Home » ಬಾಯಿ ಚಪ್ಪರಿಸುವ ಪೆಪ್ಪರ್‌ ಚಿಕ್ಕನ್ ಮಾಡುವುದು ಹೇಗೆ..?

ಬಾಯಿ ಚಪ್ಪರಿಸುವ ಪೆಪ್ಪರ್‌ ಚಿಕ್ಕನ್ ಮಾಡುವುದು ಹೇಗೆ..?

by manager manager

ಬಾಯಿ ಚಪ್ಪರಿಸುವ ಪೆಪ್ಪರ್‌ ಚಿಕ್ಕನ್ (Pepper Chicken)

ಬೇಕಾಗುವ ಪದಾರ್ಥಗಳು

  1. ಚಿಕನ್‌ – 1 ಕೆಜಿ
  2. ಕಾಳು ಮೆಣಸಿನ ಪುಡಿ – 2 ಚಮಚ
  3. ಈರುಳ್ಳಿ – 3
  4. ಶುಂಠಿ – ಸ್ವಲ್ಪ
  5. ಬೆಳ್ಳುಳ್ಳಿ- ಸ್ವಲ್ಪ
  6. ಹಸಿಮೆಣಸಿನಕಾಯಿ – 6
  7. ಚಕ್ಕೆ- ಸ್ವಲ್ಪ
  8. ಲವಂಗ – 3
  9. ಅರಿಶಿನ – ಅರ್ಧ ಚಮಚ
  10. ಕೊತ್ತಂಬರಿ ಸೊಪ್ಪು – ಸ್ವಲ್ಪ
  11. ತುಪ್ಪ – 50 ಗ್ರಾಂ
  12. ಎಣ್ಣೆ – 50 ಗ್ರಾಂ
  13. ರುಚಿಗೆ ತಕ್ಕಷ್ಟು ಉಪ್ಪು
  14. ಅರ್ಧ ಚಮಚ ಜೀರಿಗೆ ಪುಡಿ
  15. ಕರಿಬೇವಿನ ಎಲೆ
  16. ನಿಂಬೆ ಹಣ್ಣು ೧

ಮಾಡುವ ವಿಧಾನ:

ಚಿಕನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಕಾಳು ಮೆಣಸಿನ ಪುಡಿ, ಅರಿಶಿಣ ಪುಡಿ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ ಹಾಗು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ಒಂದು ಗಂಟೆ ಇಡಿ. ನಂತರ ಒಂದು ಪ್ಯಾನ್ ಬಿಸಿ ಮಾಡಿ ಅದಕ್ಕೆ 2 ಚಮಚ ಎಣ್ಣೆ, ತುಪ್ಪ ಹಾಕಿ, ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಸಿಡಿಯುವಾಗ ಕರಿಬೇವಿನ ಎಲೆ ಹಾಕಿ, ಈರುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಚಿಕನ್‌ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 5 ನಿಮಿಷ ಫ್ರೈ ಮಾಡಿ. ಇದಾದ ನಂತರ ಕಡಿಮೆ ಉರಿಯಲ್ಲಿ ಅರ್ಧ ಗಂಟೆ ಬೇಯಿಸಿ. ಆಗಾಗ ಸೌಟ್ ನಿಂದ ಆಡಿಸುತ್ತಾ ಇರಿ. ಚಿಕನ್‌ ಬೆಂದ ಮೇಲೆ ಸ್ವಲ್ಪ ನಿಂಬೆ ರಸ ಹಿಂಡಿ ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪೆಪ್ಪರ್‌ ಚಿಕ್ಕನ್ (Pepper Chicken) ಸವಿಯಲು ಸಿದ್ದ.

Pepper Chicken is Southeast Asian One-Pot Black dish. is a spicy and savory delight, with flavors of ginger, soy, and garlic playing off one another, and black pepper emerging as the star.

You may also like