Home » ಸೆಂಡರ್‌ ಗೆ ಗೊತ್ತಾಗದ ಹಾಗೆ ವಾಟ್ಸಾಪ್ ಮೆಸೇಜ್ ಓದುವುದು ಹೇಗೆ? 1 ನಿಮಿಷದಲ್ಲಿ ತಿಳಿಯಿರಿ

ಸೆಂಡರ್‌ ಗೆ ಗೊತ್ತಾಗದ ಹಾಗೆ ವಾಟ್ಸಾಪ್ ಮೆಸೇಜ್ ಓದುವುದು ಹೇಗೆ? 1 ನಿಮಿಷದಲ್ಲಿ ತಿಳಿಯಿರಿ

by manager manager

ವಾಟ್ಸಾಪ್ ನಲ್ಲಿ(whatsapp ) ಬಂದ ಮೆಸೇಜ್(message) ಅನ್ನು ಸೆಂಡರ್‌ಗೆ ತಿಳಿಯದ ಹಾಗೆ ಓದುವುದು ಒಂದು ಇಂಟ್ರೆಸ್ಟಿಂಗ್ ಟ್ರಿಕ್ಸ್‌. ಅಷ್ಟು ಮಾತ್ರವಲ್ಲ ಸೆಂಡರ್ ಗೆ ತಿಳಿಯದ ಹಾಗೆ ಕೆಲವೊಮ್ಮೆ ಓದುವುದು ಹಲವರಿಗೆ ಅನಿವಾರ್ಯವು ಎನಿಸಬಹುದು. ಸೆಂಡರ್‌ಗೆ ಓದಿದ್ದು ತಿಳಿದಿಯೂ ರೀಪ್ಲೇ ಮಾಡಿಲ್ಲ ಅಂದ್ರೆ ಮುನಿಸು ಸಹ ಆಗುತ್ತದೆ.

ಆದ್ದರಿಂದ ಕೆಲವರು ಇಂತಹ ಅಚಾತುರ್ಯಗಳಿಂದ ತಪ್ಪಿಸಿಕೊಳ್ಳಲು ವಾಟ್ಸಾಪ್ ಮೆಸೇಜ್ ಅನ್ನು ಬ್ಲೂಟಿಕ್ ಬರದ ಹಾಗೆ ಓದುವುದು ಬಹುಸಂಖ್ಯಾತರಿಗೆ ಅನಿವಾರ್ಯ ಆಗಿ ಬಿಟ್ಟಿದೆ. ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಕೇವಲ ಒಂದೇ ನಿಮಿಷದಲ್ಲಿ ಓದಿ ತಿಳಿದುಕೊಳ್ಳಿ.

– ನಿಮಗೆ ಯಾರಾದರೂ ವಾಟ್ಸಾಪ್ ಮೆಸೇಜ್ ಕಳುಹಿಸಿದಲ್ಲಿ ಅದು ನೋಟಿಫಿಕೇಶನ್ ಬರುತ್ತದೆ. ಹಾಗೆ ವಾಟ್ಸಾಪ್ ಆಪ್‌ ನಲ್ಲೂ ಎಷ್ಟು ಮೆಸೇಜ್ ಬಂದಿದೆ ಎಂಬುದು ಆಪ್ ಓಪನ್ ಮಾಡದೆಯೇ ತಿಳಿಯುತ್ತದೆ. ಆದರೆ ಸೆಂಡರ್ ಗೆ ಬ್ಲೂಟಿಕ್ ಬರದ ಹಾಗೆ ಓದುವುದು ಸಹ ಒಂದು ಟ್ರಿಕ್ಸ್‌. ಅದು ತುಂಬಾ ಸಿಂಪಲ್ ಟ್ರಿಕ್ಸ್…

– ಮೆಸೇಜ್ ಬಂದ ತಕ್ಷಣ ನೋಟಿಫಿಕೇಶನ್ ಪ್ಯಾನೆಲ್‌ ಗೆ ಹೋಗಿ ಫೋನ್‌ನಲ್ಲಿನ ಫ್ಲೈಟ್‌ ಮೋಡ್ (Flight Mode) ಅನ್ನು ಆನ್‌ ಮಾಡಿ

– ಈಗ ವಾಟ್ಸಾಪ್ ನಲ್ಲಿ ಬಂದಿರುವ ಎಲ್ಲಾ ಮೆಸೇಜ್‌ಗಳನ್ನು ಓದಿರಿ.

– ಮೆಸೇಜ್ ಓದಿದ ನಂತರ ವಾಟ್ಸಾಪ್ ಆಪ್ ಅನ್ನು ಕ್ಲೋಸ್ ಮಾಡಿ. ಹಾಗೆ ವಾಟ್ಸಾಪ್ ಆಪ್ ಅನ್ನು ಬ್ಯಾಗ್ರೌಂಡ್ ನಲ್ಲೂ ಕ್ಲೋಸ್ ಮಾಡಿರುವುದನ್ನು ಗಮನಿಸಿಕೊಳ್ಳಿ.

– ನಂತರ ಫ್ಲೈಡ್ ಮೋಡ್(Flight Mode) ಅನ್ನು ಆಫ್(off) ಮಾಡಿರಿ. ನಿಮಗೆ ಮೆಸೇಜ್ ಕಳುಹಿಸಿರುವವರಿಗೆ ನೀವು ಮೆಸೇಜ್ ಓದಿರುವುದು ತಿಳಿಯುವುದಿಲ್ಲ. ಅಂದರೆ ಬ್ಲೂಟಿಕ್ ಬಂದಿರುವುದಿಲ್ಲ.

In this article kannadaadvisor readers can know How to read whatsapp message without knowing to sender in kannada. It is a very simple tech hack that you can follow to save yourself some me-time.

You may also like