Home » ಬೆಲ್ಲದಲ್ಲಿನ ಆರೋಗ್ಯಕರ ಅಂಶಗಳೇನು? ಆರೋಗ್ಯದಲ್ಲಿ ತನ್ನ ಪಾತ್ರವನ್ನು ಹೇಗೆ ನಿರ್ವಹಿಸುತ್ತದೆ?

ಬೆಲ್ಲದಲ್ಲಿನ ಆರೋಗ್ಯಕರ ಅಂಶಗಳೇನು? ಆರೋಗ್ಯದಲ್ಲಿ ತನ್ನ ಪಾತ್ರವನ್ನು ಹೇಗೆ ನಿರ್ವಹಿಸುತ್ತದೆ?

by manager manager

ಬೆಲ್ಲ ಕೇವಲ ಬಾಯಿಗೆ ಸಿಹಿ ಮಾತ್ರವೇ ಕೊಡುವುದು ಎಂದು ತಿಳಿದಿರುವ ನಮ್ಮ ಜನರಿಗೆ ಇದರಲ್ಲಿರುವ ಅತ್ಯಾಮೂಲ್ಯ ಅಂಶಗಳು ಮತ್ತು ಇದರಿಂದಾಗುವ ಪ್ರಯೋಜನಗಳನ್ನು ತಿಳಿಸಿಕೊಡುವ ಪ್ರಯತ್ನ ನಮ್ಮದು. ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ನಮ್ಮ ಪೂರ್ವಜರು ಬೆಲ್ಲ ತಿಂದು ನೀರು ಕುಡಿಬೇಕು ಅನ್ನುತ್ತಿದ್ದರು ಆ ಮಾತಿನ ಹಿಂದಿನ ಸತ್ಯವನ್ನು ಇವತ್ತು ಬಯಲಿಗೆಳೆಯಲ್ಲಿದ್ದೇವೆ. ಬೆಲ್ಲದಲ್ಲಿ ಕಬ್ಬಿಣಾಂಶ ಮತ್ತು ಖನಿಜಾಂಶಗಳು ಕಂಡು ಬರುವುದರಿಂದ ಇದನ್ನು ದಿನನಿತ್ಯದ ಆಹಾರದಲ್ಲಿ ಬಳಸುವುದು ಉತ್ತಮ. ಮುಖ್ಯವಾಗಿ ಸಕ್ಕರೆಗೆ ಬದಲಾಗಿ ಬೆಲ್ಲದ ಬಳಕೆ ತುಂಬ ಒಳ್ಳೆಯದು.

  • ಬೆಲ್ಲದಿಂದ ರಕ್ತದೊತ್ತಡ ನಿಯಂತ್ರಣ ಸಾಧ್ಯ ಹೇಗೆಂದರೆ ಬೆಲ್ಲದಲ್ಲಿ ಪೊಟಾಸಿಯಮ್ ಮತ್ತು ಸೋಡಿಯಮ್ ಅಂಶಗಳು ಹೆಚ್ಚಿವೆ. ದೇಹದ ಆಡ್ಯ್1 ಪ್ರಮಾಣವನ್ನು ನಿಯಂತ್ರಣ ಮಾಡುತ್ತವೆ. ಇದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ.
  • ಉಸಿರಾಟದ ಸಮಸ್ಯೆಗಳಿಗೆ ಔಷಧ ಈ ಬೆಲ್ಲ, ಅಸ್ತಮಾ ಮತ್ತು ಶ್ವಾಸನಾಳಗಳ ಒಳಪೊರೆಯ ಉರಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ದಿನನಿತ್ಯ ಬೆಲ್ಲ ತಿಂದರೆ ಒಳ್ಳೆಯದು. ಅಲರ್ಜಿಯನ್ನು ನಿಯಂತ್ರಿಸುವ ಗುಣವಿದ್ದು, ಉಸಿರಾಟದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.
  • ನಮ್ಮ ಆಹಾರ ಪದ್ಧತಿಯಲ್ಲಿ ಬೆಲ್ಲವನ್ನು ಬಳಸುವುದರಿಂದ ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡಬಹುದು. ಇದರಲ್ಲಿರುವ ಐರನ್ ಅಂಶ ರಕ್ತದ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.
  • ಗಂಟು ನೋವು ನಿವಾರಣೆಯಲ್ಲಿ ಈ ಬೆಲ್ಲವನ್ನು ಹಾಲು ಅಥವಾ ಶುಂಠಿಯ ಜತೆಗೆ ಸೇವಿಸುವುದರಿಂದ ಗಂಟು ನೋವು ಕಾಣೆಯಾಗುತ್ತದೆ. ಮೂಳೆಯ ಶಕ್ತಿಯನ್ನು ಹೆಚ್ಚಿಸುತ್ತದೆ. ಸಂಧಿವಾತದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.
  • ಬೆಲ್ಲದಿಂದ ತೂಕ ಇಳಿಕೆಯಲ್ಲಿ ಪೊಟಾಸಿಯಮ್ ಅಂಶವು ಹೆಚ್ಚಿರುವುದರಿಂದ ಇಲೆಕ್ಟ್ರೋಲೈಸಿಸ್‍ಅನ್ನು ನಿಯಂತ್ರಿಸುತ್ತದೆ. ಸ್ನಾಯುಗಳು ಶಕ್ತಿಯುತವಾಗುತ್ತವೆ. ಜೀರ್ಣ ಕ್ರಿಯೆ ಹೆಚ್ಚಾಗುತ್ತದೆ. ದೇಹದಲ್ಲಿ ನೀರಿನ ಧಾರಣವನ್ನು ಕಡಿಮೆ ಮಾಡುವುದರಿಂದ ಕ್ರಮೇಣ ತೂಕದ ಇಳಿಕೆಯಾಗುತ್ತದೆ.
  • ದೇಹಕ್ಕೆ ಬಲ ತುಂಬುವ ಈ ಬೆಲ್ಲದಲ್ಲಿ ಕಾರ್ಬೋಹೈಡ್ರೇಟ್ ದೇಹಕ್ಕೆ ಶಕ್ತಿಯನ್ನು ತುಂಬಿ ಆಯಾಸ ಮತ್ತು ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ.
  • ನಾರಿನಂಶದ ಒತ್ತಡದಿಂದ ದೇಹಕ್ಕೆ ಬೇಡದ ಅಂಶಗಳು ಹೊರ ಹೋಗುತ್ತವೆ. ಇದರಿಂದ ಜೀರ್ಣ ಕ್ರಿಯೆ, ಮಲ ವಿಸರ್ಜನೆ ಚೆನ್ನಾಗಿ ಆಗುತ್ತದೆ. ಅಜೀರ್ಣ, ಮಲಬದ್ಧತೆ, ವಾಯು, ಕರುಳಿನ ಹುಳುಗಳು ಮತ್ತಿತರ ಸಮಸ್ಯೆಗಳನ್ನು ಬೆಲ್ಲ ನಿವಾರಣೆ ಮಾಡುತ್ತದೆ.
  • ಲಿವರ್‍ಅನ್ನು ಸ್ವಚ್ಛಗೊಳಿಸುವ ಈ ಬೆಲ್ಲ ದೇಹದಲ್ಲಿನ ಅಪಾಯಕಾರಿ ಟಾಕ್ಸಿನ್‍ಗಳನ್ನು ತೊಳೆದು ಹಾಕುತ್ತದೆ.
  • ಕೆಮ್ಮು, ಶೀತ ಮತ್ತು ಜ್ವರಕ್ಕೆಲ್ಲ ಬೆಲ್ಲ ಅನಾದಿ ಕಾಲದಿಂದಲೂ ಮದ್ದು. ಬಿಸಿ ನೀರಲ್ಲಿ, ಟೀಯಲ್ಲಿ ಅಥವಾ ಇತರ ಪಾನಿಯದಲ್ಲಿ ಮಿಶ್ರ ಮಾಡಿ ಕುಡಿಯುವುದು ಉತ್ತಮ.
  • ಬೆಲ್ಲದ ಪ್ರಮುಖ ಗುಣವೇ ರಕ್ತವನ್ನು ಶುದ್ಧೀಕರಣ ಮಾಡುವುದಾಗಿದೆ. ನಮ್ಮ ದೇಹವನ್ನು ಸ್ವಚ್ಛಗೊಳಿಸುವ ಸೇವಕನಂತೆ ಬೆಲ್ಲ ಕೆಲಸ ಮಾಡುತ್ತದೆ.
  • ಬೆಲ್ಲದಲ್ಲಿರುವ ಆ್ಯಂಟಿಆಕ್ಸಿಡೆಂಟ್‍ಗಳು ಮತ್ತು ಖನಿಜಗಳು ರೋಗ ನಿರೋದಕ ಶಕ್ತಿಗಳನ್ನು ಹೆಚ್ಚಿಸುತ್ತದೆ.
  • ಪ್ರತಿದಿನ ಬೆಲ್ಲ ತಿನ್ನುವುದರಿಂದ ಮುಟ್ಟಿನ ನೋವು ಸಮಸ್ಯೆ ನಿವಾರಣೆಯಾಗುತ್ತದೆ. ದೇಹವನ್ನು ಸಂತುಷ್ಟಗೊಳಿಸುವ ಎಂಡಾರ್ಫಿನ್‍ಗಳು ವೃದ್ಧಿಯಾಗುತ್ತವೆ.
  • ಸಿಹಿ ಪಾನಿಯಗಳಿಗಿಂತ ಸಿಹಿ ಬೆಲ್ಲ ಪ್ರಯತ್ನಿಸಬಹುದು. ಆಯುರ್ವೇದದ ಪ್ರಕಾರ ದೇಹವನ್ನು ಶುಚಿಗೊಳಿಸುತ್ತದೆ. ದೇಹದಲ್ಲಿರುವ ವಿಷಯುಕ್ತ ಅಂಶಗಳನ್ನು ತೆಗೆದು ಹಾಕುತ್ತದೆ. ಹೆಚ್ಚು ಮಾಲಿನ್ಯಗೊಂಡ ಪ್ರದೇಶಗಳಲ್ಲಿ ಜೀವಿಸುವವರಿಗೆ ಬೆಲ್ಲ ಸೇವನೆ ಅತ್ಯಂತ ಸೂಕ್ತ.
  • ಬೆಲ್ಲದಲ್ಲಿ ಕಬ್ಬಿಣ ಅಂಶ ಮತ್ತು ಫೋಲೇಟ್ ಅಂಶ ಶ್ರೀಮಂತವಾಗಿದೆ. ಫೋಲೇಟ್ ಎಂದರೆ ಆರ್‍ಬಿಸಿಯ ಸಾಮಾನ್ಯ ಮಟ್ಟವನ್ನು ಕಾಪಾಡುವ ಅಂಶವಾಗಿದೆ. ಆದ್ದರಿಂದ ರಕ್ತ ಹೀನತೆಯನ್ನು ತಡೆಗಟ್ಟಬಹುದು. ಮಹಿಳೆಯರು ಪ್ರತಿದಿನ ಬೆಲ್ಲವನ್ನು ತಿನ್ನಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ದೇಹಕ್ಕೆ ಅತೀವ ಶಕ್ತಿಯನ್ನು ಬೆಲ್ಲ ಒದಗಿಸುತ್ತದೆ.
  • ಬೆಲ್ಲದಲ್ಲಿ ಮೆಗ್ನೀಸಿಯಮ್ ಅಧಿಕ. ಇದು ಕರುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ 5 ಗ್ರಾಮ್ ಬೆಲ್ಲದಲ್ಲಿ 5 ಮಿಲಿಗ್ರಾಮ್ ಮೆಗ್ನೀಸಿಯಮ್ ಇರುತ್ತದೆ.
  • ಅಸಿಡಿಟಿಯನ್ನು ನಿಯಂತ್ರಿಸುವುದಕ್ಕೆ ಬೆಲ್ಲ ಹೆಸರುವಾಸಿ. ಇದು ದೇಹದ ಸಾಮಾನ್ಯ ಉಷ್ಣತೆಯನ್ನು ಕಾಪಾಡುವುದರಿಂದ ಹೊಟ್ಟೆ ತಣ್ಣಗಿರಿಸುತ್ತದೆ.

ಕೆಂಪಕ್ಕಿಯಿಂದ ನಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು? ಕೆಂಪಕ್ಕಿಯ ವಿಶೇಷತೆಗಳೇನು?

You may also like