Home » ಅತೀ ಕಡಿಮೆ ಬಂಡವಾಳದಿಂದ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಅಲೋವೆರಾ ಬಿಸಿನೆಸ್

ಅತೀ ಕಡಿಮೆ ಬಂಡವಾಳದಿಂದ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಅಲೋವೆರಾ ಬಿಸಿನೆಸ್

by manager manager

ಕಡಿಮೆ ಬಂಡವಾಳ ಹೆಚ್ಚು ಆದಾಯ ಅಂದ್ರೆ ಯಾರು ತಾನೆ ಸುಮ್ಮನಿರುತ್ತಾರೆ. ಕಡೆ ಪಕ್ಷ ಸಾಲ ಮಾಡಿ ಆದ್ರು ನಾನು ಈ ಬಿಸಿನೆಸ್ ಆರಂಭಿಸುತ್ತೇನೆ ಎಂದು ಮುಂದಾಗುವ ಬಹುಸಂಖ್ಯಾತ ಮಂದಿ ಸಿಗುತ್ತಾರೆ. ಇಲ್ಲಿ ಅಂತಹದೇ ಒಂದು ಬಿಸಿನೆಸ್ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದ್ದೇವೆ.(aloe vera farming business plan)

ಈ ಲೇಖನದ ತಲೆಬರಹದಲ್ಲೇ ಹೇಳಿದ ಹಾಗೆ ಇದು ಅಲೋವೆರಾ ಬಿಸಿನೆಸ್. ಕಡಿಮೆ ಬಂಡವಾಳ ಹಾಕಿ, ಶ್ರದ್ಧೆಯಿಂದ ಶ್ರಮಿಸಿದರೆ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಸಾಧ್ಯತೆಗಳಿವೆ. (aloe vera farming in karnataka)

ಅಲೋವೆರಾ ಬಗ್ಗೆ ಬಹುಸಂಖ್ಯಾತರಿಗೆ ತಿಳಿದಿರಬಹುದು. ಇದು ಇಂದು ಪ್ರಪಂಚದಾದ್ಯಂತ ಆಯುರ್ವೇದಿಕ್ ಔಷಧಿಯಾಗಿ ಹೆಚ್ಚು ಬೇಡಿಕೆ ಹೊಂದಿವೆ. ಅಲೋವೆರಾ ಒಂದು ಉತ್ತಮ ಮೆಡಿಷನ್ ಕೂಡ ಹೌದು. ಇದಕ್ಕೆ ದಿನದಿಂದ ಬೇಡಿಕೆ ಹೆಚ್ಚುತ್ತಿರುವ ಕಾರಣ ಸಣ್ಣ ಆಯುರ್ವೇದಿಕ ಕಂಪನಿಗಳಿಂದ, ದೊಡ್ಡ ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳು ಅಲೋವೇರಾ ಪ್ರಾಡಕ್ಟ್ ಗಳನ್ನು ಮಾರಾಟ ಮಾಡಲು ಆರಂಭಿಸಿವೆ.

ಹಾಗಿದ್ರೆ ನಾವು ಅಲೋವೆರಾ ಬಿಸಿನೆಸ್ ಮಾಡುವುದು ಹೇಗೆ ಎಂಬ ಪ್ರಶ್ನೆ ಹಲವರ ತಲೆಯಲ್ಲಿ ಕೊರೆಯಲು ಆರಂಭಿಸಿರಬಹುದು. ಅಂತಹವರು ಅಲೋವೆರಾ ಬಿಸಿನೆಸ್ ಮಾಡುವುದು ಹೇಗೆ? ಎಂಬುದನ್ನು ಈ ಕೆಳಗಿನ ಮಾಹಿತಿ ಓದಿ ತಿಳಿಯಿರಿ..

2 ಬಗೆಯ ಅಲೋವೆರಾ ಬಿಸಿನೆಸ್ ಇದೆ

– ಅಲೋವೆರಾವನ್ನು ಕೃಷಿ ಜಮೀನಿನಲ್ಲಿ ಬೆಳೆದು ಅದನ್ನು ಮಾರಾಟ ಮಾಡಬಹುದು. ಇದರಿಂದ ವಾರ್ಷಿಕ 5-10 ಲಕ್ಷ ದುಡಿಯಬಹುದು.

– ಇನ್ನೊಂದು ಬಗೆಯಾಗಿ ಅಲೋವೆರಾ ಪ್ರೊಸೆಸಿಂಗ್ ಯುನಿಟ್ ಸ್ಥಾಪಿಸಿ ಜ್ಯೂಸ್ ಮಾಡಿ ಮಾರಾಟ ಮಾಡಿ ಹಣ ಗಳಿಸಬಹುದು.

ಬೆಳೆಯುವವರಿಗೆ ಈ ಮಾಹಿತಿ

ಅಲೋವೆರಾ ಬೆಳೆದು ಮಾರಾಟ ಮಾಡಿ ಬಿಸಿನೆಸ್ ಮಾಡುತ್ತೇನೆ ಎನ್ನುವವರಿಗೆ ಪ್ರಾರಂಭದಲ್ಲಿ ರೂ.50 ಸಾವಿರ ಬಂಡವಾಳ ಬೇಕಾಗುತ್ತದೆ. ಒಂದು ಹೆಕ್ಟೇರ್ ಜಾಗದಲ್ಲಿ ಅಲೋವೆರಾ ಬೆಳೆದು ಮೂರು ವರ್ಷಗಳ ಕಾಲ ಫಲ ಪಡೆಯಬಹುದು ಎನ್ನುತಾರೆ ಪರಿಣಿತರು. (how to cultivate aloe vera)

ಸೂಚನೆ: ಅಲೋವೆರಾ ಬೆಳೆಯ ಬೇಕು ಎಂದುಕೊಂಡವರು ಮೊದಲು ನಿಮ್ಮ ಸಮೀಪದ ಕೃಷಿ ಕೇಂದ್ರ ಸಂಪರ್ಕಿಸಿ, ಕೃಷಿ ತಜ್ಞರ ಸಲಹೆ ಪಡೆದು ನಂತರ ಈ ಕೃಷಿಯಲ್ಲಿ ಮುಂದುವರೆಯುವುದು ಸೂಕ್ತ.

ಬಂಡವಾಳ

ಮಾರುಕಟ್ಟೆಯಲ್ಲಿ ic, 111271, AL-1 ಅಲೋವೆರಾ ತಳಿಗಳು ಲಭ್ಯವಿದ್ದು, ಎಂತಹ ಜಮೀನಿನಲ್ಲಿಯೂ ಬೆಳೆಯಬಹುದಂತೆ. ಡೀನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್ ರಿಸರ್ಚ್ ಹೇಳುವಂತೆ 1 ಹೇಕ್ಟೇರ್ ಜಾಗದಲ್ಲಿ ಅಲೋವೆರಾ ಬೆಳೆಗೆ ಸುಮಾರು ರೂ.27,500 ವೆಚ್ಚವಾಗುತ್ತದೆ. ಇನ್ನುಳಿದಂತೆ ಗೊಬ್ಬರ, ಕೂಲಿ ಔಷಧಿಗಳಿಗೆ ಸೇರಿ ಮಿಕ್ಕದ್ದು. ಒಟ್ಟಾರೆ ರೂ.50 ಸಾವಿರ ಬಂಡವಾಳ ಬೇಕು.

ಒಂದು ಹೆಕ್ಟೇರ್‌ ಜಾಗದಲ್ಲಿ 40-45 ಟನ್ ಅಲೋವೆರಾ ಎಲೆಗಳನ್ನು ಬೆಳೆಯಬಹುದು. ಒಂದು ಮಾರುಕಟ್ಟೆಯಿಂದ ಮತ್ತೊಂದು ಮಾರುಕಟ್ಟೆಗೆ ಟನ್ ಅಲೋವೆರಾ ದರ ವ್ಯತ್ಯಾಸ ಇರುತ್ತದೆ. ಒಂದು ಟನ್ ಅಲೋವೆರಾ ಎಲೆಗೆ ಸುಮಾರು ರೂ.20000 ಇರುತ್ತದೆ.

ಒಂದು ಹೆಕ್ಟೇರ್ ಜಾಗದಲ್ಲಿ ಮೊದಲ ವರ್ಷವೇ 40-45 ಟನ್ ಅಲೋವೆರಾ ಬೆಳೆ ಬೆಳೆಯುವ ಅವಕಾಶ ವಿದ್ದು, ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಹೆಚ್ಚುತ್ತದೆ. ಆದರೆ 5ನೇ ವರ್ಷಕ್ಕೆ ಬೆಳೆಯ ಪ್ರಮಾಣ ಕುಸಿಯುತ್ತದೆ.

ಇಂದು ಸರ್ಕಾರವೇ ಹಲವು ಕೃಷಿ ಬಿಸಿನೆಸ್‌ಗಳಿಗೆ ಬಂಡವಾಳ ಕೊಡುವ ಹಲವಾರು ಯೋಜನೆಗಳು ಇವೆ. ಈ ಬಗ್ಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಪರ್ಕಿಸಿಯೂ ಮಾಹಿತಿ ಪಡೆದು ಮುಂದುವರೆಯಬಹುದು.

ಮೊಟ್ಟ ಮೊದಲ ಅಲೋವೆರಾ ಬೆಳೆಗಾರರಿಗೆ ಮಾರ್ಗದರ್ಶನ ಬೇಕಾದಲ್ಲಿ – ಕ್ಲಿಕ್ ಮಾಡಿ

ಅಲೋವೆರಾ ದ ಆರೋಗ್ಯಕರ ಉಪಯೋಗಗಳು(Health Benefits of Aloe Vera)

– ಅಲೋವೆರಾವನ್ನು ಬಹುಮುಖ್ಯವಾಗಿ ಮೂತ್ರ ಸಂಬಂಧಿ ಸಮಸ್ಯೆಗಳಿಗೆ, ಹುಣ್ಣುಗಳು ಮತ್ತು ಮೊಡವೆಗಳ ಚಿಕತ್ಸೆಗೆ ಬಳಸಲಾಗುತ್ತದೆ.

– ಅಲೋವೆರಾ ಸೂಕ್ಷ್ಮಜೀವಿ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ, ಸೋಂಕುನಿವಾರಕ, ಆಂಟಿವೈರಸ್, ಆಂಟಿವೈರಲ್, ಆಂಟಿಬಯೋಟಿಕ್ ಗುಣಗಳನ್ನು ಹೊಂದಿದ್ದು, ಎಲ್ಲಾ ರೋಗಗಳಿಗೆ ಉತ್ತಮ ಮೆಡಿಸನ್ ಆಗಿದೆ.

– ಅಲೋವೆರಾವನ್ನು ಚರ್ಮ ಚಿಕಿತ್ಸೆಗೆ ಮತ್ತು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ.

– ವಿಟಮಿನ್‌ಗಳು ಮತ್ತು ಮಿನೆರಲ್ಸ್‌ಗಳನ್ನು ಹೆಚ್ಚು ಹೊಂದಿರುವ ಉತ್ತಮ ಗಿಡಮೂಲಕೆ ಅಲೋವೆರಾ.

– ಅಮೈನೋ ಆಮ್ಲಗಳನ್ನು ಮತ್ತು ಕೊಬ್ಬಿನಾಮ್ಲಗಳನ್ನು ಅಲೋವೆರಾ ಅತ್ಯಧಿಕವಾಗಿ ಹೊಂದಿದೆ.

– ಅಲೋವೆರಾ ಉತ್ತಮ ಅಡಾಪ್ಟೋಜೆನ್ ಹೊಂದಿದೆ. ಅಂದರೆ ಈ ಅಂಶವು ದೇಹದಲ್ಲಿನ ವಿವಿಧ ಒತ್ತಡಗಳ ಸಮತೋಲನವನ್ನು ಕಾಪಾಡುವ ಕಾರ್ಯ ನಿರ್ವಹಿಸುತ್ತದೆ.

– ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡುತ್ತದೆ ಅಲೋವೆರಾ

– ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ.

– ಆರೋಗ್ಯಕರ ಹೃದಯಕ್ಕೆ ಅಲೋವೆರಾ ಸಹಾಯ ಮಾಡುತ್ತದೆ.

– ಪ್ರತಿರೋಧಕ ವ್ಯವಸ್ಥೆಯನ್ನು ಬೂಸ್ಟ್ ಮಾಡುವಲ್ಲಿ ಅಲೋವೆರಾ ಸಹಾಯ.

Aloe Vera’s business can help earn Rs.8 to 10 lakhs every Year. How to cultivate aloe vera, aloe vera farming in karnataka, aloe vera farming business plan information is here.

You may also like