ಹುವಾವೆ ವೈ9 ಪ್ರೈಮ್ 2019 ಸ್ಮಾರ್ಟ್‌ಫೋನ್ ಈಗ ಒಂದಲ್ಲಾ ಎರಡಲ್ಲಾ, ಹಲವಾರು ಕಾರಣಗಳಿಂದ ಮೊಬೈಲ್ ಪ್ರಿಯರ ನಿದ್ದೆಗೆಡಿಸಿದೆ. ಅವುಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಈ ಕೆಳಗಿನಂತಿದೆ ಓದಿರಿ..
ಹುವಾವೆ ವೈ9 ಪ್ರೈಮ್ 2019 ರೂ.16 ಸಾವಿರ ಕ್ಕೂ ಕಡಿಮೆ ಬಜೆಟ್‌ನ ಮೊಟ್ಟ ಮೊದಲ ಪಾಪ್-ಅಪ್ ಕ್ಯಾಮೆರಾ ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್ ಆಗಿದೆ. 6.59 ಇಂಚಿನ ಸಂಪೂರ್ಣ ಡಿಸ್‌ಪ್ಲೇ ಹೊಂದಿದ್ದು, ಅಗಲವಾದ ಆಂಗಲ್‌ನ ಪ್ರದರ್ಶನ ಅನುಭವ ನೀಡುತ್ತದೆ. ಅದು ನೀವು ಅಮೆಜಾನ್ ಪ್ರೈಮ್ ವಿಡಿಯೋ ಅಥವಾ ಯೂಟ್ಯೂಬ್‌ನ ವಿಡಿಯೋಗಳನ್ನು ನೋಡಿದರೂ ಕುತೂಹಲಕಾರಿ ಅನುಭವ ಸಿಗಲಿದೆ. ರೂ.15990 ಕ್ಕೆ ಖರೀದಿಸಬಹುದಾದ ಈ ಮೊಬೈಲ್, ಸೆಲ್ಫಿ ತೆಗೆಯಲು ಪೋಜ್‌ಕೊಟ್ಟ ಒಂದೇ ಸೆಕೆಂಡ್‌ನಲ್ಲಿ ಸ್ವಯಂಚಾಲಿತವಾಗಿ ಪಾಪ್-ಅಪ್ ಆಗುತ್ತದೆ. ಆಕಸ್ಮಿಕವಾಗಿ ಏನಾದರೂ ಸೆಲ್ಪಿ ತೆಗೆದಲ್ಲಿ ಸ್ವತಃ ಡಿಲೀಟ್ ಮಾಡುತ್ತದೆ ಎನ್ನಲಾಗಿದೆ.
ಹುವಾವೆ ವೈ9 ಪ್ರೈಮ್ ಸ್ಮಾರ್ಟ್‌ಫೋನ್ ನ ಇತರೆ ವೈಶಿಷ್ಟ್ಯಗಳು
– ಹುವಾವೆ ವೈ9 ಪ್ರೈಮ್ 2019 4GB RAM- 128GB ROM ಕಾಂಬಿನೇಷನ್‌ನಲ್ಲಿ ವ್ಯವಸ್ಥೆಗೊಂಡಿದ್ದು, ನೀಲಹಕ್ಕಿ ನೀಲಿ ಮತ್ತು ಪಚ್ಚೆ ಹಸಿರು ಎರಡು ಬಣ್ಣಗಳಲ್ಲಿ ಡಿವೈಸ್ ಲಭ್ಯವಿದೆ.
– ಸ್ವಯಂಚಾಲಿತ ಪಾಪ್-ಅಪ್ ನ 16MP ಮುಂಭಾಗ ಕ್ಯಾಮೆರಾ ಜೊತೆಗೆ f/2.2 ಧ್ಯುತಿರಂಧ್ರ ಮತ್ತು 16MP+8MP+2MP ಯ ಹಿಂಭಾಗ ಕ್ಯಾಮೆರಾಗಳನ್ನು ಹೊಂದಿದೆ. ಸೆಲ್ಪಿ ಕ್ಯಾಮೆರಾ ಫೋಟೋ ಕ್ಲಾರಿಟಿ, ರೆಸಲ್ಯೂಶನ್ ಮತ್ತು ಬೆಳಕು ಸಮನ್ವಯತೆ ಕಾಪಾಡಿಕೊಳ್ಳಲು 6 ಲೆನ್ಸ್‌ಗಳ ಜೊತೆಗೆ, ಹೆಚ್ಚುವರಿ ಗ್ಲಾಸ್ ಲೆನ್ಸ್ ವ್ಯವಸ್ಥೆ ಹೊಂದಿದೆ.
– ಹೆಚ್ಚುವರಿಯಾಗಿ ಹುವಾವೆ ವೈ9 ಪ್ರೈಮ್ ಡಿವೈಸ್ ಬುದ್ಧಿವಂತ 3ಡಿ ಭಾವಚಿತ್ರ ವೈಶಿಷ್ಟ್ಯ ಹೊಂದಿದೆ. ಹಿಂಭಾಗ ಮತ್ತು ಮುಂಭಾಗ ಎರಡು ಕ್ಯಾಮೆರಾಗಳು ಡಿವೈಸ್‌ನಲ್ಲೇ ಸ್ಟುಡಿಯೋ ಕ್ವಾಲಿಟಿ ನೀಡಿ ರೀಟಚ್ ಮಾಡುವ ವಿಶೇಷ ಗುಣಗಳನ್ನು ಹೊಂದಿವೆ. ನೀವು ಯಾವ ಸ್ಥಳದಲ್ಲೇ ಫೋಟೋ ತೆಗೆದರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
– 128GB ROM ಅನ್ನು 512GB ಮೆಮೊರಿ ಸಾಮರ್ಥ್ಯದ ವರೆಗೂ ಹೆಚ್ಚಿಸಬಹುದು. ಈ ಮೊಬೈಲ್‌ನಲ್ಲಿ ತೆಗೆದ ಫೋಟೋಗಳ ಮೆಮೊರಿಗಳನ್ನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲದಂತಹ ಅನುಭವವನ್ನು ಡಿವೈಸ್ ನೀಡಲಿದೆಯಂತೆ.
ಈ ಡಿವೈಸ್ ಎಷ್ಟೇ ಫೀಚರ್‌ಗಳನ್ನು ಹೊಂದಿದ್ದರೂ, ಮಾರುಕಟ್ಟೆಗೆ ಬಂದ ನಂತರ ಮೊದಲ ರಿವೀವ್ ವರೆಗೂ ಕಾಯಬೇಕಿದೆ.