Home » ಸ್ಮಾರ್ಟ್‌ಫೋನ್ ವೇಗ ಹೆಚ್ಚಿಸಲು ಈ 10 ಸರಳ ಮಾರ್ಗಗಳು ಕಡ್ಡಾಯ!

ಸ್ಮಾರ್ಟ್‌ಫೋನ್ ವೇಗ ಹೆಚ್ಚಿಸಲು ಈ 10 ಸರಳ ಮಾರ್ಗಗಳು ಕಡ್ಡಾಯ!

by manager manager

ಸ್ಮಾರ್ಟ್‌ಫೋನ್(Smartphone) ಸ್ವಲ್ಪ ಸ್ಲೋ ಆದರೂ, ಎಲ್ಲರೂ ಸಹ ಅದರ ವ್ಯಾಲಿಡಿಟಿ ಕೇವಲ ಒಂದು ಎರಡು ವರ್ಷ ಅಷ್ಟೆ ಬಿಡಿ ಎಂದು ಗೊಣಗುತ್ತಿರುತ್ತಾರೆ. ಆದರೆ ಅದು ಎಷ್ಟು ಸತ್ಯ ಎಂಬದಕ್ಕೆ ಉತ್ತರ ಸ್ಮಾರ್ಟ್‌ಫೋನ್ ಅನ್ನು ಚೆನ್ನಾಗಿ ನಿರ್ವಹಣೆ ಮಾಡುವವರಿಗೆ ಮಾತ್ರ ಗೊತ್ತಿರುತ್ತದೆ.

ಸ್ಮಾರ್ಟ್‌ಫೋನ್‌ಗಳು(Smartphones) ಕೇವಲ ಒಂದು ಎರಡು ವರ್ಷ ಮಾತ್ರ ಚೆನ್ನಾಗಿ ವರ್ಕ್‌ ಆಗುತ್ತವೆ ಎಂಬುದು ಅಂತೆ ಕಂತೆ ಮಾಹಿತಿ ಮಾತ್ರ. ಆದರೆ ಒಂದು ಡಿವೈಸ್ ಅನ್ನು 5 ವರ್ಷಕ್ಕೂ ಹೆಚ್ಚಿನ ಅವಧಿ ಖರೀದಿಸಿದಾಗ ಯಾವ ವೇಗದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರೋ ಅದೇ ವೇಗದಲ್ಲಿ ಕಾಪಾಡಿಕೊಂಡು ಬಳಸಬಹುದು. ಹಾಗಿದ್ರೆ ಅಷ್ಟೊಂದು ವರ್ಷ ಸುರಕ್ಷಿತವಾಗಿ, ಫೋನ್ ಸ್ಲೋ ಆಗದಂತೆ ಬಳಸುವುದು ಹೇಗೆ? ಎಂಬ ಪ್ರಶ್ನೆ ಕಾಡುತ್ತಿರುವವರೆಲ್ಲಾ ಈ ಕೆಳಗಿನ ಟಾಪ್ 10 ಸರಳ ವಿಧಾನಗಳನ್ನು ಅನುಸರಿಸಿ…

1.ಹೋಮ್ ಸ್ಕ್ರೀನ್ ಕ್ಲೀನ್ ಮಾಡಿ: ಹೋಮ್‌ ಸ್ಕ್ರೀನ್‌ನಲ್ಲಿ ಲೈವ್ ವಾಲ್‌ಪೇಪರ್, ವಾತಾವರಣ ವಿಡ್‌ಜೆಟ್, ನ್ಯೂಸ್‌ ಆಪ್‌ಗಳು, ಇತರೆ ಆಗಾಗ ಅಪ್‌ಡೇಟ್‌ ಆಗುವ ಆಪ್‌ಗಳನ್ನು ವಾಲ್‌ಪೇಪರ್ ನಲ್ಲಿ ಇಡುವುದರಿಂದ ಸ್ಮಾರ್ಟ್‌ಫೋನ್ ತುಂಬಾ ನಿಧಾನವಾದ ಕಾರ್ಯನಿರ್ವಹಣೆ ಮಾಡುತ್ತದೆ. ಆದ್ದರಿಂದ ಅಂತಹ ಎಲ್ಲಾ ಆಪ್‌ಗಳನ್ನು ತೆಗೆದು ಹೋಮ್ ಸ್ಕ್ರೀನ್ ಕ್ಲೀನ್‌ ಮಾಡಿ.
2. ಡಾಟಾ ಸೇವರ್ ಮೋಡ್ ಎನೇಬಲ್ ಮಾಡಿ: ಗೂಗಲ್ ಕ್ರೋಮ್ ಬ್ರೌಸರ್ ನಲ್ಲಿ 'ಡಾಟಾ ಸೇವರ್' ಮೋಡ್ ಎನೇಬಲ್ ಮಾಡುವುದರಿಂದ ಇಂಟರ್ನೆಟ್ ಸರ್ಫಿಂಗ್ ಪೇಜ್‌ ಅನ್ನು ಕಂಪ್ರೆಸ್ ಮಾಡಿ ಬಹುಬೇಗ ರಿಸಲ್ಟ್ ಸಿಗುತ್ತದೆ. ಅಲ್ಲದೇ ಕಡಿಮೆ ಡಾಟಾ ಬಳಕೆ, ಪೇಜ್‌ ವೇಗವಾಗಿ ಲೋಡ್ ಆಗುತ್ತದೆ. ಫೋಟೋ ಮತ್ತು ವಿಡಿಯೋ ಗುಣಮಟ್ಟ ಸ್ವಲ್ಪ ಕಡಿಮೆ ಆಗುತ್ತದೆ ಎಂಬುದನ್ನು ಹೊರತು ಪಡಿಸಿದರೆ, ನಿಮ್ಮಮ ಮೊಬೈಲ್ ವೇಗವಾಗಿ ಕಾರ್ಯನಿರ್ವಹಿಸಲು ಸಹಕಾರಿ.
3. Auto-Sync ಸ್ವಿಚ್ ಆಫ್ ಮಾಡಿ: ಇತ್ತೀಚಿನ ಎಲ್ಲಾ ಸ್ಮಾರ್ಟ್‌ಫೋನ್ ಈ ಒಂದು ನಿರ್ಧಿಷ್ಟ ಫೀಚರ್‌ ಅನ್ನು ಪಡೆಯುತ್ತಿವೆ. ಆದ್ದರಿಂದ ಒಮ್ಮೆ ನೀವು ಯಾವ ಎಲ್ಲಾ ಆಪ್‌ಗಳು Auto-Sync ಆಗುತ್ತಿವೆ ಎಂಬುದನ್ನು ಪರಿಶೀಲಿಸಿ, ನಂತರ ಅನಗತ್ಯ ಆಪ್‌ಗಳು Auto-Sync ಆಗುವುದನ್ನು ಡಿಸೇಬಲ್ ಮಾಡಿ.
4. ಟಾಸ್ಕ್‌ ಕಿಲ್ಲರ್ ಆಪ್‌ಗಳನ್ನು ಡಿಲೀಟ್ ಮಾಡಿ: ಡಿವೈಸ್‌ಗಳಲ್ಲಿನ ಕೆಲವು ಟಾಸ್ಕ್‌ ಕಿಲ್ಲಿಂಗ್ ಆಪ್‌ಗಳು ಸಹಜವಾಗಿ ಇತರೆ ಎಲ್ಲಾ ಆಪ್‌ಗಳು ಆರಂಭವಾಗುವುದನ್ನು ಸ್ಲೋ ಮಾಡುವುದಲ್ಲದೇ ಸಂಪೂರ್ಣ ಮೊಬೈಲ್ ಕಾರ್ಯಚರಣೆ ನಿಧಾನವಾಗುವಂತೆ ಮಾಡುತ್ತದೆ. ಆದ್ದರಿಂದ ಅಂತಹ ಆಪ್‌ಗಳನ್ನು ಡಿವೈಸ್‌ನಲ್ಲಿ Uninstall ಮಾಡಿ.
5. ಆಗಾಗ ಡಿವೈಸ್ ರೂಟಿಂಗ್ ಮಾಡಿ: ನಿಮಗೆನಾದರೂ ಡಿವೈಸ್‌ ಅನ್ನು ರೂಟಿಂಗ್ ಮಾಡುವುದು ಗೊತ್ತಿದ್ದಲ್ಲಿ ಆಗಾಗ ನಿಮ್ಮ ಆಂಡ್ರಾಯ್ಡ್ ಡಿವೈಸ್‌ ಅನ್ನು ರೂಟಿಂಗ್ ಮಾಡಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲವೊಮ್ಮೆ ಹೆಚ್ಚಾದ ಆಪ್‌ಗಳು ಡಿವೈಸ್ ಹೆಚ್ಚು ಬಿಸಿಯಾಗುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಕೆಲವು ಆಪ್‌ಗಳು ಅನ್‌ಇನ್‌ಸ್ಟಾಲ್‌ ಆದರೂ ಪರವಾಗಿಲ್ಲ ಎಂಬುದನ್ನು ಗಮನದಲ್ಲಿರಿಸಿ ಡಿವೈಸ್ ರೂಟಿಂಗ್ ಮಾಡಿ. ಇದರಿಂದ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಬಹುದು.
6. ಕ್ಯಾಚಡ್‌ ಡಾಟಾ ಕ್ಲಿಯರ್ ಮಾಡಿ : ಇದು ಡಿವೈಸ್‌ ಗಳಲ್ಲಿನ ಜಂಕ್ ಫೈಲ್‌ಗಳನ್ನು ಕ್ಲೀನ್ ಮಾಡಿ, ವೇಗವಾಗಿ ಕಾರ್ಯಚರಣೆಗೊಳಿಸಲು ಇರುವ ಸಾಮಾನ್ಯವಾದ ವಿಧಾನ. ಸ್ಮಾರ್ಟ್‌ಫೋನ್‌ ನಲ್ಲಿನ ಜಂಕ್‌ ಫೈಲ್‌ಗಳನ್ನು ಕ್ಲೀನ್‌ ಮಾಡಲು ಹಲವು ಇತರೆ ಆಪ್‌ಗಳಿದ್ದು, ಕೆಲವು ಡಿವೈಸ್‌ ಗಳೂ ಇನ್‌ಬಿಲ್ಟ್‌ ಫೀಚರ್ ಅನ್ನೇ ಹೊಂದಿರುತ್ತವೆ.
7. ಬ್ಯಾಗ್‌ರೌಂಡ್ ರನ್ನಿಂಗ್ ಆಫ್‌ಗಳನ್ನು ಡಿಸೇಬಲ್ ಮಾಡಿ: ಡಿವೈಸ್‌ನಲ್ಲಿ ಕೆಲವು ಆಫ್‌ಗಳು ಬ್ಯಾಗ್‌ರೌಂಡ್‌ನಲ್ಲಿ ರನ್‌ ಆಗುವುದನ್ನು ಡಿಆಕ್ಟಿವೇಟ್ ಅಥವಾ ಡಿಸೇಬಲ್ ಮಾಡುವ ಆಯ್ಕೆಗಳಿವೆ. ಹೀಗೆ ಮಾಡುವುದರಿಂದ ಡಿವೈಸ್‌ ನ ಪ್ರೊಸೆಸರ್ ಬಹುಬೇಗ ಕಾರ್ಯಚರಣೆ ಮಾಡಿ Ram ಅನ್ನು ಫ್ರೀ ಆಗಿಸಿ ಎಲ್ಲಾ ಟಾಸ್ಕ್‌ಗಳು ಸುಲಲಿತ ಮತ್ತು ವೇಗವಾಗಿ ಆಗಲು ಸಹಾಯವಾಗುತ್ತದೆ.
8. ಕಸ್ಟಮ್ ROM ಇನ್‌ಸ್ಟಾಲ್ ಮಾಡಲು ಪ್ರಯತ್ನಿಸಿ: ನೀವು ರೂಟಿಂಗ್ ಮಾಡುವಲ್ಲಿ ಪರಿಣಿತರೆ ಆಗಿದ್ದಲ್ಲಿ ಕಸ್ಟಮ್ ROM ಇನ್‌ಸ್ಟಾಲ್ ಮಾಡಲು ಪ್ರಯತ್ನಿಸಿ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಗೆ ಲೇಟೆಸ್ಟ್‌ ಫೀಚರ್ ಸಿಗುವುದಲ್ಲದೇ, ಡಿವೈಸ್ ಸಪೋರ್ಟ್‌ ಮಾಡದಿದ್ದರೂ ಸಹ ಆಂಡ್ರಾಯ್ಡ್‌ ನ ಹೊಸ ವರ್ಸನ್ ಅಪ್‌ಡೇಟ್‌ ಸಿಗುತ್ತದೆ.
9. ಓಎಸ್‌ ಅಪ್‌ಡೇಟ್ ಪಡೆಯಿರಿ: ನಿಮ್ಮ ಸ್ಮಾರ್ಟ್‌ಫೋನ್ ಇನ್ನೂ ಸಹ ಅಧಿಕೃತ ಓಎಸ್‌(Operatin System) ಸೈಕಲ್ ನಲ್ಲಿಯೇ ಇದ್ದರೇ, ಲೇಟೆಸ್ಟ್‌ ವರ್ಸನ್ ಇನ್‌ಸ್ಟಾಲ್‌ ಮಾಡಿ. ಇದರಿಂದ ಡಿವೈಸ್ ನ ಎಲ್ಲಾ ತೊಂದರೆಗಳನ್ನು ದೂರಮಾಡಬಹುದು, ಅಲ್ಲದೇ ಹೊಸ ಫೀಚರ್‌ಗಳು ಲಭ್ಯವಾಗುತ್ತವೆ.
10. ಫ್ಯಾಕ್ಟರಿ ರೀಸೆಟ್ ಅಥವಾ ಬ್ಯಾಕಪ್ ಡಿವೈಸ್ ಕೊನೆಯ ಮಾರ್ಗ: ನಿಮ್ಮ ಸ್ಮಾರ್ಟ್‌ಫೋನ್ ಯಾವುದೇ ಮಾರ್ಗದಿಂದಲೂ ವರ್ಕ್‌ ಆಗದಿದ್ದಲ್ಲಿ ನಿಮಗೆ ರೂಟಿಂಗ್ ಗೊತ್ತಿಲ್ಲದಿದ್ದಲ್ಲಿ ಫ್ಯಾಕ್ಟರಿ ರೀಸೆಟ್ ಕೊನೆಯ ಮಾರ್ಗ. ಯಾವುದೇ ಮೂರನೇ ಆಪ್‌ಗಳ ಸಹಾಯ ಬೇಡಬಾದಲ್ಲಿ, ಎಲ್ಲಾ ಡಾಟಾವನ್ನು ಬ್ಯಾಕಪ್ ಪಡೆಯುವ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಮೊಬೈಲ್‌ ನಲ್ಲಿನ ಸೆಟ್ಟಿಂಗ್ಸ್‌ ಗೆ ಹೋಗಿ ಫ್ಯಾಕ್ಟರಿ ರೀಸೆಟ್ ಮಾಡಿ.

Kannadaadvisor giving simple top 10 ways to speed up your Android Smartphone in easy. From these ways can get better Smartphone speed experience.

You may also like