Home » ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಇವೆ ಕಾಂಡೋಮ್: ತಿಳಿಯಲೇ ಬೇಕಾದ ವಿಷಯಗಳು…

ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಇವೆ ಕಾಂಡೋಮ್: ತಿಳಿಯಲೇ ಬೇಕಾದ ವಿಷಯಗಳು…

by manager manager

ಕಾಂಡೋಮ್ ಕೇವಲ ಲೈಂಗಿಕವಾಗಿ ಹರಡಬಲ್ಲ ರೋಗಗಳನ್ನು ತಡೆಯುವುದಲ್ಲದೇ ಅನಗತ್ಯ ಗರ್ಭಧಾರಣೆಯನ್ನು ತಡೆಯುವ ವಸ್ತು. ಇಷ್ಟು ದಿನ ಕೇವಲ ಪುರುಷರು ಮಾತ್ರ ಈ ಕಾಂಡೋಮ್ ಬಳಸುತ್ತಿದ್ದರು. ಕಾಂಡೋಮ್ ಪುರುಷರಿಗೆ ಮಾತ್ರವಲ್ಲದೇ ಈಗ ಮಹಿಳೆಯರಿಗೂ ಇವೆ.. ಆದರೆ ಈ ಮಾಹಿತಿ ಅಸಂಖ್ಯಾತರಿಗೆ ತಿಳಿದೆಯಿಲ್ಲ.

ಅಂದಹಾಗೆ ಮಹಿಳೆಯರ ಕಾಂಡೋಮ್ ಬಗ್ಗೆ ಇದುವರೆಗೆ ಎಲ್ಲೂ ಚರ್ಚೆ ನಡೆದಿಲ್ಲ. ಗರ್ಭನಿರೋಧಕ ಬಳಸುವುದು ಅವರವರ ವೈಯಕ್ತಿಕ ಆಯ್ಕೆ. ಹಾಗೆಯೇ ಕೆಲ ಮಹಿಳೆಯರು ಕಾಂಡೋಮ್ ಉಪಯೋಗಿಸಲು ಇಚ್ಛಿಸುತ್ತಾರೆ.

ಮಹಿಳೆಯರು ಕಾಂಡೋಮ್ ಉಪಯೋಗಿಸಲು ಪ್ರಮುಖ ಕಾರಣಗಳೆಂದರೆ…

-ಲೈಂಗಿಕ ಕ್ರಿಯೆ ನಡೆಸುವ ಎಂಟು ಗಂಟೆಗಳ ಮುನ್ನವೇ ಇದನ್ನು ಧರಿಸಿದರೂ ತೊಂದರೆಯಾಗುವುದಿಲ್ಲ.

-ಕಾಂಡೋಮ್ ಅನ್ನು ಬಳಸಲು ಪತಿ ನಿರಾಕರಿಸಿದಾಗ ಪತ್ನಿಯೇ ಧರಿಸಬಹುದು

– ಮಹಿಳೆಯರ ಕಾಂಡೋಮ್ ಗೆ ಲಾಟೆಕ್ಸ್ ಬಳಸುವುದಿಲ್ಲವಾದ್ದರಿಂದ ಚರ್ಮಕ್ಕೆ ಕಿರಿಕಿರಿ ಉಂಟಾಗುವುದಿಲ್ಲ. ಆದರೆ ಲೈಂಗಿಕಕ್ರಿಯೆಯ ಸಮಯದಲ್ಲಿ ಜಾರುವ ಸಮಸ್ಯೆ ಎದುರಾಗುತ್ತದೆ. ಚರ್ಮಕ್ಕೆ ಕಿರಿಕಿರಿ, ಸ್ಪಂದನೆಯ ಮಟ್ಟ ಕಡಿಮೆ ಇರುತ್ತದೆ.

– ಇದು ಲೈಂಗಿಕ ಸುಖಕ್ಕೆ ಅಡ್ಡಿ ತರುತ್ತದೆ ಎನ್ನುವುದು ಹಲವರ ಅಭಿಪ್ರಾಯ.

– ಪುರುಷರ ಕಾಂಡೋಮ್ ಗೆ ಹೋಲಿಸಿದರೆ ಇದು ಗರ್ಭಧಾರಣೆಯನ್ನು ತಡೆಯುವಲ್ಲಿ ಅಷ್ಟು ಪರಿಣಾಮಕಾರಿಯಾಗಿಲ್ಲ ಎಂಬುದು ಹಲವರ ಅಭಿಪ್ರಾಯ

ಮಹಿಳೆಯರ ಕಾಂಡೋಮ್ ಬಳಸುವುದು ಹೇಗೆ?

– ಋತುಚಕ್ರದ ಸಮಯದಲ್ಲಿ ಟ್ಯಾಂಪನ್ ಬಳಸುವ ರೀತಿಯೇ ಕಾಂಡೋಮ್ ಬಳಸಬೇಕು

– ಪ್ರತಿ ಬಾರಿಯೂ ಹೊಸ ಕಾಂಡೋಮ್ ಬಳಸಿ ಹರಿಯದಂತೆ ಎಚ್ಚರವಹಿಸಬೇಕು

– ಕಾಂಡೋಮ್ ಗೆ ಲ್ಯೂಬ್ರಿಕೆಂಟ್ ಅನ್ನೂ ಬಳಸುವುದು

– ಏಕಕಾಲಕ್ಕೆ ಗಂಡ ಮತ್ತು ಹೆಂಡತಿ ಇಬ್ಬರೂ ಕಾಂಡೋಮ್ ಧರಿಸುವಂತಿಲ್ಲ

– ಕಾಂಡೋಮ್ ಹಾಕಿಕೊಳ್ಳುವಾಗ ಆರಾಮದಾಯಕ ಭಂಗಿಯಲ್ಲಿ ಕುಳಿತು ಧರಿಸಬೇಕು. ರಿಂಗ್ ಒಳಗೆ ಹೋಗಿ ಗಟ್ಟಿಯಾಗಿ ಹೋಗಿ ಕುಳಿತುಕೊಳ್ಳಬೇಕು.

Female condoms are easy to use with a little practice. Here are the basics on how to insert, use, and remove a female condom.

You may also like