Home » ಇಂದು ವಿಶ್ವ ರಕ್ತದಾನಿಗಳ ದಿನ: ನೀವು ಮಾಡುವ ರಕ್ತದಾನ ಮತ್ತೊಬ್ಬರ ಜೀವಕ್ಕೆ ವರದಾನ

ಇಂದು ವಿಶ್ವ ರಕ್ತದಾನಿಗಳ ದಿನ: ನೀವು ಮಾಡುವ ರಕ್ತದಾನ ಮತ್ತೊಬ್ಬರ ಜೀವಕ್ಕೆ ವರದಾನ

by manager manager

ಇಂದು ವಿಶ್ವ ರಕ್ತದಾನಿಗಳ ದಿನ. ದಾನಗಳಲ್ಲಿ ರಕ್ತದಾನ ಶ್ರೇಷ್ಠದಾನ. ಜನರ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕವಾಗಿದ್ದು, ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ. ರಕ್ತವನ್ನು ಕೃತಕವಾಗಿ ತಯಾರಿಸಲೂ ಸಾಧ್ಯವಿಲ್ಲ. ನಮ್ಮ ಶರೀರ ಮಾತ್ರ ರಕ್ತವನ್ನು ಉತ್ಪಾದಿಸಬಲ್ಲದು ಮತ್ತು ಪೂರಕ ರಕ್ತವನ್ನು ರಕ್ತ ನಿಧಿಗಳಲ್ಲಿ ಕಾಯ್ದಿಡುವುದು ಸೂಕ್ತ ಮಾರ್ಗವಾಗಿದೆ. ಹೀಗಾಗಿ ಪ್ರತಿಯೊಬ್ಬರು ರಕ್ತದಾನ ಮಾಡುವುದರ ಮೂಲಕ ಮತ್ತೂಬ್ಬರ ಜೀವ ಉಳಿಸಬೇಕು.

ವಿಶ್ವ ರಕ್ತದಾನಿಗಳ ದಿನ ಆಚರಣೆಯ ಹಿನ್ನಲೆ:

ಮೊಟ್ಟ ಮೊದಲ ಬಾರಿಗೆ ವಿಶ್ವ ರಕ್ತದಾನಿಗಳ ದಿನವನ್ನು ಜೂನ್‌ 14, 2004ರಂದು ಆಚರಿಸಲಾಗಿತ್ತು. ತದನಂತರ ಪ್ರತಿ ವರ್ಷ ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಕ್ತದಾನದ ಮಹತ್ವ ಹಾಗೂ ಆವಶ್ಯಕತೆ, ಸುರಕ್ಷಿತ ರಕ್ತ ಹಾಗೂ ರಕ್ತದ ಉತ್ಪನ್ನಗಳು, ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಯಂಪ್ರೇರಿತ ರಕ್ತ ದಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

Today is world blood donor's day: Giving Blood Can Be the Ultimate Gift for another's life

ವೈದ್ಯ ಹಾಗೂ ಬಯಾಲಜಿಸ್ಟ್‌ ಕಾರ್ಲ್ ಲ್ಯಾಂಡ್‌ ಸ್ತ್ರೈನೆರ್(karl landsteiner) ಅವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಆಧುನಿಕ ರಕ್ತಪೂರಣದ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ವೈದ್ಯರು, 1901ರಲ್ಲಿ ಎ, ಬಿ, ಒ ರಕ್ತ ಗುಂಪುಗಳನ್ನು ಪತ್ತೆಹಚ್ಚಿದರು ಹಾಗೂ ಆಧುನಿಕ ಪದ್ಧತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. 1937ರಲ್ಲಿ ಅಲೆಕ್ಸಾಂಡರ್‌ ವೈನರ್‌ ಎನ್ನುವ ಸಂಶೋಧಕರೊಂದಿಗೆ “ರೀಸಸ್‌ ಫ್ಯಾಕ್ಟರ್‌’ ಎನ್ನುವ ಅಂಶವನ್ನು ಗುರುತಿಸುವ ಮೂಲಕ, ರೋಗಿಯ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತಪೂರಣವನ್ನು ಮಾಡಲು ಕಾರಣಕರ್ತರೆನಿಸಿದ್ದರು. ಈ ವೈದ್ಯರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ, ಇವರ ಜನ್ಮದಿನವನ್ನು ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ನಿಮಗಿದು ತಿಳಿದಿರಲಿ:

  • ಒಬ್ಬ ಆರೋಗ್ಯವಂತನ ದೇಹದಲ್ಲಿ ಸುಮಾರು 6 ಲೀಟರ್‌ನಷ್ಟು ರಕ್ತವಿದ್ದು, ರಕ್ತದಾನಕ್ಕೆ ಕೇವಲ 350 ಮಿ.ಲೀ. ರಕ್ತವನ್ನು ಮಾತ್ರವೇ ದಾನಿಯಿಂದ ಸ್ವೀಕರಿಸಲಾಗುತ್ತದೆ. ಇದರಿಂದ ದಾನಿಗೆ ಯಾವುದೇ ಅಪಾಯವಿಲ್ಲ.
  • ರಕ್ತದಾನದಿಂದ ಏಡ್ಸ್ ಸೊಂಕು ತಗಲುತ್ತದೆ ಎಂಬ ಭಯ ಕೆಲವರಲ್ಲಿ. ಇಲ್ಲಿ ರಕ್ತದಾನದಿಂದ ಅಲ್ಲ ಸೂಜಿಯನ್ನು ಹೊಸದು ಬಳಸದೇ ಇದ್ದರೆ ಸೊಂಕು ಬರಬಹುದು. ಇಂದು ಬಹಳಷ್ಟು ಕಡೆ ಹೊಸ ಸೂಜಿಗಳನ್ನು ಬಳಸುತ್ತಾರೆ.
  • ಮಹಿಳೆಯರು ರಕ್ತದಾನ ಮಾಡಬಾರದು ಎಂದು ಹೇಳುತ್ತಾರೆ. ಪೀರಿಯಡ್ಸ್ ಸಮಯದಲ್ಲಿ ರಕ್ತವನ್ನು ಕಳೆದುಕೊಳ್ಳುತ್ತಾರೆ. ರಕ್ತಹೀನತೆ ಸಮಸ್ಯೆ ಇಲ್ಲದ, ಆರೋಗ್ಯವಂತ ಯಾವ ಮಹಿಳೆ ಬೇಕಾದರೂ ರಕ್ತದಾನ ಮಾಡಬಹುದು.
  • 18 ರಿಂದ 60 ವರ್ಷದ ಪ್ರತಿ ಆರೋಗ್ಯವಂತ ಪುರುಷರು ಮೂರು ತಿಂಗಳಿಗೂಮ್ಮೆ ಹಾಗೂ ಮಹಿಳೆಯರು 4 ತಿಂಗಳಿಗೂಮ್ಮೆ ರಕ್ತದಾನ ಮಾಡಬಹುದು.
  • 40 ವರ್ಷದ ನಂತರ ರಕ್ತದಾನ ಮಾಡಬಾರದು ಎಂದು ಕೆಲವರ ನಂಬಿಕೆ. ಆದರೆ ಅರವತ್ತು ವರ್ಷದವರಗೂ ಅರೋಗ್ಯವಾಗಿರುವ ಯಾರೋ ಆದರೂ ತಮ್ಮ ರಕ್ತವನ್ನು ದಾನ ಮಾಡಬಹುದು.
  • ರಕ್ತದಾನ ಮಾಡಿದರೆ ತುಂಬಾ ನೋವಾಗುತ್ತದೆ. ಎಂದು ಭಯ ಪಡುತ್ತಾರೆ. ಆದರೆ ಯಾವುದೇ ಭಯ ಪಡಬೇಕಾಗಿಲ್ಲ. ಸ್ವಲ್ಪ ಸಮಯದ ವಿಶ್ರಾಂತಿ ಪಡೆದರೆ ಸಾಕು.
  • ರಕ್ತದಾನ ಮಾಡಿದರೆ ದೇಹದಲ್ಲಿನ ರಕ್ತ ಕಡಿಮೆಯಾಗುತ್ತದೆ ಎಂಬುದು ತುಂಬಾ ಜನರ ಭಾವನೆ. ಆದರೆ 48 ಗಂಟೆಗಳಲ್ಲಿ ಮತ್ತೆ ರಕ್ತ ಉತ್ಪತ್ತಿಯಾಗುತ್ತದೆ. ರಕ್ತದಾನದಿಂದ ದೇಹದಲ್ಲಿ ಹಳೆಯ ರಕ್ತ ಹೋಗಿ ಹೊಸ ರಕ್ತ ಉತ್ಪಾದನೆಯಾಗುತ್ತದೆ.

ರಕ್ತದ ಗುಂಪುಗಳು:

  1. A ರಕ್ತದ ಗುಂಪು.
  2. B ರಕ್ತದ ಗುಂಪು.
  3. AB ರಕ್ತದ ಗುಂಪು.
  4. O ರಕ್ತದ ಗುಂಪು.

Today is world blood donor's day: Giving Blood Can Be the Ultimate Gift for another's life

ರಕ್ತದಾನ ಮಾಡುವುದರಿಂದ ಆಗುವ ಲಾಭಗಳು..?

ರಕ್ತದಾನದಿಂದ ರಕ್ತದ ಅವಶ್ಯಕತೆಯಿರುವವರಿಗೆ ಮಾತ್ರ ಲಾಭವಾಗುವುದಿಲ್ಲ ಜೊತೆಗೆ ರಕ್ತದಾನಿಗಳೂ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳ ಬಹುದು. ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಗೆ ಪ್ರಚೋದನೆ ಸಿಗುತ್ತದೆ. ಹೃದಯಾಘಾತದ ಸಂಭವ ಕಡಿಮೆ ಯಾಗುತ್ತದೆ, ರಕ್ತದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆಯಾಗುತ್ತದೆ ಮತ್ತು ಆತ ಇನ್ನಷ್ಟು ಆರೋಗ್ಯ ವಂತನಾಗಿರಲು ಸಾಧ್ಯವಾಗುತ್ತದೆ. ಹಾಗಾಗಿ ರಕ್ತದಾನ ಮಾಡಿ ಆರೋಗ್ಯವಂತರಾಗಿ.

  1. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿ ಕಬ್ಬಿಣದ ಅಂಶ ಸಮತೋಲನದಲ್ಲಿಡುತ್ತದೆ ಮತ್ತು ಹೃದಯಾಘಾತ ತಪ್ಪಿಸುತ್ತದೆ.
  2. ರಕ್ತದಾನ ಮಾಡುವುದರಿಂದ ದೇಹದಲ್ಲಿ ಬರುವ ವಿವಿಧ ರೀತಿಯ ಕ್ಯಾನ್ಸರ್ ನಿಂದ ದೂರ ಉಳಿಯಬಹುದು.
  3. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಹತೋಟಿಯಲ್ಲಿಡುತ್ತದೆ.
  4. ಹೆಚ್ಚಿನ ಕ್ಯಲೋರಿಯನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ದೇಹದ ತೂಕವನ್ನು ಸಮತೋಲನದಲ್ಲಿ ಇಡಲು ಸಹಕರಿಸುತ್ತದೆ.
  5. ರಕ್ತದಾನ ಮಾಡುವುದರಿಂದ ಕೇವಲ ರಕ್ತ ಅವಶ್ಯಕವಿರುವವರ ಜೀವ ಉಳಿಸುವುದು ಮಾತ್ರವಲ್ಲ ರಕ್ತ ಕೊಡುವವರಿಗೆ ಹೊಸ ಜೀವಕೋಶಗಳು ಉತ್ಪತ್ತಿಯಾಗಲು ಸಹಾಯಕವಾಗುತ್ತದೆ.
  6. ಇದು ಕಬ್ಬಿಣದ ಅಂಶವನ್ನು ಹೆಚ್ಚಿಸಿ ರಕ್ತವು ದಪ್ಪವಾಗುವಂತೆ ಮಾಡುತ್ತದೆ. ಹಾನಿಯಾಗುವುದನ್ನು ತಪ್ಪಿಸುತ್ತದೆ.
  7. ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಆಗುತ್ತದೆ.
  8. ದೇಹದಲ್ಲಿ ಹೊಸ ರಕ್ತ ಚಾಲನೆಯಿಂದ ಕಾರ್ಯತತ್ವರತೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.
  9. ರಕ್ತದಲ್ಲಿನ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗುವುದರಿಂದ ಹೃದಯಾಘಾತವನ್ನು ಶೇ.80ಕ್ಕಿಂತಲೂ ಹೆಚ್ಚು ತಡೆಯಲು ಸಹಕಾರಿಯಾಗುತ್ತದೆ.
  10. ರಕ್ತದ ಒತ್ತಡ, ಇತರ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ರಕ್ತವನ್ನು ಕೊಡುವುದರಿಂದ ಒಮ್ಮೆಗೆ 4 ಜೀವವನ್ನು ಉಳಿಸುವ ಅವಕಾಶ ದೊರಕುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ರಕ್ತವನ್ನು ಕೊಡುವುದರಿಂದ ಒಂದು ಜೀವವನ್ನು ಉಳಿಸುವ ಅವಕಾಶ ದೊರಕುತ್ತದೆ.

Today is world blood donor's day: Giving Blood Can Be the Ultimate Gift for another's life

ಯಾರು ರಕ್ತದಾನ ಮಾಡಬಹುದು..?

  1. 18ರಿಂದ 60 ವರ್ಷದೊಳಗಿನ ಎಲ್ಲ ಆರೋಗ್ಯವಂತ ವ್ಯಕ್ತಿಗಳು
  2. ವ್ಯಕ್ತಿಯ ತೂಕ 45 ಕಿ.ಗ್ರಾಂ. ಗಿಂತ ಹೆಚ್ಚಿರುವವರು
  3. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ.ಗಿಂತ ಹೆಚ್ಚಿರುವವರು
  4. ಆರೋಗ್ಯವಂತ ಪುರುಷರು 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
  5. ಇವರು ರಕ್ತದಾನ ಮಾಡುವಂತಿಲ್ಲ..!
  6. ಯಕೃತ್, ಮೂತ್ರಪಿಂಡ, ಹೃದಯ ಸಂಬಂಧಿ ಕಾಯಿಲೆ ಮತ್ತು ಕ್ಯಾನ್ಸರ್ ಇರುವವರು ರಕ್ತದಾನ ಮಾಡುವಂತಿಲ್ಲ.
  7. ಗರ್ಭಿಣಿಯರು, ಋತು ಸ್ರಾವದಲ್ಲಿರುವ ಸ್ತ್ರೀ, ಮಗುವಿಗೆ ಹಾಲುಣಿಸುವ ತಾಯಂದಿರು.
  8. ರಕ್ತಹೀನತೆ ಇರುವವರು.
  9. ರಕ್ತದಾನ ಮಾಡಿದವರು ಮುಂದಿನ 3 ತಿಂಗಳವರೆಗೆ ರಕ್ತದಾನ ಮಾಡುವಂತಿಲ್ಲ.
  10. ರಕ್ತ ವರ್ಗಾವಣೆ ಮಾಡಿಸಿಕೊಂಡವರು, ಮಲೇರಿಯಾ, ಟೈಫಾಯ್ಡ್, ಕಾಮಾಲೆಯಿಂದ ಬಳಲಿದವರು ಮುಂದಿನ 6 ತಿಂಗಳವರೆಗೆ
  11. ಶಸ್ತ್ರ ಚಿಕಿತ್ಸೆಗೊಳಗಾದವರು.
  12. ಯಾವುದೇ ಸೋಂಕಿನ ವಿರುದ್ಧ ಲಸಿಕೆ ಹಾಕಿಸಿಕೂಂಡವರು ಮುಂದಿನ 3 ತಿಂಗಳವರೆಗೂ ರಕ್ತದಾನಕ್ಕೆ ಅನರ್ಹರು
  13. ಕ್ಯಾನ್ಸರ್, ಹೃದಯದ ಕಾಯಿಲೆ, ಅಸಹಜ ರಕ್ತಸ್ರಾವ, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ಮಧುಮೇಹ, ಹೈಪಿಟೈಟಿಸ್ ಬಿ ಮತ್ತು ಸಿ, ಮೂತ್ರಪಿಂಡ ಸಂಬಂಧ ಕಾಯಿಲೆ ಹಾಗೂ ಲಿವರ್‌ಗೆ ಸಂಬಂಧಿಸಿದ ಕಾಯಿಲೆಯಿರುವ ವ್ಯಕ್ತಿ ರಕ್ತದಾನ ಮಾಡಬಾರದು

Today is world blood donor's day: Giving Blood Can Be the Ultimate Gift for another's life

ರಕ್ತ-ದಾನಿಗಳ ಕೊರತೆ:

ವಿಶ್ವಾದ್ಯಂತ ರಕ್ತದ ಬೇಡಿಕೆ ಮತ್ತು ಪೂರೈಕೆಯ ನಡುವೆ ಅಗಾಧ ಪ್ರಮಾಣದ ಅಂತರವಿದೆ. ನಮ್ಮ ದೇಶದಲ್ಲಿ ವರ್ಷಂಪ್ರತಿ ಸುಮಾರು ನಾಲ್ಕು ಕೋಟಿ ಯೂನಿಟ್‌ ರಕ್ತದ ಬೇಡಿಕೆಯಿದ್ದರೂ, ಪೂರೈಕೆಯ ಪ್ರಮಾಣವು ಕೇವಲ 40 ಲಕ್ಷ ಯೂನಿಟ್‌ಗಳಾಗಿವೆ. ತತ್ಪರಿಣಾಮವಾಗಿ ತುರ್ತು ಪರಿಸ್ಥಿತಿಯಲ್ಲಿ ಆವಶ್ಯಕ ಪ್ರಮಾಣದ ರಕ್ತ ಪೂರಣವಾಗದೇ, ಲಕ್ಷಾಂತರ ಜನರು ಅಕಾಲಿಕ ಮರಣಕ್ಕೆ ಈಡಾಗುತ್ತಾರೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ಹಲವಾರು ಅಂತಾರಾಷ್ಟ್ರೀಯ ಸಂಘಟನೆಗಳ ಸಹಕಾರದೊಂದಿಗೆ, ಸ್ವಯಂಪ್ರೇರಿತ ರಕ್ತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ವಿಶ್ವ ರಕ್ತ ದಾನಿಗಳ ದಿನವನ್ನು ಪ್ರತಿ ವರ್ಷ ಆಚರಿಸುತ್ತಿದೆ.

Every year on 14 June, countries around the world celebrate World Blood Donor Day. Giving Blood Can Be the Ultimate Gift for another’s life. blood donation provides life-saving help to people and patients. Having donated blood, our cell count goes down which leads to new cells regeneration.

You may also like