಪಟ್ಟಿಗೆ ಮತ್ತೊಂದು ಮನಮೋಹಕ ಸ್ಥಳ ಸೇರ್ಪಡೆ – ಹೆಸರು ‘ಜಲ್‌ ಬಾಗ್’

by manager manager

ಮೈಸೂರು ಸುತ್ತಲಿನ ಪ್ರವಾಸಿ ತಾಣಗಳು ಎಷ್ಟೇ ಬಾರಿ ನೋಡಿದರೂ ಸಹ ಮತ್ತೆ ಮತ್ತೆ ಕೈ ಬೀಸಿ ಕರೆಯುವ, ಕಣ್ಮನ ಸೆಳೆಯುವ ತಾಜಾ ನೈಸರ್ಗಿಕ ವಾತಾವರಣವನ್ನು ಹೊಂದಿವೆ. ಈಗ ಈ ಮನಮೋಹಕ ತಾಣಗಳ ಪಟ್ಟಿಗೆ ಮತ್ತೊಂದು ನಯನ ಮನೋಹರ ಸ್ಥಳವು ಮೈಸೂರಿನ ಸಮೀಪದಲ್ಲೇ ಸಿದ್ದಗೊಂಡಿದೆ. ಅದೇ ವಿದೇಶಿ ಕಲೆಗಳ ಸಂಗಮದಂತೆ ನಿರ್ಮಾಣ ಗೊಂಡಿರುವ ‘ಜಲ್ ಬಾಗ್'(“Jalbagh -World’s first reflection Art Garden).

ಸುತ್ತಲೂ ಹಚ್ಚ ಹಸಿರಿನಿಂದ ಬೆಳೆದು ನಿಂತ ಭತ್ತದ ಗದ್ದೆ. ಆ ಸಮೃದ್ದ ಬೆಳೆಯ ಮಧ್ಯದಲ್ಲೇ ಎಲ್ಲಾ ಬಗೆಯ ಪಕ್ಷಿಗಳನ್ನು ಕೈ ಬೀಸಿ ಕರೆಯುವಂತ ಪರಿಸರ ಸ್ನೇಹಿ ಬೃಂದಾವನದಂತೆ ನಿರ್ಮಾಣವಾಗಿದೆ ‘ಜಲ್‌ ಬಾಗ್’. ‘ಜಲ್‌ ಬಾಗ್'(Jalbagh) ವಿಶ್ವದ ಮೊಟ್ಟ ಮೊದಲ ಬೆಳಕು ಪ್ರತಿಫಲನ ಕಲೆಗಳನ್ನು ಹೊಂದಿದ ಪರಿಸರ ಸ್ನೇಹಿ ಗಾರ್ಡನ್. ಮೈಸೂರು ಮತ್ತು ಕೆಆರ್‌ಎಸ್‌(ಕೃಷ್ಣರಾಜ ಸಾಗರ) ಮುಖ್ಯ ರಸ್ತೆಯಲ್ಲಿ ಇರುವ, ಮೈಸೂರಿನಿಂದ ಸುಮಾರು 10 ಕಿಲೋ ಮೀಟರ್ ಸಮೀಪದಲ್ಲಿಯ ಬೆಳಗೊಳ ಗ್ರಾಮದ ಸಮೀಪದಲ್ಲಿದೆ. ಮೈಸೂರಿನಿಂದ ಹೊರಡುವ ಪ್ರವಾಸಿಗರು ಬೆಳಗೊಳ ಗ್ರಾಮ ಇನ್ನೂ 100 ಮೀಟರ್ ಇದೆ ಎಂಬಂತೆಯೇ ‘ಜಲ್‌ ಬಾಗ್’ ಅನ್ನು ತಮ್ಮ ಎಡಭಾಗದಲ್ಲಿಯೇ ಕಾಣಬಹುದು.

collageJalbagh World’s first reflection Art Garden

ಅಂದಹಾಗೆ ಈ ‘ಜಲ್ ಬಾಗ್’ ಅನ್ನು ತಮ್ಮ ಕೈಯಾರೆ ನಿರ್ಮಾಣ ಮಾಡಿರುವವರು ಬೇರೆ ಯಾರು ಅಲ್ಲ… ! ತಮ್ಮ ಮರಳು ಶಿಲ್ಪ ಕಲೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ, ಮೈಸೂರಿನವರೇ ಆದ ಮರಳು ಶಿಲ್ಪಕಲಾವಿದೆ ಎಂ ಎನ್ ಗೌರಿ(Gowri M N). ಗೌರಿ ರವರು ‘ಜಲ್ ಬಾಗ್’ ಎಂಬ ವಿಶ್ವದ ಅಪರೂಪದ ಬೆಳಕು ಪ್ರತಿಫಲನ ಕಲೆಗಳ ಬೀಡನ್ನು, ಸಂಪೂರ್ಣವಾಗಿ ಪರಿಸರ ಸಂರಕ್ಷಣೆಯ ಪರಿಕಲ್ಪನೆಯೊಂದಿಗೆ ವಿದೇಶಗಳಲ್ಲಿರುವ ಅನೇಕ ಕಲೆಗಳನ್ನು ತಮ್ಮ ಕೈಯಾರೆ ರಚಿಸಿ ಸುಂದರಮಯಗೊಳಿಸಿದ್ದಾರೆ.

Jalbagh Worlds first reflection Art Garden

‘ಜಲ್‌ ಬಾಗ್‌’ ನಲ್ಲಿ ಯಾವೆಲ್ಲಾ ಮನಮೋಹಕ ಕಲೆಗಳಿವೆ?

ಸದಾ ನೀರಿನ ವ್ಯವಸ್ಥೆ ಹೊಂದಿರುವ 3 ಎಕರೆ ಪ್ರದೇಶದಲ್ಲಿ ಗೌರಿಯವರು ತ್ಯಾಜ್ಯವಸ್ತುಗಳು, ನಿರುಪಯುಕ್ತ ಪ್ಲಾಸ್ಟಿಕ್, ಹಗ್ಗ, ಗಾಜು, ರೇಡಿಯಂ ಮತ್ತು ಇನ್ನು ಮುಂತಾದ ವಸ್ತುಗಳಿಂದ ಹಲವು ಕಲಾಕೃತಿಗಳನ್ನು ‘ಜಲ್‌ ಬಾಗ್’ ಗಾರ್ಡನ್ ನಲ್ಲಿ ನಿರ್ಮಾಣ ಮಾಡಿದ್ದಾರೆ.

Jalbagh Worlds first reflection Art Garden

‘ಜಲ್‌ ಬಾಗ್’ ಹಸಿರು ಪಾರ್ಕ್‌ ಒಳಗಡೆ ಕಾಲಿಡುತ್ತಿದಂತೆ ಬಿದಿರು ಬೊಂಬುಗಳು, ಲಂಬಾಕಾರವಾಗಿ ಜೋಡಿಸಿರುವ ಹೂ ಕುಂಡಗಳಿಂದ ನಿರ್ಮಾಣವಾಗಿರುವ ಅರಮನೆಯ ಪ್ರತಿರೂಪ ಎದುರಾಗುತ್ತದೆ. ಇದನ್ನು ಮನಮೋಹಕವಾಗಿ ಕಣ್ತುಂಬಿಕೊಳ್ಳಲು ಇಲ್ಲಿಗೆ ಬಂದವರು ಕಡ್ಡಾಯವಾಗಿ ಕತ್ತಲಾಗುವವರೆಗೆ ಇರಲೇಬೇಕು. ಇಷ್ಟೇ ಅಲ್ಲದೇ ಕನ್ನಂಬಾಡಿ ಕಟ್ಟೆ, ಮೀನು, ನವಿಲು, ಚಿಟ್ಟೆಯ ಕಲಾಕೃತಿ, ಕಬ್ಬಿಣದ ಜಾಲರಿಯಿಂದ ತಯಾರಾದ ಕಾಳಿಂಗ ಸರ್ಪ, ಪ್ಲಾಸ್ಟಿಕ್ ನಿಂದ ತಯಾರಾದ ಟೀ ಕೆಟೆಲ್, ರೋಮ್ ದೇಶದ ಟೋಪಿಯರಿ ಕಲೆಯ ಲುಡೋ ಡೈಸ್, ಹಗ್ಗದಿಂದ ಆಮೆ, ಗಾಳದಿಂದ ಮೀನು ಗೌರಿ ಯವರ ಕೈ ಮಹಿಮೆಯಿಂದ ನಿರ್ಮಾಣಗೊಂಡಿವೆ.

Jalbagh Worlds first reflection Art Garden

ಇನ್ನೂ ಗಾಜು ಮತ್ತು ರೇಡಿಯಂಗಳಿಂದ ತಯಾರಾದ ಮರ-ನದಿ ಉಳಿಸಿ ಪರಿಕಲ್ಪನೆ ಹೊತ್ತ ಕಲಾಕೃತಿಗಳು ಹೆಚ್ಚು ಗಮನ ಸೆಳೆಯುತ್ತವೆ. ಈ ಎಲ್ಲಾ ಕಲೆಗಳ ಪ್ರತಿಬಿಂಬ ಮೂಡಲು ನೀರಿನ ಹೊಂಡಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ ‘ಜಲ್ ಬಾಗ್’ನಲ್ಲಿ ಹಗಲು ಒಂದು ಲೋಕ, ರಾತ್ರಿ ವೇಳೆ ಮತ್ತೊಂದು ಲೋಕ ಮೂಡುತ್ತದೆ.

Jalbagh Worlds first reflection Art Garden

ಇಡೀ ದಿನ ಕಳೆಯಬಹುದು ಹಾಗೂ ಮಕ್ಕಳು ಆಟವಾಡಲು ಹಲವು ಗೇಮ್‌ಗಳು ಇವೆ

ಈ ಸುಂದರ ಉದ್ಯಾವನದಲ್ಲಿ ವಾಟರ್ ಗೇಮ್ಸ್, ಬರ್ಡ್ಸ್ & ಬಟರ್‌ಫ್ಲೈ ವಾಚಿಂಗ್, ಫಿಶ್‌ ಫೀಡಿಂಗ್ ರಿಫ್ರೆಶ್‌ಮೆಂಟ್, ದೇಶಿ ಗೇಮ್ಸ್ ಎಲ್ಲಾ ವಿಶೇಷತೆಗಳು ಇವೆ. ಅಲ್ಲದೇ ಇಲ್ಲಿನ ವಾತಾವರಣವು ಹಲವು ಬಗೆಯ ಪಕ್ಷಿಗಳಿಗೆ ಆಕರ್ಷಣೀಯವಾಗಿದ್ದು ಭೇಟಿ ನೀಡುತ್ತವೆ. ಗುಲಾಬಿ ಹೂತೋಟವನ್ನು ಇಲ್ಲಿ ನಿರ್ಮಾಣಮಾಡಲಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ತಂಪು ತಂಗಾಳಿಯಲ್ಲಿ ಓಡಾಡುತ್ತಾ, ಕಲಾಕೃತಿಗಳ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ ಆರಾಮದಾಯವಾಗಿ ದಿನವಿಡೀ ‘ಜಲ್‌ ಬಾಗ್(“Jalbagh -World’s first reflection Art Garden)’ ನಲ್ಲಿ ಸಮಯ ಕಳೆಯಬಹುದು.

ಮೈಸೂರಿನಿಂದ ‘ಜಲ್‌ ಬಾಗ್‌’ ಗೆ ಹೋಗುವುದು ಹೇಗೆ?

– ಮೈಸೂರಿನಿಂದ ವೈಯಕ್ತಿಕ ಮತ್ತು ಖಾಸಗಿ ವಾಹನಗಳ್ಲಿ ಹೋಗುವವರು ಗೂಗಲ್ ಮ್ಯಾಪ್ ಬಳಸಿ ಅಥವಾ ಕೆಆರ್‌ಎಸ್‌-ಮೈಸೂರು ಮುಖ್ಯ ರಸ್ತೆಯಲ್ಲಿ ತಾವೆ ಗುರುತಿಸಿ ಭೇಟಿ ನೀಡಬಹುದು.

– ಸರ್ಕಾರಿ ಬಸ್ಸಿನಲ್ಲಿ ಹೋಗುವವರು ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಬಸ್ ನಂಬರ್ 303 ಕ್ಕೆ ಏರಿ ಹೋಗಬೇಕು.

– ಇನ್ನೂ ಹೆಚ್ಚಿನ ಮಾಹಿತಿಗೆ ಕನ್ನಡ ಅಡ್ವೈಜರ್ ಫೇಸ್‌ಬುಕ್‌ ಪೇಜ್ ಲೈಕ್ ಮಾಡಿ ಮೆಸೇಜ್ ಮುಖಾಂತರ ಮಾಹಿತಿ ಪಡೆಯಬಹುದು.

Jalbagh is the World’s first reflection Art Garden situated on the KRS main road at Belagola. The area is located surrounding within a stretch of lush green paddy fields. And beautifuly landscaped with many created water bodies which reflects diffrent Artwork Created with diffrent effect during Day & Night.

You may also like