Home » ಬೆಲ್ಲ ಸೇವಿಸುವುದರಿಂದಾಗುವ ಪ್ರಯೋಜನೆಗಳೇನು ಗೊತ್ತಾ..?

ಬೆಲ್ಲ ಸೇವಿಸುವುದರಿಂದಾಗುವ ಪ್ರಯೋಜನೆಗಳೇನು ಗೊತ್ತಾ..?

by manager manager

ಬೆಲ್ಲ ಕೇವಲ ಸಿಹಿ ಪದಾರ್ಥವಾಗಿರದೆ, ಔಷಧಿಯುಕ್ತ ಸಿಹಿಯಾಗಿದೆ. ಇಂದು ಬೆಲ್ಲವನ್ನು ಸಕ್ಕರೆಗೆ ಪರ್ಯಾಯವಾಗಿ ಬಳಸುವವರ ಸಂಖ್ಯೆ ವಿರಳ. ಆದರೆ ಬೆಲ್ಲಕ್ಕಿರುವ ಅನೇಕ ಆರೋಗ್ಯಕಾರಿ ಗುಣಗಳು ಸಕ್ಕರೆಗಿಂತಲೂ ವಿಶಿಷ್ಟವಾದದ್ದು. ಬೆಲ್ಲದಿಂದಾಗುವ ಉಪಯೋಗಗಳ ಬಗ್ಗೆ ಬಲ್ಲ ತಿಂದವರಿಗೆ ಮಾತ್ರವೇ ತಿಳಿದಿರುತ್ತದೆ.

ಇಂದು ವೈದ್ಯರೇ ಸಕ್ಕರೆಯ ಬದಲು ಬೆಲ್ಲವನ್ನು ಬಳಸಲು ಸಲಹೆ ನೀಡುತ್ತಾರೆ. ಕಾರಣ ಹೆಚ್ಚುತ್ತಿರುವ ಕಾಯಿಲೆಗಳಿಗೆ ಸಕ್ಕರೆ ಕೂಡ ಒಂದು ಕಾರಣ. ಹೆಚ್ಚಾಗಿ ನೀವು ಸಕ್ಕರೆಯಿಂದ ಮಾಡಿದ ಸಿಹಿ ತಿನಿಸುಗಳನ್ನು ತಿನ್ನುತ್ತಾ ಹೋದರೆ ನಿಮಗರಿವಿಲ್ಲದಂತೆ ಕ್ಯಾನ್ಸರ್​, ಮಧುಮೇಹದಂತ ಕಾಯಿಲೆಗಳು ನಮ್ಮ ದೇಹದಲ್ಲಿ ಮನೆಮಾಡುತ್ತವೆ. ಆದ್ದರಿಂದ ಬೆಳ್ಳಗೆ ಕಾಣುವ ಸಕ್ಕರೆಗಿಂತಲೂ ಬೆಲ್ಲ ಅತ್ಯುತ್ತಮ.

ಇನ್ನು ಬೆಲ್ಲ ಸೇವನೆಯಿಂದ ಆಗುವ ಪ್ರಯೋಜನಗಳು ಬಹಳಷ್ಟಿದೆ. ಸಂಧಿವಾತ, ಅಸ್ತಮಾಗಳಿಗೂ ಬೆಲ್ಲ ಉತ್ತಮ ಮದ್ದು. ಬೆಲ್ಲದ ಸೇವನೆಯಿಂದ ತೂಕ ಹೆಚ್ಚುವುದಿಲ್ಲ. ದೇಹದ ಒಳಗಿನಿಂದಲೂ ಮತ್ತು ವಿಶೇಷವಾಗಿ ಚರ್ಮದ ಕಾಂತಿಯನ್ನು ಹೆಚ್ಚಿಸುವ ಮೂಲಕ ಬೆಲ್ಲ ಉತ್ತಮ ಸೌಂದರ್ಯವರ್ಧಕವೂ ಆಗಿದೆ. ಹೀಗಾಗಿ ನೋಡಲಿಕೆ ಕಂದು ಅಥವಾ ಕಪ್ಪಗಿರುವ ಕಾರಣ ತಿನ್ನಲು ಹಿಂದೇಟು ಹಾಕುವವರಿಗೆ ಇಂದು ಕನ್ನಡ ಅಡ್ವೈಜರ್ ಬೆಲ್ಲ ಸೇವನೆಯಿಂದ ದೇಹಕ್ಕಾಗುವ ಪ್ರಯೋಜನಗಳನ್ನು ತಿಳಿಸಿಕೊಡಲಿದೆ.

Health Benefits Of Eating jaggery: jaggery better than sugar

ಬೆಲ್ಲ ಸೇವಿಸುವುದರಿಂದ ಏನು ಲಾಭ..?

1. ತಾರುಣ್ಯ ಕಾಪಾಡುತ್ತದೆ:

ಬೆಲ್ಲದಿಂದ ಇಷ್ಟೆಲ್ಲಾ ಆರೋಗ್ಯಕರ ಉಪಯೋಗಗಳು ಸಾಧ್ಯ ಆಗುವುದಕ್ಕೆ ಒಂದು ಕಾರಣ ಎಂದರೆ ಅದರಲ್ಲಿರುವ ಅಪಾರ ಪ್ರಮಾಣದ ಆಂಟಿ-ಆಕ್ಸಿಡಾಂಟ್ಸ್’ಗಳು. ಮುಖ್ಯವಾಗಿ ಬೆಲ್ಲದಲ್ಲಿರುವ ಸೆಲೇನಿಯಂ ಮುಕ್ತ ರಾಡಿಕಲ್ಸ್ ಗಳ ಅಪಾಯಕಾರಿ ಪರಿಣಾಮಗಳನ್ನು ನಿಲ್ಲಿಸುತ್ತದೆ. ಸಾಮಾನ್ಯವಾಗಿ ಹೇಳಬೇಕೆಂದರೆ , ಇದು ನಿಮ್ಮ ದೇಹದ ಆಯಸ್ಸು ಹೆಚ್ಚಿಸಿ ಮತ್ತು ನೀವು ತಾರುಣ್ಯತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Health Benefits Of Eating jaggery: jaggery better than sugar

2. ಹಾಲಿನೊಂದಿಗೆ ಸೇವಿಸಿದರೆ:

ಬೆಲ್ಲವನ್ನು ನೀರಿನೊಂದಿಗೆ ಸೇವಿಸುವುದರ ಬದಲು ಹಾಲಿನೊಂದಿಗೆ ಸೇವಿಸಿದರೆ ಉತ್ತಮ ಎಂದು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ರಕ್ತದ ಶುದ್ಧೀಕರಣಕ್ಕೆ ಬೆಲ್ಲ ಸೇರಿಸಿದ ಹಾಲಿನ ಸೇವನೆ ಉತ್ತಮ. ಸಕ್ಕರೆ ಸೇವನೆಯಿಂದ ದೇಹದ ತೂಕ ಹೆಚ್ಚುವುದು ಖಚಿತ. ಆದರೆ, ಬೆಲ್ಲ ಸೇವನೆಯಿಂದ ತೂಕ ಹೆಚ್ಚುವುದಿಲ್ಲ. ಹಾಲು ಮತ್ತು ಬೆಲ್ಲ ಸೇರಿದರೆ, ಎರಡರಲ್ಲಿನ ಉತ್ತಮ ಗುಣಗಳು ದೇಹಕ್ಕೆ ಸೇರ್ಪಡೆಯಾಗುತ್ತವೆ. ಪ್ರತಿದಿನ ಒಂದು ತುಂಡು ಬೆಲ್ಲವನ್ನು ಕುಟ್ಟಿ ಪುಡಿಮಾಡಿ ಹಾಲಿನ ಜತೆ ಬೆರೆಸಿ ಕುಡಿದರೆ, ಆರೋಗ್ಯಕರ ಲಾಭ ದೊರೆಯಲಿದೆ. ಇನ್ನು ನಿತ್ಯವೂ ಚಿಕ್ಕ ತುಂಡು ಬೆಲ್ಲವನ್ನು ಆಹಾರದೊಂದಿಗೆ ಸೇರಿಸುವ ಮೂಲಕ ಮುಖದಲ್ಲಿ ಮೊಡವೆಗಳನ್ನು ನಿಯಂತ್ರಿಸಬಹುದು.

3. ಮುಟ್ಟಿನ ನೋವು ಶಮನ:

ಅತಿ ಹೆಚ್ಚು ಪೋಷಕಾಂಶಗಳ ಪ್ರಮಾಣ ಹೊಂದಿರುವ ಬೆಲ್ಲವು ಮುಟ್ಟಿನ ಸಮಯದ ನೋವನ್ನು ಕಡಿಮೆ ಮಾಡುತ್ತದೆ. ಮಾಸಿಕ ದಿನಗಳ ಹಿಂದಿನ ಮತ್ತು ನಂತರದ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ನೋವಿನಿಂದ ಪಾರಾಗಲು ಒಂದು ಚಿಕ್ಕಚಮಚದಷ್ಟು ಬೆಲ್ಲದ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಕುಡಿಯಬೇಕು. ಬೆಲ್ಲವು ಎಂಡೋರಫಿನ್ಸ್ ಬಿಡುಗಡೆಯನ್ನು ವೃದ್ಧಿಸಿ, ನಿಮ್ಮ ದೇಹವು ಶಾಂತವಾಗುವಂತೆ ಮಾಡುತ್ತದೆ. ಇದು ನೀವು ನಿಮ್ಮ ಮಾನಸಿಕ ತುಲನೆಯನ್ನು ಕಾಪಾಡಿಕೊಳ್ಳಲು ಸಹಕರಿಸುತ್ತದೆ.

4. ದೇಹವನ್ನು ಶುಚಿಗೊಳಿಸುತ್ತದೆ:

ಸಂಶೋಧಕರು ಬೆಲ್ಲವು ಹೇಗೆ ದೇಹವನ್ನು ಶುಚಿಗೊಳಿಸುತ್ತದೆ ಎಂಬುದನ್ನು ಪುರಾವೆಗಳ ಮೂಲಕ ಸಾಬೀತು ಮಾಡಿದ್ದಾರೆ. ಇದು ನಿಮ್ಮ ಉಸಿರಾಟಾದ ಕೊಳವೆಯನ್ನು, ಶ್ವಾಸಕೋಶವನ್ನು, ಕರುಳುಗಳನ್ನು, ಹೊಟ್ಟೆಯನ್ನೂ ಕೂಡ ಶುಚಿಗೊಳಿಸುತ್ತದೆ. ಇದು ನಿಮ್ಮ ದೇಹದಲ್ಲಿನ ಬೇಡದ ವಸ್ತುಗಳೊಂದಿಗೆ ಧೂಳನ್ನು ಹೊರಹಾಕುತ್ತದೆ. ಅಲ್ಲದೆ ಇದು ಕರುಳಿನ ಚಲನೆಯನ್ನು ವೃದ್ಧಿಸಿ, ಹೊಟ್ಟೆ ಕಟ್ಟಿಕೊಳ್ಳದಂತೆ ಕಾಪಾಡುತ್ತದೆ.

Health Benefits Of Eating jaggery: jaggery better than sugar

5. ತೂಕ ಇಳಿಕೆಗೆ ಸಹಾಯ:

ಬೆಲ್ಲದಲ್ಲಿರುವ ಪೊಟ್ಯಾಸಿಯಂ ಅಂಶವು ನಿಮಗೆ ತೂಕ ಇಳಿಸುವುದರಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಪೊಟ್ಯಾಸಿಯಂ ನಿಮ್ಮ ದೇಹದಲ್ಲಿ ಅಗತ್ಯವಿರುವ ಎಲೆಕ್ಟ್ರೋಲೈಟ್ಸ್ ತುಲನೆ, ಸ್ನಾಯುಗಳ ಬೆಳವಣಿಗೆ, ಮೆಟಬೋಲಿಸಂ ವೃದ್ಧಿ ಯಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ಇದು ನೀರಿನಾಂಶದ ಸ್ವಾಧೀನತೆ ಕಡಿಮೆ ಮಾಡಿ ತೂಕ ಇಳಿಕೆಯಲ್ಲಿ ಸಹಾಯ ಮಾಡುತ್ತದೆ. ನೀರಿನಾಂಶದ ತೊರೆಯುವಿಕೆ ಮತ್ತು ಮೆಟಬೋಲಿಸಂ ವೇಗ ಹೆಚ್ಚಿಸುವಿಕೆಯೇ ತೂಕ ಇಳಿಸುವಿಕೆಯಲ್ಲಿ ಅತಿಮುಖ್ಯವಾಗಿ ಬೇಕಿರುವುದು. ಹೀಗಾಗಿ, ನೀವು ನಿಮ್ಮ ದೈನಂದಿನ ಆಹಾರಪದ್ದತಿಯಲ್ಲಿ ಬೆಲ್ಲವನ್ನು ಬಳಸಬೇಕು. ಅದು ಯಾವುದೇ ರೀತಿಯಲ್ಲಿ ಆದರೂ ಪರವಾಗಿಲ್ಲ.

Health Benefits Of Eating jaggery: jaggery better than sugar

6. ರಕ್ತದೊತ್ತಡ, ರಕ್ತಹೀನತೆಯನ್ನು ತಡೆಗಟ್ಟುತ್ತದೆ:

ರಕ್ತಹೀನತೆ ಅಥವಾ ಅನೀಮಿಯಾ ಈಗೀಗ ಬಹಳಷ್ಟು ಕಂಡು ಬರುತ್ತಿರುವ ಒಂದು ಅಸ್ವಸ್ಥತೆ. ಆದರೆ ಅದೃಷ್ಟವಶಾತ್, ಬೆಲ್ಲದಲ್ಲಿ ಇರುವ ಅಪಾರ ಪ್ರಮಾಣದ ಕಬ್ಬಿಣದ ಅಂಶ ಮತ್ತು ಫೋಲೇಟ್ ಅಂಶವು ಇದ್ದು, ಇವುಗಳು ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಸರಿಯಾದ ಪ್ರಮಾಣದಲ್ಲಿ ಇರಿಸಿ ನೀವು ರಕ್ತಹೀನತೆಯಿಂದ ಬಳಲುವುದನ್ನು ತಪ್ಪಿಸುತ್ತವೆ. ಮುಖ್ಯವಾಗಿ ಗರ್ಭಿಣಿ ಹೆಂಗಸರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಬೆಲ್ಲದ ಇನ್ನೊಂದು ಉಪಯೋಗ ಎಂದರೆ ಅದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ. ಬೆಲ್ಲದಲ್ಲಿ ಅಪಾರ ಪ್ರಮಾಣದ ಪೊಟ್ಯಾಸಿಯಂ ಮತ್ತು ಸೋಡಿಯಂ ಇದ್ದು, ಇವು ನಿಮ್ಮ ದೇಹದಲ್ಲಿ ಆಮ್ಲಗಳ ಗತಿಯನ್ನು ತುಲನೆಯಲ್ಲಿ ಇಡಲು ತುಂಬಾ ಸಹಾಯ ಮಾಡುವಂತವು. ಈ ತುಲನೆ ಕಾಪಾಡಿಕೊಂಡರೆ ದೇಹದ ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ.

Jaggery is a sweetener. popular as a “healthy” replacement for sugar. jaggery better than sugar Jaggery contains more nutrients than refined sugar because of its molasses content. Jaggery Have many Health Benefits?

You may also like