Home » ಮೈಸೂರು ವಿವಿಯ ನೂತನ ಕುಲಪತಿಯಾಗಿ ಪ್ರೊ. ಹೇಮಂತಕುಮಾರ್ ನೇಮಕ

ಮೈಸೂರು ವಿವಿಯ ನೂತನ ಕುಲಪತಿಯಾಗಿ ಪ್ರೊ. ಹೇಮಂತಕುಮಾರ್ ನೇಮಕ

by manager manager

Professor G Hemanth kumar appointed as the news vice chancellor of University of mysuru

Mysore University new Vice Chancellor pro G Hemanth Kumar

2017 ರ ಜನವರಿ 10 ರಿಂದ ಸುಮಾರು 22 ತಿಂಗಳು ಖಾಲಿ ಇದ್ದ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ನೂತನ ಕುಲಪತಿಯಾಗಿ ಪ್ರೊ. ಜಿ ಹೇಮಂತಕುಮಾರ್ ( G Hemanth Kuamr )ರವರು ನೇಮಕಗೊಂಡಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಜಿ ಹೇಮಂತಕುಮಾರ್ ರವರು ನಿನ್ನೆ (16-11-2018) ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಇವರಿಗೆ ಪ್ರಭಾರಿ ಕುಲಪತಿ ಪ್ರೊ.ಆಯಿಷಾ ಎಂ ಷರೀಫ್ ಹೂಗುಚ್ಛ ನೀಡಿ ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಮಯದಲ್ಲಿ ಕುಲಸಚಿವ ಪ್ರೊ.ಆರ್. ರಾಜಣ್ಣ, ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಪ್ರಸ್ತುತರಿದ್ದರು.

ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ನಾರಾಯಣ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಶೋಧನಾ ಸಮಿತಿಯಿಂದ ಎಲ್ಲಾ ರೀತಿಯ ಮಾನದಂಡಗಳ ಆಧಾರದ ಮೇಲೆ ಪ್ರೊ.ಜಿ.ಹೇಮಂತಕುಮಾರ್ ರವರನ್ನು ಕುಲಪತಿಯಾಗಿ ನೇಮಕಾತಿ ಮಾಡಲಾಗಿದೆ.

ಪ್ರೊ. ಜಿ ಹೇಮಂತಕುಮಾರ್ ರವರ ಬಗ್ಗೆ ಕುರಿತು

– ಫ್ರೊ. ಹೇಮಂತರಕುಮಾರ್ ರವರು ಮೂಲತಃ ಮೈಸೂರಿನವರೇ ಆಗಿದ್ದು, ಸಾಧು ಚೆಟ್ಟಿಯಾರ್ ಸಮುದಾಯಕ್ಕೆ ಸೇರಿದವರು.

-ಇವರು B M ಗೋವಿಂದರಾಜು ಹಾಗೂ ಪೂರ್ಣಿಮಾ ದೇವಿ ಅವರ ಪುತ್ರ

– ಮೈಸೂರಿನ ಚಾವಡಿ ಸರ್ಕಾರಿ ಶಾಲೆ, ಲಕ್ಷ್ಮಿಪುರಂ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ

– ಜೆಎಸ್‌ಎಸ್ ಶಾಲೆಯಲ್ಲಿ ಪ್ರೌಢಶಾಲೆ ಶಿಕ್ಷಣ

– ಶಾರದಾ ವಿಲಾಸದಲ್ಲಿ ಪದವಿ ಮತ್ತು B.ed ವ್ಯಾಸಂಗ

– ಮೈಸೂರು ವಿವಿಯಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದ ಮೊದಲ ಬ್ಯಾಚ್ ನಲ್ಲಿ ಕಂಪ್ಯೂಟರ್ ವಿಜ್ಞಾನ ಸ್ನಾತಕೋತ್ತರ ಪದವಿ. ನಂತರ ಇದೇ ವಿಭಾಗದಲ್ಲಿ ಪಿಎಚ್‌ಡಿ ಪದವಿ ಪಡೆದರು.

– 1999 ರಿಂದ ಪ್ರವಾಚಕರಾಗಿ, 2007 ರಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಣೆ.

– ಒಟ್ಟು 333 ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸಿದ್ದಾರೆ.

– 20 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಮಾರ್ಗದರ್ಶನ

– ಕುಲಪತಿಯಾಗಿ ನೇಮಕ ಆಗುವವರೆಗೆ ಅಂತರರಾಷ್ಟ್ರೀಯ ವಿದ್ಯಾರ್ಥಿ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ.

– ಮೈಸೂರು ವಿವಿಯಲ್ಲಿ ಕಾಗದ ರಹಿತ ಇ-ಆಡಳಿತ ಜಾರಿಗೊಳಿಸಿದವರು.

Professor G Hemanth kumar appointed as the new vice chancellor of University of mysore.  Pro. G Hemanth Kumar is the New VC of University of Mysore after 22 Months.

You may also like