Home » ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ ಮೈಸೂರಿನಲ್ಲಿ ಯಾವ್ಯಾವ ಕಾಲೇಜಿನಲ್ಲಿದೆ?

ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ ಮೈಸೂರಿನಲ್ಲಿ ಯಾವ್ಯಾವ ಕಾಲೇಜಿನಲ್ಲಿದೆ?

by manager manager

ನಿರುದ್ಯೋಗ ಎಂಬುದು ಇಂದಿನ ಸಮಸ್ಯೆಯಲ್ಲ. ದಶಕಗಳ ಕಾಲದಿಂದಲೂ ಬಗೆಹರಿಸಲಾಗದ ಸಮಸ್ಯೆ. ಯುವ ಪೀಳಿಗೆಯ ಬಹುಸಂಖ್ಯಾತ ಪ್ರಜೆಗಳು ಇಂದು ಒಂದು ಪದವಿ ಮುಗಿಸಿ ಅದೇ ಪದವಿ ಆಧಾರದ ಮೇಲೆ ಉದ್ಯೋಗ ಮಾಡುವು ಬದಲು, ಹಲವು ಪದವಿಗಳನ್ನು ಓದುವುದು, ಡಿಪ್ಲೊಮೊ ಪದವಿಗಳನ್ನು ಓದುವ ಚಟುವಟಿಕೆಗಳು ಹೆಚ್ಚಾಗಿವೆ. ಅದಕ್ಕೆ ಕಾರಣ ಅವರು ಓದಿದ ಪದವಿಗೆ ಸರಿಯಾದ ಕೆಲಸ ಗಿಟ್ಟಿಸಿಕೊಳ್ಳಲು ಫೇಲ್‌ ಆಗಿದ್ದೋ, ಈ ವ್ಯವಸ್ಥೆಯೋ, ಅಥವಾ ಅವರ ಅತೃಪ್ತಿಯೋ ಕಾರಣವಾಗಿರಬಹುದು.

ದೇಶ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದಂತೆ ಹೊಸ ಹೊಸ ಉದ್ಯೋಗಾವಕಾಶಗಳು ಇಂದು ತೆರೆದುಕೊಳ್ಳುತ್ತಿವೆ. ಅವುಗಳಲ್ಲಿ ಹೋಟೆಲ್‌ ಮ್ಯಾನೇಜ್‌ಮೆಂಟ್ ಕೋರ್ಸ್‌ ಸಹ ಒಂದು. ಹೋಟೆಲ್‌ ಮ್ಯಾನೇಜ್‌ಮೆಂಟ್ ಶಿಕ್ಷಣ ಪಡೆದವರಿಗೆ ಬೇಡಿಕೆಯೂ ಹೆಚ್ಚಿದೆ, ಹಾಗೆ ಆರಂಭಿಕ ಸಂಬಳವು ಆಕರ್ಷಕವಾಗಿದೆ.

ಹೋಟೆಲ್ ನಿರ್ವಹಣೆಗೆ ಸಂಬಂಧಪಟ್ಟಂತೆ ಹೋಟೆಲ್ ಮ್ಯಾನೇಜ್‌ಮೆಂಟ್ ಡಿಪ್ಲೊಮೊ, ಹೋಟೆಲ್ ಮ್ಯಾನೇಜ್‌ಮೆಂಟ್ ಪದವಿ ಶಿಕ್ಷಣವನ್ನು ಪಡಯಬಹುದು.

ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮೈಸೂರಿನಲ್ಲಿ ಎಲ್ಲೆಲ್ಲಿ ಇದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

1. ಎಸ್‌ಬಿಆರ್‌ಆರ್‌ ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರು

ಈ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಬ್ಯಾಚುಲರ್ ಆಫ್ ಟೂರಿಸಂ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್ 3 ವರ್ಷದ ಪದವಿ ಇದೆ. ಪ್ರವೇಶ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಿಲ್ಲ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕಾಲೇಜಿನ ಶಿಕ್ಷಣದ ಬಗ್ಗೆ ಅತ್ಯಧಿಕ ಸಕಾರಾತ್ಮಕ ಅನಿಸಿಕೆ ನೀಡಿದ್ದಾರೆ.

2. ವಿದ್ಯಾ ವಿಕಾಶ್ ಇನ್ಸ್‌ಟಿಟ್ಯೂಟ್‌ ಆಫ್ ಟೂರಿಸಂ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್

ಈ ಶಿಕ್ಷಣ ಸಂಸ್ಥೆಯಲ್ಲಿ ಹೋಟೆಲ್‌ ಮ್ಯಾನೇಜ್‌ಮೆಂಟ್ ಅಂಡ್ ಕ್ಯಾಟೆರಿಂಗ್ ಟೆಕ್ನಾಲಜಿ(BHMCT) ಪದವಿ ಪಡೆಯಬಹುದು.

ಸರ್ಕಾರಿ ವಲಯದ ಪದವಿ ಮತ್ತು ಸ್ನಾತಕೋತ್ತರ ಪದವಿಯ ಯಾವುದೇ ಕೇಂದ್ರಗಳಲ್ಲಿ ಬಹು ಬೇಡಿಕೆ ಇರುವ ಹೋಟೆಲ್‌ ಮ್ಯಾನೇಜ್‌ಮೆಂಟ್ ಶಿಕ್ಷಣವನ್ನು ಎಲ್ಲಿಯೂ ಈ ವರೆಗೆ ಆರಂಭಿಸಿಲ್ಲ.

ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ ಪಡೆಯಬಹುದೇ?(Can i do hotel management after 10th)

ಇತ್ತೀಚಿನ ದಿನಗಳಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ ಪಡೆದವರಿಗೆ ಬೇಡಿಕೆ ಹೆಚ್ಚಿದ್ದು, ಮೇಲಿನ ಈ ಪ್ರಶ್ನೆ ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ ಮುಗಿಸಿದ ಮಕ್ಕಳಿಗೂ ಇದೆ. ಈ ಪ್ರಶ್ನೆಗೆ ಉತ್ತರಿಸುವುದೇ ಆದರೆ ಹೌದು. SSLC ಮುಗಿಸಿದವರು ಸಹ ಹೋಟೆಲ್ ಮ್ಯಾನೇಜ್‌ಮೆಂಟ್ ಡಿಪ್ಲೊಮೋ ಕೋರ್ಸ್‌ಗಳಿಗೆ ಸೇರಬಹುದು. ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದವರು ಹೋಟೆಲ್ ಮ್ಯಾನೇಜ್‌ಮೆಂಟ್ ಪದವಿ ಕೋರ್ಸ್‌ಗಳಿಗೆ ಅಥವಾ ಡಿಪ್ಲೊಮೊ ಕೋರ್ಸ್‌ಗಳಿಗೆ ಸೇರಬಹುದು. ಹಲವು ಹೋಟೆಲ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳು ಈ ಕೋರ್ಸ್‌ ಆಫರ್‌ ಮಾಡುತ್ತಿವೆ.

ಸೂಚನೆ: SSLC ಮುಗಿದ ನಂತರ ಹೋಟೆಲ್ ಮ್ಯಾನೇಜ್‌ಮೆಂಟ್ ಡಿಪ್ಲೊಮೊ ಕೋರ್ಸ್ ಪಡೆಯಬಹುದು. ಆದರೆ ಕೆಲಸಕ್ಕೆ ಹೋದಾಗ ಇಂತಹವರ ರೆಸ್ಯೂಮ್ ಹೆಚ್ಚು ಅಮೂಲ್ಯವಾಗಿದೆ ಎನಿಸದೇ ಇರಬಹುದು.

Also Yes for the Question ‘Can i do diploma in hotel management after 10th?’

You may also like