Home » ದಪ್ಪಗಾಗಲು ಸಿಂಪಲ್ ಟಿಪ್ಸ್: ಈ ಆಹಾರಗಳ ಸೇವನೆಯಿಂದ ದೇಹದ ತೂಕ ಹೆಚ್ಚುತ್ತದೆ

ದಪ್ಪಗಾಗಲು ಸಿಂಪಲ್ ಟಿಪ್ಸ್: ಈ ಆಹಾರಗಳ ಸೇವನೆಯಿಂದ ದೇಹದ ತೂಕ ಹೆಚ್ಚುತ್ತದೆ

by manager manager

ದಪ್ಪಗಿರುವವರು ಸಣ್ಣಗಾಗಬೇಕಿ, ಸಣ್ಣವಿರುವವರು ದಪ್ಪವಾಗಬೇಕೆಂಬೆ ಚಿಂತೆ. ಹಲವರು ಸಣ್ಣಗಾಗಬೇಕು ಎಂದು ಏನೇನೋ ಸರ್ಕಸ್ ಮಾಡುತ್ತಿದ್ದರೆ, ಹಾಗೆಯೇ ಸಣ್ಣವಿರುವವರು ದಪ್ಪಗಾಗಲೂ ಹರಸಾಹಸ ಪಡುತ್ತಿದ್ದಾರೆ. ತೂಕ ಹೆಚ್ಚಿಸುವುದು ತೂಕ ಕಳೆದುಕೊಳ್ಳುವುದಕಿಂತ ಸುಲಭದ ಕೆಲಸ. ತೂಕ ಹೆಚ್ಚಿಸುವುದೆಂದರೆ ಹೆಚ್ಚು ತಿನ್ನುವುದು ಎಂದು ಅರ್ಥವಲ್ಲ ಆದರೆ ಹೆಚ್ಚು ಕ್ಯಾಲೋರಿ ಇರುವ ಆಹಾರವನ್ನು ಸೇವಿಸಿ ಕೊಬ್ಬು ತುಂಬಿರುವ ಆಹಾರಗಳನ್ನು ದೂರ ಇಡುವುದು ಎಂದು ಅರ್ಥ.

ನಿಮ್ಮ ಎತ್ತರಕ್ಕೆ ತಕ್ಕಂತೆ ತೂಕ ನಿಮ್ಮದಲ್ಲದಿದ್ದಾರೆ ನೀವು ಕೂಡಲೇ ಅದನ್ನು ಪರೀಕ್ಷಿಸಿಕೊಳ್ಳಬೇಕು. ಇದು ಯಾವುದೋ ಗುಪ್ತ ಕಾಯಿಲೆಯ ಲಕ್ಷಣವಾಗಿರಬಹುದು. ತೂಕ ಹೆಚ್ಚಿಸಿಕೊಳ್ಳಲು ಜನರು ಅನೇಕ ಆಹಾರಗಳನ್ನು ಸೇವಿಸುತ್ತಾರೆ ಆದರೆ ಇವೆಲ್ಲ ಆಹಾರಗಳಿಂದ ನಿಮ್ಮ ತೂಕ ಹೆಚುತ್ತದೆಯೇ..? ಯಾಔ ಆಹಾರ ಸೇವಿಸಿದರೆ ತೂಕ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಯಬೇಕೆ ಹಾಗಿದ್ದರೆ ಬನ್ನಿ ಇಂದು ಕನ್ನಡ ಅಡ್ವೈಜರ್ ತೂಕ ಹೆಚ್ಚಿಸುವ ಆಹಾರಗಳ ಬಗ್ಗೆ ಮಾಹಿತಿ ನೀಡಲಿದೆ.

Simple tips to gain weight: These foods increase body weight

ಕಡಿಮೆ ತೂಕಕ್ಕೆ ಕಾರಣಗಳು

ಅನಾರೋಗ್ಯ, ವಂಶವಾಹಿ ಸಮಸ್ಯೆ, ಹಸಿವಿಲ್ಲದಿರುವುದು ತೂಕ ಕಡಿಮೆಗೆ ಕಾರಣವಿರಬಹುದು. ಬಹಳಷ್ಟು ಜನರು ಅನೇಕ ವರ್ಷಗಳಿಂದ ವೈದ್ಯರನ್ನು ಭೇಟಿಯಾಗುತ್ತಾ, ಕೊಬ್ಬು ಹೆಚ್ಚಿರುವ ಆಹಾರವನ್ನು ಸೇವಿಸುತ್ತಾ ತೂಕ ಹೆಚ್ಚಿಸಿಕೊಳ್ಳಲಾಗದೆ ಇರಬಹುದು.

ಈ ಆಹಾರಗಳ ಸೇವನೆಯಿಂದ ನಿಮ್ಮ ದೇಹದ ತೂಕ ಹೆಚ್ಚುತ್ತದೆ

ಮೊಸರು:

ಕೊಬ್ಬಿನಾಂಶವಿರುವ ಮೊಸರು ದೇಹದ ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ನಿತ್ಯವೂ ಮೊಸರಿನ ನಿಯಮಿತ ಸೇವನೆಯಿಂದ ಸದಾ ಆರೋಗ್ಯವಂತರಾಗಿ ಬಾಳಬಹುದು. ಮೊಸರನ್ನು ವಿವಿಧ ಭಕ್ಷ್ಯಗಳೊಂದಿಗೆ ಸೇರಿಸಿ ತಿನ್ನಬಹುದು ಹಣ್ಣುಗಳ ಸಲಾಡ್’‌ಗಳೊಂದಿಗೆ ಸೇರಿಸಿ ಸವಿಯಬಹುದು ಅನ್ನದೊಂದಿಗೆ ಬೆರೆಸಿ ಸೇವಿಸಬಹುದು.

ಹಾಲಿನಿಂದ ತಯಾರಿಸಲಾಗುವ ಮೊಸರು ಕ್ಯಾಲ್ಸಿಯಂ ಪೊಟ್ಯಾಸಿಯಮ್ ಮೆಗ್ನಿಷಿಯಮ್ ವಿಟಮಿನ್ ಬಿ2 ಮತ್ತು ವಿಟಮಿನ್ ಬಿ12 ಸೇರಿದಂತೆ ವಿವಿಧ ಪೌಷ್ಟಿಕ ದ್ರವ್ಯಗಳಿಂದ ಕೂಡಿದೆ. ಒಂದು ಕಪ್ ಮೊಸರು 275 ಮಿಗ್ರಾಂ ಕ್ಯಾಲ್ಸಿಯಂ ಹೊಂದಿದೆ. ದಿನನಿತ್ಯವೂ ಬೆಳಿಗ್ಗೆ ಮೊಸರನ್ನು ಸೇವಿಸುವುದರಿಂದ ಮೂಳೆಗಳು ಬಲವಾಗಿರುತ್ತವೆ ಇದು ಮೂಳೆಗಳ ಬಲವನ್ನು ಮಾತ್ರವಲ್ಲದೇ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Simple tips to gain weight: These foods increase body weight

ಸಸಾರಜನಕಯುಕ್ತ ಆಹಾರ:

ಸಸಾರಜನಕ ಹೆಚ್ಚಿರುವ ಆಹಾರ ಪದರ್ಥಗಳನ್ನು ಸಾಕಷ್ಟು ಸೇವಿಸುವುದು ಉತ್ತಮ. ತೂಕವನ್ನು ಹೆಚ್ಚಿಸುವಲ್ಲಿ ಅತಿ ಮುಖ್ಯವಾದ ಪಾತ್ರ ವಹಿಸುತ್ತದೆ. ಸಾರಜನಕವಿರುವ ಆಹಾರಗಳನ್ನು ಸೇವಿಸುವುದರ ಜೊತೆಗೆ ಸ್ವಲ್ಪ ವ್ಯಾಯಾಮವನ್ನು ಸಹ ಮಾಡುವುದು ಮುಖ್ಯ. ದಿನನಿತ್ಯದ ಆಹಾರದಲ್ಲಿ ಸಸಾರಜನಕ, ಖನಿಜಗಳು, ಜೀವಸತ್ವಗಳು, ಕಾರ್ಬೊಹೈಡ್ರೇಟ್ ಹಾಗೂ ಕೊಬ್ಬು ಇರಬೇಕು. ಇವೆಲ್ಲವುಗಳು ದೇಹದ ತೂಕವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ.

ಐದು ಬಾರಿ ಸಣ್ಣ ಊಟ ಮಾಡಿ:

ತೂಕ ಹೆಚ್ಚಿಸಿಕೊಳ್ಳಬೇಕಾದರೆ ದಿನಕ್ಕೆ ಐದು ಬಾರಿ ಸಣ್ಣ ಸಣ್ಣ ಊಟಗಳನ್ನು ಮಾಡಿ. ನಿಯಮಿತವಾಗಿ ದಿನವೂ ಈ ರೀತಿಯಾಗಿ ಆಹಾರ ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚುತ್ತದೆ.

ಬಾಳೆ ಹಣ್ಣು

ಬಾಳೆಕಾಯಿಯಲ್ಲಿರುವ ಕಠಿಣ ಪಿಷ್ಟ ಹಾಗೂ ಚಿಕ್ಕ ಸಂಕಲೆಯ ಕೊಬ್ಬಿನ ಆಮ್ಲಗಳು ಹಾಗೂ ಬಾಳೆಹಣ್ಣಿನಲ್ಲಿರುವಂತಹ ಇತರ ವಿಟಮಿನ್ ಮತ್ತು ಖನಿಜಗಳು ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳಾಗಿವೆ ಖನಿಜಗಳಲ್ಲಿ ಪ್ರಮುಖವಾಗಿ ಸೋಡಿಯಂ ಪೊಟ್ಯಾಶಿಯಂ ಹಾಗೂ ಅಲ್ಪ ಪ್ರಮಾಣದ ಪ್ರೋಟೀನ್ ಸಹಾ ಇದೆ. ನಿಮ್ಮ ಆಹಾರದಲ್ಲಿ ಆಗಾಗ ಬಾಳೆಕಾಯಿಯನ್ನೂ ಅಳವಡಿಸಿಕೊಂಡರೆ ಕರುಳುಗಳ ಆರೋಗ್ಯ ಉತ್ತಮಗೊಳ್ಳುತದೆ ಇದಕ್ಕೆ ಕಾರಣ ಚಿಕ್ಕ ಸಂಕಲೆಯ ಕೊಬ್ಬಿನ ಆಮ್ಲಗಳು ಸಂಶೋಧನೆಯಲ್ಲಿ ಕಂಡುಕೊಂಡಂತೆ ಈ ಕೊಬ್ಬಿನ ಆಮ್ಲಗಳು ಆಹಾರದಲ್ಲಿರುವ ಪೋಷಕಾಂಶಗಳನ್ನು ವಿಶೇಷವಾಗಿ ಕ್ಯಾಲ್ಸಿಯಂ ಅನ್ನು ಗರಿಷ್ಟ ಪ್ರಮಾಣದಲ್ಲಿ ಹೀರಿಕೊಳ್ಳಲು ನೆರವಾಗುತ್ತವೆ.

Simple tips to gain weight: These foods increase body weight

ಮಾಂಸಾಹಾರ

ಮಾಂಸಾಹಾರವನ್ನು ಸೇವಿಸುವುದಾದರೆ ಅದನ್ನು ದಿಟ್ಟವಾಗಿ ಆಯ್ದುಕೊಳ್ಳಬೇಕು. ತೂಕವನ್ನು ಹೆಚ್ಚಿಸಿಕೊಳ್ಳಬೇಕಾದರೆ ಮಾಂಸ ಸಹಾಯ ಮಾಡುತ್ತದೆ. ಹೆಚ್ಚು ಮಾಂಸಾಹಾರ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗಬಹುದು. ಅಧಿಕ ಕೊಬ್ಬು ಹಾಗೂ ಹೃದಯ ಸಂಬಂಧಿ ಅನಾರೋಗ್ಯಗಳು ತಲೆದೋರಬಹುದು. ಹೀಗಾಗಿ ವಾರಕ್ಕೆ ಮೂರರಿಂದ ಐದು ಬಾರಿ ಮಾಂಸ ಸೇವಿಸುವುದು ಒಳಿತು. ಮೂರರಿಂದ ಐದು ಬಾರಿ ಮಾಂಸ ಸೇವಿಸುವುದು ತೂಕ ಹೆಚ್ಚಿಸಿಕೊಳ್ಳಲು ಬಹಳ ಸಹಾಯಕಾರಿ.

ಪ್ರೋಟಿನ್, ವಿಟಮಿನ್‌, ಮಿನರಲ್‌ಗಳು:

ಪ್ರೋಟಿನ್, ವಿಟಮಿನ್‌ ಹಾಗೂ ಮಿನರಲ್‌ಗಳನ್ನು ಅಗತ್ಯವಾಗಿ ಸೇವಿಸಿ. ಪ್ರೋಟಿನ್ ಜೀವಕೋಶ ಹಾಗೂ ಮಾಂಸಖಂಡಗಳ ಆರೋಗ್ಯ ಹೆಚ್ಚಿಸುತ್ತದೆ. ಆದ್ದರಿಂದ ಅಗತ್ಯಕ್ಕಿಂತ ಹೆಚ್ಚು ಸೇವಿಸಬಹುದು. ಇದಕ್ಕಾಗಿ ಪ್ರೋಟಿನ್ ಪೌಡರ್‌ಗಳ ಮೊರೆ ಹೋಗುವ ಬದಲು ಆಹಾರದಲ್ಲೇ ಇದನ್ನು ಸೇವಿಸಿ. ಪ್ರೋಟಿನ್ ಅಂಶವಿರುವ ಆಹಾರಗಳೆಂದರೆ ಬೇಳೆ ಕಾಳುಗಳು, ಹಾಲು ಮತ್ತು ಹಾಲಿನ ಪದಾರ್ಥಗಳು. ಮೊಳಕೆ ಬರಿಸಿದ ಕಾಳು, ಬಾದಾಮಿ, ಗೋಡಂಬಿ, ವಾಲ್‌ನಟ್ ಹಾಗೂ ಕಡಲೆಬೀಜಗಳನ್ನು ಅಧಿಕವಾಗಿ ಸೇವಿಸಿ. ತೂಕ ಹೆಚ್ಚಿಸಿಕೊಳ್ಳಲು ಈ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಿ. ತೂಕ ಹೆಚ್ಚಿಸುವ ಹಣ್ಣುಗಳೆಂದರೆ ಬಾಳೆಹಣ್ಣು, ಸಪೋಟ, ಹಲಸು, ಪೈನಾಪಲ್, ಮಾವಿನಹಣ್ಣು.

ಕ್ಯಾಲೋರಿಯುಕ್ತ ಆಹಾರ ಸೇವಿಸಿ:

ಹೆಚ್ಚು ಕ್ಯಾಲೋರಿ ಇರುವ ಆಹರಗಳು ಹೈನು ಉತ್ಪನ್ನಗಳಾದ ಹಾಲು, ಮೊಟ್ಟೆ, ಮೀನು ಹಾಗೂ ಮಾಂಸಗಳಲ್ಲಿ ಹೆಚ್ಚು ಕ್ಯಾಲೊರಿಗಳಿರುತ್ತವೆ. ಪಿಷ್ಟ ಹೆಚ್ಚಿರುವ ಆಹಾರಗಳಾದ ಆಲೂಗಡ್ಡೆ ಇತ್ಯಾದಿಗಳಲ್ಲಿ ಕ್ಯಾಲೋರಿ ಹೆಚ್ಚಿರುವುದು. ಹಾಗೆಯೇ ಕಾಳು ಹಾಗೂ ಪಾಲಕ್ಕಿ ಸೊಪ್ಪಿನಂತಹಾ ಆಹಾರಗಳನ್ನು ಮಿತವಾಗಿ ಸೇವಿಸಬಹುದು. ಇದನ್ನು ಹೆಚ್ಚಾಗಿ ಸೇವಿಸಿದರೆ ಇತರೆ ಆರೋಗ್ಯ ಸಂಬಂಧಿ ತೊಂದರೆಗಳು ಬರಬಹುದು ಹಾಗಾಗಿ ಎಚ್ಚರವಿರಲಿ. ಹೆಚ್ಚು ಕ್ಯಾಲೊರಿಗಳು ಬೊಜ್ಜಿನ ಸಮಸ್ಯೆಗೆ ಈಡುಮಾಡಬಹುದು. ಚಾಕೊಲೇಟ್ ಹಾಗೂ ಸಿಹಿ ತಿನಿಸುಗಳಲ್ಲಿಯೂ ಹೆಚ್ಚು ಕ್ಯಲೊರಿಗಳು ಇರುವುದರಿಂದ ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಸೋಡಾ ಅಥವಾ ತಂಪು ಪಾನೀಯಗಳನ್ನು ಬಿಟ್ಟು ಅದರ ಬದಲಾಗಿ ಹಾಲು, ಪ್ರೋಟೀನ್ ಶೇಕ್ ಹಾಗೂ ಹಣ್ಣಿನ ರಸಗಳನ್ನು ಸೇವಿಸಬಹುದು. ಪಿಷ್ಟ ಹೆಚ್ಚಿರುವ ತರಕಾರಿಗಳಾದ ಗಡ್ಡೆಗಳು, ಕ್ಯಾರಟ್, ಆಲೂಗಡ್ಡೆ, ಬೀನ್ಸ್, ಸೌತೆಕಾಯಿ, ಕೋಸುಗಡ್ಡೆ, ಹೂಕೊಸು ಇತ್ಯಾದಿಗಳನ್ನು ಸೇವಿಸಬಹುದು.

ಐಸ್ ಕ್ರೀಮ್

ಐಸ್‌ಕ್ರೀಮ್ ಸೇವಿಸಿರಿ ಏಕೆಂದರೆ ಇದೊಂದು ಪುಷ್ಟಿದಾಯಕ ಹಾಗೂ ಸುಲಭವಾಗಿ ಜೀರ್ಣವಾಗುವ ಸಂಪೂರ್ಣ ಆಹಾರ ನೂರು ಗ್ರಾಂ ಐಸ್ ಕ್ರೀಮ್ 200 ಗ್ರಾಂ ಕ್ಯಾಲೊರಿ ಶಕ್ತಿ ನೀಡುತ್ತದೆ. 100 ಗ್ರಾಂ ಐಸ್ ಕ್ರೀಮ್ 200 ಗ್ರಾಂ ಕ್ಯಾಲೊರಿ ಶಕ್ತಿ ನೀಡುತ್ತದೆ. ಹೀಗಾಗಿ ಐಸ್‌ಕ್ರೀಮ್ ಸೇವಿಸಿರಿ. ಏಕೆಂದರೆ ಇದೊಂದು ಪುಷ್ಟಿದಾಯಕ ಹಾಗೂ ಸುಲಭವಾಗಿ ಜೀರ್ಣವಾಗುವ ಸಂಪೂರ್ಣ ಆಹಾರ. ಉತ್ತಮ ಗುಣಮಟ್ಟದ ಒಳ್ಳೆ ತಯಾರಕರ ಮತ್ತು ಪ್ಯಾಕಿಂಗ್ ಹೊಂದಿರುವುದನ್ನು ಸೇವಿಸಿರಿ ಬೀದಿ ಬಳಿಯಲ್ಲಿನ ಐಸ್ ಕ್ರೀಮ್ ಅಥವಾ ಸಾಫ್ಟಿ ಬೇಡ ಇವು ಅನಾರೋಗ್ಯಕರ.

being underweight may be just as bad for your health as being obese. However, simply adding certain foods to your diet can be very effective to gain weight. Here are of the best foods to help you gain weight the healthy way.

You may also like