ಯುಪಿಎಸ್‌ಸಿ ನಾಗರೀಕ ಸೇವೆಗಳ ಪರೀಕ್ಷೆಗಳನ್ನು ಪಾಸ್ ಮಾಡುವುದು ಸುಲಭದ ಮಾತಲ್ಲ. ಭಾರತೀಯ ಆಡಳಿತ ಸೇವೆ ಹುದ್ದೆಗಳನ್ನು ಪಡೆಯಲು ಸರಿಯಾದ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮ ಅತ್ಯಗತ್ಯ.
ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಎರಡು ಪರೀಕ್ಷೆಗಳನ್ನು ಹಲವರು 3 ರಿಂದ 5 ವರ್ಷಗಳ ಕಾಲ ಮತ್ತು 3 ರಿಂದ 5 ಭಾರಿ ಪರೀಕ್ಷೆ ತೆಗೆದುಕೊಂಡು ಪಾಸ್ ಆಗಿರುವವರು ಇದ್ದಾರೆ. ಹಾಗೆ ಮೊದಲನೇ ಭಾರಿಗೆ ಪರೀಕ್ಷೆ ಪಾಸ್ ಮಾಡಿರುವವರು ಇದ್ದಾರೆ. ಆದರೆ ಈ ಫಸ್ಟ್ ಅಟೆಂಪ್ಟ್‌ನಲ್ಲಿಯೇ IAS ಪರೀಕ್ಷೆ ಪಾಸ್ ಮಾಡಿದವರೂ ಮೊದಲೇ ಚೆನ್ನಾಗಿ ಓದಿಕೊಂಡು ನಂತರ ಪರೀಕ್ಷೆ ಫೇಸ್ ಮಾಡಿದವರು ಎಂಬುದನ್ನು ಅರಿತಿರಬೇಕು.
ಯುಪಿಎಸ್‌ಸಿ ಐಎಎಸ್ ಪರೀಕ್ಷೆ ತಯಾರಿಗಾಗಿ ಹಲವು ಆಸಕ್ತರು ಎಲ್ಲಿ? ಯಾವ ಸಂಸ್ಥೆಯಲ್ಲಿ ಮಾರ್ಗದರ್ಶನ ಪಡೆದರೆ ಒಳ್ಳೆಯದು ಎಂದು ಕೇಳುವುದು ಉಂಟು. ಹಾಗೆ ಇಂಟರ್ನೆಟ್‌ನಲ್ಲಿ ಹುಡುಕಾಟ ನಡೆಸುವುದು ಉಂಟು. ಅಂತಹವರಿಗಾಗಿ ಯುಪಿಎಸ್‌ಸಿ ಐಎಎಸ್ ಮಾರ್ಗದರ್ಶನ ಪಡೆಯಲು ಲಕ್ನೋ ದಲ್ಲಿರುವ ಟಾಪ್ 5 ಸಂಸ್ಥೆಗಳು ಯಾವುವು ಎಂದು ಪರಿಚಯಿಸುತ್ತದ್ದೇವೆ. ಅವುಗಳು ಈ ಕೆಳಗಿನಂತಿವೆ.
1. ಪ್ಲುಟಸ್ ಐಎಎಸ್ ಅಕಾಡೆಮಿ
ಈ ಸಂಸ್ಥೆಯು ಯುಪಿಎಸ್‌ಸಿ ಐಎಎಸ್ ಮಾರ್ಗದರ್ಶನ ನೀಡುವ ಸಂಸ್ಥೆಗಳಲ್ಲೇ ಹೆಚ್ಚು ಹೆಸರುವಾಸಿ ಪಡೆದಿದ್ದು. ಉತ್ತಮವಾದ ಸಂಸ್ಥೆ ಎನಿಸಿಕೊಂಡಿದೆ.
ಯುಪಿಎಸ್‌ಸಿ ಐಎಎಸ್ ಮಾರ್ಗದರ್ಶನಕ್ಕಾಗಿ ಅನುಭವಿ ಮಾರ್ಗದರ್ಶಕರನ್ನು ಹೊಂದಿದ್ದು, ಉತ್ತಮ ಅಧ್ಯಯನ ವಸ್ತುಗಳನ್ನು ನೀಡಲಾಗುತ್ತದೆ. ಹಾಗೆ ಈ ಸಂಸ್ಥೆಯು ಆನ್‌ಲೈನ್ ಕೋರ್ಸ್‌ಗಳನ್ನು ಆಫರ್ ಮಾಡುತ್ತದೆ.
2. ರೇಸ್ ಐಎಎಸ್ ಅಕಾಡೆಮಿ
ಪ್ಲುಟಸ್ ನಂತರದಲ್ಲಿ ಪ್ರಖ್ಯಾತಹೊಂದಿರುವ ಯುಪಿಎಸ್‌ಸಿ ಐಎಎಸ್ ಕೋಚಿಂಗ್ ಸೆಂಟರ್ ಇದು. ಇದು ಯುಪಿಎಸ್‌ಸಿ ಐಎಎಸ್ ಕೋರ್ಸ್‌ಗಳು, ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆಗೆ ಟೆಸ್ಟ್ ಸೀರೀಸ್ ಅನ್ನು ಆಫರ್ ಮಾಡಲಾಗುತ್ತದೆ.
3. ಸೃಷ್ಟಿ ಐಎಎಸ್ ಅಕಾಡೆಮಿ
ನಾಗರೀಕ ಸೇವೆಗಳ ಪರೀಕ್ಷಾ ಮಾರ್ಗದರ್ಶಿಗೆ ಇದು ಸಹ ಲಕ್ನೋದಲ್ಲಿರುವ ಅತ್ಯುತ್ತಮ ಸಂಸ್ಥೆ. ಯುಪಿಎಸ್‌ಸಿ ಐಎಎಸ್ ಪರೀಕ್ಷೆಗೆ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲು ಅನುಭವಿ ಮತ್ತು ತರಬೇತಿ ಹೊಂದಿದ ಮಾರ್ಗದರ್ಶಕರು ಈ ಸಂಸ್ಥೆಯಲ್ಲಿದ್ದಾರೆ.
ಇಲ್ಲಿ ಸ್ಪರ್ಧಾತ್ಮಕ ನಿಯತಕಾಲಿಕೆಗಳು, ಉಪಯುಕ್ತ ಪುಸ್ತಕಗಳನ್ನು ಅವರೇ ಒದಗಿಸುತ್ತಾರೆ.
4. ಪ್ರಿಪೇರ್ ಐಎಎಸ್
ಮಾರ್ಗದರ್ಶನದಲ್ಲಿ, ನೀಡುವ ಅಧ್ಯಯನ ವಸ್ತುಗಳಲ್ಲಿ, ಕೋರ್ಸ್‌ಗಳಲ್ಲಿ, ಇನೋವೇಟಿವ್ ಟೆಕ್ನಿಕ್ಯೂಸ್‌ಗಳಲ್ಲಿ, ಓದುವ ವಿಧಾನ ಮಾರ್ಗದರ್ಶನದಲ್ಲಿ ಹಾಗೂ ಇನ್ನು ಇತರೆ ವಿಷಯಗಳಲ್ಲಿ ಉತ್ತಮ ಗುಣಮಟ್ಟವನ್ನು ಈ ಸಂಸ್ಥೆ ಕಾಪಾಡಿಕೊಂಡಿದೆ.
5. ಎಎಲ್‌ಎಸ್ ಐಎಎಸ್ ಅಕಾಡೆಮಿ (ALS- Alternative Learning Systems)
ಲಕ್ನೋದಲ್ಲಿನ ಟಾಪ್ ಐದು ಉತ್ತಮ ಯುಪಿಎಸ್‌ಸಿ ಐಎಎಸ್ ಕೋಚಿಂಗ್ ಕೇಂದ್ರಗಳಲ್ಲಿ ಇದು ಸಹ ಒಂದು. ಉತ್ತಮ ಶಿಕ್ಷಕರು ಮತ್ತು ಮೆಂಟರ್‌ಗಳನ್ನು ಈ ಸಂಸ್ಥೆ ಹೊಂದಿದೆ. ಇದು ನಿರಂತರ ಅಣಕು ಪರೀಕ್ಷೇಗಳನ್ನು ನಡೆಸುತ್ತಿರುತ್ತದೆ. ಇದರಿಂದ ಅಭ್ಯರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಯಶಸ್ವಿ ಐಎಎಸ್ ಮಾರ್ಗದರ್ಶಿ ಸಂಸ್ಥೆ ಎನಿಸಿಕೊಂಡಿದೆ.