Home » ವಿಡಿಯೋ: ಕಲೆಯ ಹಾಗೆ ನಿಶ್ಯಬ್ಧತೆ ಬ್ಯೂಟಿಯ ಆಗರವು ಈ ಸೋಮನಾಥಪುರ ಚೆನ್ನಕೇಶವ ದೇವಾಲಯ

ವಿಡಿಯೋ: ಕಲೆಯ ಹಾಗೆ ನಿಶ್ಯಬ್ಧತೆ ಬ್ಯೂಟಿಯ ಆಗರವು ಈ ಸೋಮನಾಥಪುರ ಚೆನ್ನಕೇಶವ ದೇವಾಲಯ

by manager manager

ಸೋಮನಾಥಪುರದ ಚೆನ್ನಕೇಶವ ದೇವಾಲಯದ ಇತಿಹಾಸದ ಬಗ್ಗೆ ಕೇಳಿದರೆ ಪುಸ್ತಕದಲ್ಲಿ ಓದಿಕೊಂಡವರು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಯಲ್ಲಿ ಇತಿಹಾಸ ಓದಿದವರು ಒಂದಷ್ಟು ಮಾಹಿತಿ ಹೇಳಬಹುದು. ಅಥವಾ ಅಂತರ್ಜಾಲದಲ್ಲಿ ಹುಡುಕಿದರೆ ಸಿಕ್ಕೇ ಬಿಡುತ್ತದೆ. ಆದರೆ ಅಲ್ಲಿನ ಪ್ರವಾಸದ ಅನುಭವವನ್ನು ಎಳೆ ಎಳೆಯಾಗಿ ಯಾರು ಅಷ್ಟು ಸುಲಭವದಲ್ಲಿ ಬಿಚ್ಚಿಡುವುದಿಲ್ಲ. ಅದರ ಬಗ್ಗೆ ನಾವು ಸ್ವಲ್ಪ ಹೇಳುತ್ತೇವೆ. ಜೊತೆಗೆ ವಿಡಿಯೋ ಸಹ ನೋಡಿರಿ.

ಚೆನ್ನಕೇಶವ ದೇವಾಲಯವನ್ನು ಅದರ ಇತಿಹಾಸವನ್ನು ಬದಿಗಿಟ್ಟು ನೋಡುವುದಾದರೆ ಅದೊಂದು ಶಾಂತ ಸ್ವಭಾವದ ಸ್ಥಳ. ಟಿಕೆಟ್ ತೆಗೆದುಕೊಂಡು ದೇವಾಲಯ ಪ್ರದೇಶಕ್ಕೆ ಕಾಲಿಡುತ್ತಿದ್ದಂತೆ ನಮ್ಮಲ್ಲಿನ ಒತ್ತಡದ ಮನೋಭಾವ ಹಾಗೆ ಅದೆಲ್ಲಿಗೋ ಜಾರಿ ಬಿಡುತ್ತದೆ. ಕಣ್ಣು ಹಾಯಿಸಿದಷ್ಟು ಸುತ್ತಲು ಹಸಿರ ಹೊದಿಕೆ ನೋಟಕ್ಕೆ ಸಿಗುತ್ತದೆ. ದೇವಾಲಯದ ಮುಂಭಾಗವೇ ಇರುವ ಕಾಡು ಭಾಗೆ ಮರ ಹಾಗೆ ಒಂದಷ್ಟು ತಾಸು ಎಲ್ಲವನ್ನು ಮರೆತು ಕುಳಿತುಕೊಳ್ಳಿ ಎಂದೇಳುತ್ತದೆ. ಅದಕ್ಕೆ ಕಾರಣ ಅಲ್ಲಿನ ಭೌತಿಕ ಸೌಂದರ್ಯ ಮಾತ್ರವಲ್ಲದೇ, ನಿಶ್ಯಬ್ಧತೆ ಬ್ಯೂಟಿಯೂ ಹೌದು.

ದೇವಾಲಯದ ಓಳಾಂಗಣಕ್ಕೆ ಹೋದರೆ ವಿಶಾಲವಾದ ಅಂಗಳ. ಸ್ವಚ್ಛತೆ ನಿರ್ವಹಣೆಗೆ ಶೇಕಡ.100 ಅಂಕ ನೀಡಬಹುದು. ಹೊಯ್ಸಳರ ಶೈಲಿಯ ಆ ದೇವಾಲಯದ ನಿರ್ಮಾಣ, ಕೆತ್ತನೆ, ಕಲೆ ಮೆದುಳಿಗೆ ಮಾತ್ರವಲ್ಲದೇ ಮನಸ್ಸಿಗೂ ಮುದ ನೀಡುವಷ್ಟು ಅದ್ಭುತವೆನಿಸುತ್ತದೆ. ಕ್ಯಾಮೆರಾ ಹಿಡಿದು ಫೋಟೋ ತೆಗೆದುಕೊಳ್ಳುತ್ತಾ, ಮೊಬೈಲ್‌ ಹಿಡಿದು ಸೆಲ್ಫಿ ತೆಗೆಯುತ್ತಾ ಬ್ಯುಸಿ ಆಗುವ ಬದಲು, ಜೊತೆಗಾರರೊಂದಿಗೆ ಅಲ್ಲೇ ಒಂದಷ್ಟು ತಾಸು ಕುಳಿತು ಹರಟೆ ಹೊಡೆಯುತ್ತಾ ಕುಳಿತರೆ ಆ ಖುಷಿಗೆ ಎಲ್ಲೇಯೇ ಇರುವುದಿಲ್ಲ.

ಅಷ್ಟ ದಿಕ್ಕುಳಗಳಿಂದಲೂ ದೇವಾಲಯದ ಕಲೆಯ ಸೊಬಗನ್ನು ನಿಧಾನವಾಗಿ ಕಣ್ತುಂಬಿಕೊಳ್ಳುತ್ತಾ, ಆ ಜಗಲಿಯ ಮೇಲೆ ಓಡಾಡಿದಾಗ ಸಿಗುವ ಮಜಾ, ವರ್ಷಪೂರ್ತಿ ನಗರಗಳ ಮಾಲ್‌ಗಳಲ್ಲಿ, ಸಿನಿಮಾ ಥಿಯೇಟರ್‌ಗಳಿಗೆ ಓಡಾಡಿದರೂ ಸಿಗುವುದಿಲ್ಲ.

ದೇವಾಲಯದ ಮುಂಭಾಗದಲ್ಲಿ ವಿಶಾಲವಾದ ಹಸಿರು ಹುಲ್ಲಿನ ಹೊದಿಕೆ ಮೇಲೆ ಕುಳಿತು ಬೆಳಿಗ್ಗೆಯಿಂದ ಸಂಜೆ ವರೆಗೆ ಕುಳಿತುಕೊಳ್ಳಲು ಯಾರು ಅಡ್ಡಿ ಮಾಡುವುದಿಲ್ಲ. ಒತ್ತಡವನ್ನು ಮರೆಯಲು, ಪ್ರಕೃತಿಯೊಳಗೆ ಹೊಕ್ಕಿ ಅದರೊಂದಿಗೆ ಬೆರೆಯುವುದಕ್ಕಿಂತ ಔಷಧ ಮತ್ತೊಂದಿಲ್ಲ. ಅಂತಹ ಪ್ರಕೃತಿಯ ಮಡಿಲುಗಳ ಸಾಲಿನಲ್ಲಿ, ಹಳ್ಳಿ ಸೊಬಗಿನ ಪಕ್ಕದಲ್ಲೇ ಸೋಮನಾಥಪುರ ದೇವಾಲಯ ಇರುವುದು.

ಮೇಲಿನ ಈ ವೈಭವೀಕರಣಕ್ಕೆ ಕನ್ನಡಿಯಾಗಿರುವ ವಿಡಿಯೋ ಇದು. ಒಮ್ಮೆ ನೋಡಿ… ಭೇಟಿ ನೀಡಿ. ನಿಮ್ಮ ಅನಿಸಿಕೆಯನ್ನು ಲೇಖನದ ಕೆಳಗೆ ಇರುವ ಕಮೆಂಟ್‌ ಬಾಕ್ಸ್‌ ನಲ್ಲಿ ಟೈಪಿಸಿ.

You may also like