Home » ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳಲು 30 ನಿಮಿಷದ ಸೈಕಲ್ ಸವಾರಿ

ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳಲು 30 ನಿಮಿಷದ ಸೈಕಲ್ ಸವಾರಿ

by manager manager

ನಮ್ಮ ದೇಹವನ್ನು ಸುಸ್ಥಿಯಲ್ಲಿಡವ ಆರೋಗ್ಯಕರ ಆಹಾರದಂತೆ ನಮ್ಮ ಜೀವನಕ್ಕೆ ಅತೀ ಅವಶ್ಯಕವಾದದ್ದು ದೈಹಿಕ ವ್ಯಾಯಾಮ. ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳಲು ಸೈಕ್ಲಿಂಗ್‌((cycling))ನಷ್ಟು ಉತ್ತಮವಾದ ವ್ಯಾಯಾಮ ಮತ್ತೊಂದಿಲ್ಲ. ಅಗ್ಗದ ದರದಲ್ಲಿ ಉತ್ತಮ ವ್ಯಾಯಾಮ ಸಾಧ್ಯವಾದರೆ ಅದು ಸೈಕ್ಲಿಂಗ್ ನಿಂದ.

ಸೈಕ್ಲಿಂಗ್(cycling) ನಮ್ಮ ಜೀವನಶೈಲಿಯನ್ನೇ ಬದಲಾಯಿಸುತ್ತದೆ. ಪ್ರತಿದಿನ ಸೈಕಲ್ ತುಳಿಯುವುದರಿಂದ ನಮ್ಮ ಅಂಗಾಂಗಗಳಿಗೆ ವ್ಯಾಯಾಮ ಸಿಗುತ್ತದೆ. ಇದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಅಲ್ಲದೆ ಸೈಕ್ಲಿಂಗ್ ಬಳಕೆಯಿಂದ ಪರಿಸರ ಮಾಲಿನ್ಯವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಆದ್ದರಿಂದ ಪ್ರತಿನಿತ್ಯ ಬೆಳಗ್ಗೆ 20 ರಿಂದ 30 ನಿಮಿಷವಾದರು ಸೈಕ್ಲಿಂಗ್‌ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿರಿ.

30 minute cycling workout to maintain fitness

ಸೈಕ್ಲಿಂಗ್ ಮಾಡುವುದರಿಂದ ಆಗುವ ಲಾಭಗಳು

1. ದೇಹದ ತೂಕ ಇಳಿಸಲು ಸೈಕ್ಲಿಂಗ್:

ದಿನಕೊಮ್ಮೆ ಸೈಕ್ಲಿಂಗ್ ಮಾಡಿದರೆ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು. ದೇಹದಲ್ಲಿ ಸಂಗ್ರಹವಾಗಿರುವ ಅನಾವಶ್ಯಕವಾದ ಕೊಬ್ಬು ಕರಗುತ್ತದೆ. ದೇಹದ ಪ್ರತಿಯೊಂದು ಭಾಗದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ. ದಿನ ನಿತ್ಯ 20 ರಿಂದ 30 ಸೈಕಲ್ ಸವಾರಿ ಮಾಡಿದರೆ ದೇಹದಲ್ಲಿ ಆಕ್ಸಿಜನ್ ಹೆಚ್ಚು ಉತ್ಪತಿಗೊಂಡು ಚರ್ಮಕ್ಕೆ ತಾಜಾ ಆಕ್ಸಿಜನ್ ನೀಡಿ ನಮಗೆ ಹೊಸ ಹುರುಪನ್ನು ನೀಡುತ್ತದೆ. ದೇಹಕ್ಕೆ ದೃಡತೆ ನೀಡಿ ಪಾದಗಳು ಮತ್ತು ಸ್ನಾಯುಗಳಗೆ ಸಾಮರ್ಥ್ಯ ನೀಡುತ್ತದೆ.

30 minute cycling workout to maintain fitness

2. ರೋಗಗಳನ್ನು ದೂರವಿಡಲು ಸೈಕ್ಲಿಂಗ್:

ಕ್ರಮಬದ್ಧವಾಗಿ ಸೈಕ್ಲಿಂಗ್ ಮಾಡುವುದರಿಂದ ಅಧಿಕ ರಕ್ತದೊತ್ತಡ, ಬೊಜ್ಜು ಮಧುಮೇಹ ಹಾಗೂ ಇತರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ತಡೆಗಟ್ಟುತ್ತದೆ. ಸೈಕ್ಲಿಂಗ್ ಮಾಡಿದರೆ ನಿದ್ರಾಹೀನತೆಯನ್ನು ನಿವಾರಿಸುತ್ತದೆ, ಜೀರ್ಣಕ್ರಿಯೆಯು ಉತ್ತಮವಾಗುತ್ತದೆ. ಕಾಲುಗಳು ಕೂಡ ಶಕ್ತಿಯುತವಾಗುವುದಲ್ಲದೇ, ನೋವಿದ್ದರೆ ನಿವಾರಣೆಯಾಗುತ್ತದೆ.

3. ಮಾನಸಿಕ ಆರೋಗ್ಯಕ್ಕೆ ಸೈಕ್ಲಿಂಗ್:

ಸೈಕ್ಲಿಂಗ್ ನಿಂದ ನಮ್ಮ ಮಾನಸಿಕ ಆರೋಗ್ಯ ಕೂಡ ವೃದ್ಧಿಯಾಗುತ್ತದೆ. ಪ್ರತಿನಿತ್ಯ ಕಚೇರಿಗೆ ಸೈಕ್ಲಿಂಗ್ ಮಾಡುವುದರಿಂದ ನಮ್ಮ ಮಾನಸಿಕ ಮತ್ತು ಬೌದ್ದಿಕ ಒತ್ತಡ ಮಾಯವಾಗುತ್ತದೆ ಎಂದು ಸಂಶೋಧಕರ ವರದಿಯೊಂದು ಹೇಳಿದೆ. ಬೆಳ್ಳಂ ಬೆಳಗ್ಗೆ ಮಾನವನ ಮಾನಸಿಕ ಒತ್ತಡ ಆತನ ಇಡೀ ದಿನದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಬೆಳಗಿನ ನಮ್ಮ ಕಾರ್ಯಚಟುವಟಿಕೆಗಳು ಅಹ್ಲಾದಕರವಾಗಿರಬೇಕು. ಒಂದು ವೇಳೆ ಬೆಳಗ್ಗೆಯೇ ನಮ್ಮ ಮನಃಸ್ಥಿತಿ ಕೆಟ್ಟದಾಗಿದ್ದರೆ, ಅದು ಇಡೀ ದಿನದ ಕಾರ್ಯಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

4. ಉತ್ತಮ ವ್ಯಾಯಾಮ ಸೈಕ್ಲಿಂಗ್:

ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆಯ ವೇಳೆ ಸೈಕ್ಲಿಂಗ್‌ ಮಾಡುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮ ಸಿಗುತ್ತದೆ. ದೇಹದ ಪ್ರತಿಯೊಂದು ಭಾಗವು ಚಟುವಟಿಕೆಯಿಂದ ಆ ದಿನ ಕಾರ್ಯ ನಿರ್ವಹಿಸುತ್ತದೆ.

30 minute cycling workout to maintain fitness

5. ನಿದ್ರಾಹೀನತೆ ಮುಕ್ತಿಗೆ ಸೈಕ್ಲಿಂಗ್

ನಿದ್ರಾ ಸಮಸ್ಯೆಯಿಂದ ಬಳಲುವವರಿಗೆ ಸೈಕ್ಲಿಂಗ್‌ ಉತ್ತಮ ಮದ್ದು. ಸಮೀಕ್ಷೆಯ ಪ್ರಕಾರ, ಪ್ರತಿನಿತ್ಯ ನಿಯಮಿತವಾಗಿ ಸೈಕ್ಲಿಂಗ್‌ ಮಾಡುವುದರಿಂದ ನಿದ್ರಾಹೀನತೆಯಿಂದ ಮುಕ್ತಿ ಪಡೆಯಬಹುದು. ದೇಹಕ್ಕೆ ಉತ್ತಮವಾದ ವರ್ಕೌಟ್‌ ಸಿಗುವುದರಿಂದ ಮನಸ್ಸು ಉತ್ಸಾಹಭರಿತವಾಗಿ ಯಾವುದೇ ಒತ್ತಡವಿಲ್ಲದೇ ನಿದ್ರೆಗೆ ಜಾರಬಹುದು. ಆರೋಗ್ಯವು ಕೂಡ ಚೆನ್ನಾಗಿರುತ್ತದೆ.

6. ಬುದ್ಧಿಮಟ್ಟ ಚುರುಕುಗೊಳ್ಳಲು ಸೈಕ್ಲಿಂಗ್

ಸೈಕ್ಲಿಂಗ್‌ನಿಂದ ಮತ್ತೊಂದು ಉಪಯೋಗವೆಂದರೆ ಮೆದುಳಿನ ಬೆಳವಣಿಗೆ ದಿನೇ ದಿನಾ ಹೆಚ್ಚಾಗುತ್ತದೆ. ಸಾಧ್ಯವಾದರೆ ಮಕ್ಕಳಿಗೆ ಬಾಲ್ಯದಲ್ಲಿಯೇ ಸೈಕ್ಲಿಂಗ್‌ ಮಾಡುವುದನ್ನು ಅಭ್ಯಾಸ ಮಾಡಿಸಿ. ಇದರಿಂದ ಅವರ ಬುದ್ಧಿಶಕ್ತಿಯು ಚುರುಕುಕಾಗುತ್ತದೆ.

cycling for your health. 30-minute Cycling Workout That’s Just as Effective your body. cycling lead to weight loss and improved fitness, Build Muscle, Burn Calories and more.

You may also like