Home » ‘ಹಣ್ಣುಗಳ ರಾಜ’ ಕೆನ್‌ ಲವ್ ಜತೆಗೆ 26ರಂದು ಬೆಳಗೊಳದಲ್ಲಿ ಸಂವಾದ ಕಾರ್ಯಕ್ರಮ

‘ಹಣ್ಣುಗಳ ರಾಜ’ ಕೆನ್‌ ಲವ್ ಜತೆಗೆ 26ರಂದು ಬೆಳಗೊಳದಲ್ಲಿ ಸಂವಾದ ಕಾರ್ಯಕ್ರಮ

by manager manager

ಹವಾಯಿ ದೀಪದ ಹಣ್ಣು ಕೃಷಿಕ ಹಾಗೂ ‘ಹಣ್ಣುಗಳ ರಾಜ’ ಎಂದೇ ಪ್ರಖ್ಯಾತರಾದ ಅಮೆರಿಕದ ಕೆನ್‌ ಲವ್ (Ken Love)ಅವರು ಅಕ್ಟೋಬರ್ 26 ರಂದು ಬೆಳಿಗ್ಗೆ 10.30ಕ್ಕೆ ಕೆ.ಆರ್.ಎಸ್ ರಸ್ತೆಯ ಬೆಳಗೊಳ(Belagola) ಗ್ರಾಮದ ಬಳಿ ಇರುವ ಬೆಳವಲ ಪರಿಸರ ಕೇಂದ್ರದಲ್ಲಿ ಸಂವಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಹಣ್ಣುಗಳ ತಳಿ ಸಂರಕ್ಷಣೆ ಕುರಿತು ಕೆನ್‌ ಲವ್ ರವರು ನಡೆಸಿಕೊಡಲಿರುವ ಈ ಸಂವಾದ ಕಾರ್ಯಕ್ರಮವನ್ನು ಹೊನ್ನೇರು ಬಳಗವು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಹಣ್ಣುಗಳ ಮೌಲ್ಯವರ್ದನೆ ಹಾಗೂ ಮಾರುಕಟ್ಟೆ ಅಭಿವೃದ್ಧಿ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.

ಅಂದಹಾಗೆ ಈ ಸಂವಾದ ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕ ರೂ.250 ಪಾವತಿಸಿ ಭಾಗವಹಿಸಬೇಕು.

ಹೆಚ್ಚಿನ ಮಾಹಿತಿಗೆ ಮೊಬೈಲ್:8971867171

A Conversation with The ‘King of Fruits’s Ken Love on 26th of this month at Belagola, KRS -Mysore main road. Interested peoples can participate.

You may also like