Home » BEML ಅಪ್ರೆಂಟಿಶಿಪ್ ತರಬೇತಿಗೆ ಅರ್ಜಿ: ಡಿ. 20 ಕೊನೆ ದಿನ

BEML ಅಪ್ರೆಂಟಿಶಿಪ್ ತರಬೇತಿಗೆ ಅರ್ಜಿ: ಡಿ. 20 ಕೊನೆ ದಿನ

by manager manager

Application invited for BEML apprenticeship training for one year

ಕೋಲಾರ ಗೋಲ್ಡ್ ಫೀಲ್ಡ್ ಬಿಇಎಂಎಲ್ ತರಬೇತಿ ಕೇಂದ್ರ ಟೆಕ್ನಿಕಲ್ ಕೋರ್ಸ್‌ಗಳಲ್ಲಿ 3 ವರ್ಷ ಡಿಪ್ಲೊಮೊ ಮತ್ತು 4 ವರ್ಷ ಇಂಜಿನಿಯರಿಂಗ್ ಪದವಿ ಮುಗಿಸಿರುವ ಅರ್ಹ ಅಭ್ಯರ್ಥಿಗಳಿಂದ ಒಂದು ವರ್ಷದ ಅವಧಿಯ ಅಪ್ರೆಂಟಿಶಿಪ್ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಈ ಕೆಳಗಿನ ಬ್ರ್ಯಾಂಚ್‌ಗಳಲ್ಲಿ ಡಿಪ್ಲೊಮೊ ಮತ್ತು ಇಂಜಿನಿಯರಿಂಗ್ ಮುಗಿಸಿರಬೇಕು.

– ಮೆಕಾನಿಕಲ್ ಇಂಜಿನಿಯರಿಂಗ್

– ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್

– ಎಲೆಕ್ಟ್ರಾನಿಕ್ಸ್ ಕಂಮ್ಯುನಿಕೇಷನ್ ಇಂಜಿನಿಯರಿಂಗ್

– ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್

– ಆಟೋಮೊಬೈಲ್ ಇಂಜಿನಿಯರಿಂಗ್

ಸಿವಿಲ್ ಇಂಜಿನಿಯರಿಂಗ್

-ಈಗಾಗಲೇ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.

-ಬಿಇಎಂಲ್ ಅಪ್ರೆಂಟಿಶಿಪ್‌ ತರಬೇತಿಗಾಗಿ ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ಅವರ ಮೆರಿಟ್ ಆಧಾರದ ಮೇಲೆ ಮತ್ತು ಸರ್ಕಾರದ ಮೀಸಲಾತಿ ಅನುಸರವಾಗಿ ಆಯ್ಕೆ ಮಾಡಲಾಗುತ್ತದೆ.

– ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-12-2018

– ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ಸೆಮಿಸ್ಟರ್‌ನ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿ, ಪದವಿ ಸರ್ಟಿಫಿಕೇಟ್ ಜೆರಾಜ್ಸ್ ಪ್ರತಿಗಳೊಂದಿಗೆ “THE MANAGER TRAINING, BEML LTD, KGF COMPLEX” ವಿಳಾಸಕ್ಕೆ ಅರ್ಜಿಯನ್ನು ತಲುಪಿಸಬೇಕು.

-ಅಭ್ಯರ್ಥಿಗಳು ತಮ್ಮ ಹೆಸರನ್ನು NATS(National Apprentiship Training Scheme) ಅಧಿಕೃತ ವೆಬ್‌ಸೈಟ್ www.mhrdnats.gov.in/ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

– ಈಗಾಗಲೇ ರಿಜಿಸ್ಟರ್ ಮಾಡಿಸಿರುವವರು ರಿಜಿಸ್ಟ್ರೇಷನ್ ನಂಬರ್ (ಯೂಸರ್ ಐಡಿ) ಮತ್ತು ಅರ್ಜಿಯನ್ನು ತೆಗೆದುಕೊಳ್ಳಲು ತಿಳಿಸಲಾಗಿದೆ.

BEML training center Kolar Gold Fields has invited application for apprenticeship training for one year. Read more here..

You may also like