Home » ಕಾಫಿ ಬೆಳೆಗಾರರ ಸಮಸ್ಯೆಗಳಿಗೆ Coffee Connect ಅಪ್ಲಿಕೇಶನ್‌ನಿಂದ ಪರಿಹಾರ!

ಕಾಫಿ ಬೆಳೆಗಾರರ ಸಮಸ್ಯೆಗಳಿಗೆ Coffee Connect ಅಪ್ಲಿಕೇಶನ್‌ನಿಂದ ಪರಿಹಾರ!

by manager manager
Coffee board launches Coffee Conect App for help to Coffee growers 2

ಕೃಷಿಗೆ ಹೊಸ ತಂತ್ರಜ್ಞಾನದ ಅಳವಡಿಕೆ ಆರಂಭ ನಿನ್ನೆ ಮೊನ್ನೆಯದಲ್ಲ. ಕಾಲ ಬದಲಾದಂತೆ ಆಯಾ ಕೃಷಿ ಬೆಳೆಗಳಿಗೆ ಅದರ ಬೆಳೆಗಾರರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತ ತಮ್ಮ ಆದಾಯ ಮೂಲವನ್ನು ಇನ್ನಷ್ಟು ಸುಲಭವು ಮತ್ತು ಸರಳವೂ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಈಗ ಕಾಫಿ ಬೆಳೆಗಾರರ ಹಲವು ಸಮಸ್ಯೆಗಳನ್ನು ದೂರ ಮಾಡಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕಾಫಿ ಮಂಡಳಿ ಮುಂದಾಗಿದೆ.

ಅಂದಹಾಗೆ ಈಗ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ನೀಡಲು ಹೊಸ ತಂತ್ರಜ್ಞಾನದ ಅಳವಡಿಕೆಗೆ ಮೊರೆ ಹೋಗಿರುವುದು ಕಾಫಿ ಮಂಡಳಿ. ಇದು ಈಗ ಕಾಫಿ ಕನೆಕ್ಟ್ (Coffee Connect App) ಎಂಬ ಹೊಸ ಅಪ್ಲಿಕೇಶನ್ (App) ಅನ್ನು ಹೊರತಂದಿದೆ. ಇದನ್ನು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ರವರು ಲಾಂಚ್‌ ಮಾಡಿದ್ದಾರೆ.

Coffee board launches Coffee Conect App for help to Coffee growers

ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಫಾರ್ ಗವರ್ನೆನ್ಸ್‌ ಜೊತೆಗೂಡಿ ಕಾಫಿ ಮಂಡಳಿಯು WINIT ನಿಂದ ಈ ಹೊಸ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೇ ಕಾಫಿ ಕೃಷಿ ತರಂಗ ಅಪ್ಲಿಕೇಷನ್ ಅನ್ನು ಆರಂಭಿಸಲಾಗಿದೆ.

ಈ ಆಪ್ IVRS ಆಧಾರಿತ ಮೊಬೈಲ್ ಎಕ್ಸ್‌ಟೆನ್ಸನ್ ಸೇವೆ. ಕೀಟಗಳು, ರೋಗ ಬಾಧೆ ಮತ್ತು ಮಳೆ ಪ್ರಮಾಣದ ಸಮಸ್ಯೆಗಳಿಗೆ ಟೆಕ್ನಾಲಜಿ ಮೂಲಕ ಪರಿಹಾರ ಕಂಡುಹಿಡಿದ ನಂತರ ಕಾಫಿ ಮಂಡಳಿಯು EM Analytics ಜತೆ ಗೂಡಿ ಪ್ರಾಯೋಗಿಕ ಪರೀಕ್ಷಾರ್ಥವಾಗಿ ಕೆಲವು ಇತರೆ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸ್ಥಳೀಯ ಹವಾಮಾನ ಮುನ್ಸೂಚನೆ, ಕೀಟ ಗುರುತಿಸುವ ಅಪ್ಲಿಕೇಶನ್, ಎಲೆ ಉದುರುವ ಕಾಯಿಲೆ ಮುನ್ಸೂಚನೆ, ಬ್ಲಾಕ್ ಚೈನ್ ಆಧಾರಿತ ಮಾರ್ಕೆಟ್ ಪ್ಲೇಸ್ ಕುರಿತ ಮಾಹಿತಿಯನ್ನು ಆಪ್ ನೀಡಲಿದೆ.

ಹಾಸನ, ಚಿಕ್ಕಮಗಳೂರು, ಕೊಡಗು ಪ್ರದೇಶಗಳಲ್ಲಿ ಕಾಫಿಗೆ ಕೊಳೆರೋಗ ಸಮಸ್ಯೆ ಎದುರಾದಾಗ ಸೆಪ್ಟೆಂಬರ್ 4, 2014 ರಲ್ಲಿ ಅಪ್ಲಿಕೇಶನ್‌ಗಳನ್ನು ಪರಿಚಯಿಸಲಾಗಿದೆ. ಈ ಆಪ್‌ನಲ್ಲಿ IVR ಆಧಾರಿತ ಬ್ಯಾಕ್ ಎಂಡ್ ಕಾರ್ಯಾಚರಣೆಗಳ ಸಮಸ್ಯೆಗಳನ್ನು ಶೀಘ್ರವಾಗಿ ಹಾಗೂ ಪರಿಣಾಮಕಾರಿಯಾಗಿ ಬಗೆಹರಿಸಲು ಇದರಿಂದ ಉಪಯೋಗವಾಗಲಿದೆ.

ಕಾಫಿ ಕನೆಕ್ಟ್ ಆಪ್ ಕಾಫಿ ಮಂಡಳಿ ನೀಡುವ ಡೆಲಿವರಿ ಸೇವೆಯ ವಿಸ್ತರಣೆಯನ್ನು ಪರಿಣಾಮಕಾರಿಯಾಗಿ ನೀಡುವಲ್ಲಿ ನೆರವಾಗಲಿದೆ ಎಂದು ಕಾಫಿ ಮಂಡಳಿ ತಿಳಿಸಿದೆ. ಅಲ್ಲದೇ ಈ ಆಪ್‌ ನ ಸೇವೆಯೂ ಆಗಾಗ ಅಪ್‌ಡೇಟ್‌ ಆಗುತ್ತಿರುತ್ತದೆ. ಈ ಆಪ್‌ಗಳು ಪ್ರಸ್ತುತ ಇನ್ನೂ ಆರಂಭದ ಹಂತದಲ್ಲಿವೆ.

Coffee board launches Coffee Connect App for help to Coffee growers. Coffee Connect app launched by Suresh Prabhu on Naya Bharat Coffee Par Soch event.

You may also like