Home » ಮೈಸೂರಿನ ಗೀತಾ ಗೋಪಿನಾಥ್ ಈಗ IMF ನ ಮುಖ್ಯ ಆರ್ಥಿಕ ತಜ್ಞೆ

ಮೈಸೂರಿನ ಗೀತಾ ಗೋಪಿನಾಥ್ ಈಗ IMF ನ ಮುಖ್ಯ ಆರ್ಥಿಕ ತಜ್ಞೆ

by manager manager
Geetha Gopinath imf Chief Economist in kannada

ಮೈಸೂರಿಗರೇ ಆದ ಗೀತಾ ಗೋಪಿನಾಥ್(Geetha Gopinath) ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿಯ(IMF) ಮುಖ್ಯ ಆರ್ಥಿಕ ತಜ್ಞೆಯಾಗಿ ಮೊನ್ನೆಯಷ್ಟೇ ಅಧಿಕಾರ ಸ್ವೀಕರಿಸಿದ್ದಾರೆ.

ಗೀತಾ ಗೋಪಿನಾಥ್ ರವರು IMF ನ ಈ ಉನ್ನತ ಹುದ್ದೆ ಸ್ವೀಕರಿಸಿದ ಮೊದಲ ಮಹಿಳೆ ಆಗಿದ್ದಾರೆ. ಹಾಗೂ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲಿರುವ ಭಾರತದ ಎರಡನೇ ಅರ್ಥಶಾಸ್ತ್ರಜ್ಞರು ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಇವರು ಐಎಂಎಫ್‌ನ 11ನೇ ಮುಖ್ಯ ಆರ್ಥಿಕ ತಜ್ಞೆಯಾಗಿ ಸೇವೆ ಸಲ್ಲಿಸಲಿದ್ದಾರೆ.

ಆರ್‌ಬಿಐನ ಮಾಜಿ ಗವರ್ನರ್ ರಘುರಾಂ ರಾಜನ್ ರವರು ಐಎಂಎಫ್‌ನ ಭಾರತದಿಂದ ಮೊದಲ ಮುಖ್ಯ ಆರ್ಥಿಕ ತಜ್ಞರಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ.

ಅಂತರರಾಷ್ಟ್ರೀಯ ಹಣಕಾಸು ನಿಧಿಯ ಸಂಶೋಧನಾ ವಿಭಾಗದ ನಿರ್ದೇಶಕ ಮತ್ತು ಆರ್ಥಿಕ ಸಲಹೆಗಾರರಾಗಿದ್ದ ಮೌರೈಸ್ ಆಬ್ಸ್ಟ್‌ಫೆಲ್ಡ್ ಅವರು ಡಿಸೆಂಬರ್ 31 ರಂದು ನಿವೃತ್ತರಾದ ಹಿನ್ನೆಲೆಯಲ್ಲಿ, ಇವರ ಉತ್ತರಾಧಿಕಾರಿಯಾಗಿ ಗೀತಾ ಗೋಪಿನಾಥ್‌ ರವರು ಅಧಿಕಾರ ಸ್ವೀಕರಿಸಿದ್ದಾರೆ.

ಅಂದಹಾಗೆ ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿನ್ ಲಗಾರ್ಡ್ ರವರು ಗೀತಾ ಗೋಪಿನಾಥ್‌ ಅವರನ್ನು ಮುಖ್ಯ ಆರ್ಥಿಕ ತಜ್ಞೆ ಹುದ್ದೆಗೆ ನೇಮಿಸಿ 2018 ರ ಅಕ್ಟೋಬರ್ 1 ರಂದು ಆದೇಶ ನೀಡಿದ್ದರು.

ಗೀತಾ ಗೋಪಿನಾಥ್ ಅವರ ಬಗ್ಗೆ ಒಂದಿಷ್ಟು ಮಾಹಿತಿ ಈ ಕೆಳಗಿನಂತಿದೆ. (Geetha Gopinath Profile)

– ಡಿಸೆಂಬರ್ 8, 1971 ರಲ್ಲಿ ಮೈಸೂರಿನಲ್ಲಿ ಜನನ.

– ತಂದೆ ಟಿ ವಿ ಗೋಪಿನಾಥ್

– ಗೀತಾ ಗೋಪಿನಾಥ್‌ ರವರ ಗಂಡ ಇಕ್ಬಾಲ್ ಧಲಿವಾಲ್ ರವರು.

– ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವೂಮೆನ್ ಮತ್ತು ಪ್ರಿನ್ಸ್ಟನ್ ಯುನಿವರ್ಸಿಟಿ ಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದಿದ್ದಾರೆ.

– ಭಾರತೀಯ ಮೂಲದ ಅಮೆರಿಕನ್ ಆರ್ಥಿಕ ತಜ್ಞೆ ಮತ್ತು ಹಾವರ್ಡ್‌ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಅಧ್ಯಯನಗಳು ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

– ಕೇರಳ ಮುಖ್ಯಮಂತ್ರಿಗೆ ಆರ್ಥಿಕ ಸಲಹೆಗಾತಿಯಾಗಿ ಕಾರ್ಯ ನಿರ್ವಹಿಸಿದ್ದರು.

Gita Gopinath has takes over as International Monetary Foun Chief Economist on January 09th. Gita Gopinath, she born on 8 december 1971 at Mysore in the state of Karnataka.

You may also like