Home » ನಿಮ್ಮ ಹತ್ತಿರದ ಪರ್ಮನೆಂಟ್ ಆಧಾರ್ ಕೇಂದ್ರ ಯಾವುದು ಚೆಕ್‌ ಮಾಡುವುದು ಹೇಗೆ?

ನಿಮ್ಮ ಹತ್ತಿರದ ಪರ್ಮನೆಂಟ್ ಆಧಾರ್ ಕೇಂದ್ರ ಯಾವುದು ಚೆಕ್‌ ಮಾಡುವುದು ಹೇಗೆ?

by manager manager

ಇನ್ನೂ ಬಹುಸಂಖ್ಯಾತ ಜನರಿಗೆ ತಮ್ಮ ಹಳ್ಳಿಗೆ, ತಾವು ಇರುವ ಸ್ಥಳಕ್ಕೆ ಹತ್ತಿರದಲ್ಲಿ ಇರುವ ಶಾಶ್ವತ ಆಧಾರ್ ಕೇಂದ್ರ ಯಾವುದು ಎಂಬುದು ಗೊತ್ತೇ ಇಲ್ಲ.

ಆಧಾರನಲ್ಲಿನ ತಪ್ಪು ಮಾಹಿತಿಗಳ ತಿದ್ದುಪಡಿಗಾಗಿ ತಮ್ಮ ಹೋಬಳಿ ಮತ್ತು ತಾಲ್ಲೂಕು ಕೇಂದ್ರಗಳಿಗೆ ಹೋಗಿ ಆಧಾರ್‌ ಕೇಂದ್ರ ಹುಡುಕಾಟದಲ್ಲಿ ಪೇಚಾಡುವುದು ಉಂಟು. ಆದರೆ ಮೊದಲೇ ತಮ್ಮ ಹತ್ತಿರದ ಶಾಶ್ವತ ಆಧಾರ್‌ ಕೇಂದ್ರ ಯಾವುದು ಎಂದು ತಿಳಿದುಕೊಂಡು ಹೋದರೆ ಉತ್ತಮ ಅಲ್ಲವೇ. ಹಾಗೆ ಸರ್ಕಾರಿ ಕಛೇರಿಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿದರೆ ಖಾಸಗಿ ಕಂಪ್ಯೂಟರ್‌ ಕೇಂದ್ರಗಳು ಕೇಳವು ಅತ್ಯಧಿಕ ಹಣ ಕೊಡುವುದು ಸಹ ತಪ್ಪುತ್ತದೆ.

ಆದ್ದರಿಂದ ನಮ್ಮ ಕನ್ನಡಿಗರು ಕಡಿಮೆ ಬೆಲೆಯಲ್ಲಿ ಆಧಾರ್ ತಿದ್ದುಪಡಿ ಅಥವಾ ಆಧಾರ್‌ ಅನ್ನು ಹೊಸದಾಗಿ ಪಡೆಯಲು ತಮ್ಮ ಹತ್ತಿರದ ಪರ್ಮನೆಂಟ್ ಆಧಾರ್‌ ಕೇಂದ್ರವನ್ನು ಆನ್‌ಲೈನ್‌ ನಲ್ಲಿ ಸುಲಭವಾಗಿ ತಿಳಿಯುವುದು ಹೇಗೆ ಎಂದು ಇಲ್ಲಿ ನಾವು ತಿಳಿಸುತ್ತಿದ್ದೇವೆ.

ಈ ಕೆಳಗಿನ ಸರಳ ಹಂತಗಳನ್ನು ಫಾಲೋ ಮಾಡಿ

– https://resident.uidai.gov.in/ ಕ್ಲಿಕ್ ಮಾಡಿ ಓಪನ್‌ ಆಗುವ ವೆಬ್‌ಪೇಜ್‌ನಲ್ಲಿ Locate an Enrolment Center ಎಂಬುದನ್ನು ಆಯ್ಕೆ ಮಾಡಿ.

– ಓಪನ್ ಆದ ಪೇಜ್‌ ನಲ್ಲಿ State ಎಂಬಲ್ಲಿ ಕ್ಲಿಕ್ ಮಾಡಿ.

– ಈ ಪೇಜ್‌ ನಲ್ಲಿ ನೀವು ಹಂತ ಹಂತವಾಗಿ ರಾಜ್ಯ>>ಜಿಲ್ಲೆ>>ಉಪ ಜಿಲ್ಲೆ>> ಹಳ್ಳಿ/ಪಟ್ಟಣ/ನಗರ ಗಳನ್ನು ಆಯ್ಕೆ ಮಾಡಬೇಕು.

– ನಂತರ Show only permanent centres ಬಾಕ್ಸ್‌ ಮೇಲೆ ಟಿಕ್ ಮಾಡಬೇಕು.

– ಬಲಭಾಗದಲ್ಲಿ ಕೊಟ್ಟಿರುವ ಕ್ಯಾಪ್ಚ ಅಕ್ಷರಗಳನ್ನು ಎಡಭಾಗದಲ್ಲಿ ಕೊಟ್ಟಿರುವ ಖಾಲಿ ಸ್ಥಳದಲ್ಲಿ ಟೈಪಿಸಿ ಕೆಳಗಿನ Locate a Centre ಎಂಬುದರ ಮೇಲೆ ಕ್ಲಿಕ್ ಮಾಡಬೇಕು.

– ನಂತರ ಓಪನ್‌ ಆಗುವ ಪೇಜ್‌ನಲ್ಲಿ ನಿಮ್ಮ ಸ್ಥಳಕ್ಕೆ ಹತ್ತಿರದಲ್ಲಿರುವ ಶಾಶ್ವತ ಆಧಾರ್‌ ಸೇವೆ ನೀಡುವ ಕೇಂದ್ರಗಳ ಮಾಹಿತಿ ಪ್ರದರ್ಶನಗೊಳ್ಳುತ್ತದೆ.

ಮೊಬೈಲ್‌ ನಂಬರ್ ಇಲ್ಲದೇ ಆಧಾರ್ ತಿದ್ದುಪಡಿ ಹೇಗೆ? ಈ ಸಲಹೆಗಳನ್ನು ಫಾಲೋ ಮಾಡಿ

You may also like