Home » ಖಾರ ಪ್ರಿಯರಿಗೆ ಚಿಲ್ಲಿ ಚಿಕನ್‌: ಕಡಿಮೆ ಸಮಯದಲ್ಲಿ ಮಾಡಿ ಸವಿಯಿರಿ

ಖಾರ ಪ್ರಿಯರಿಗೆ ಚಿಲ್ಲಿ ಚಿಕನ್‌: ಕಡಿಮೆ ಸಮಯದಲ್ಲಿ ಮಾಡಿ ಸವಿಯಿರಿ

by manager manager

ಬೇಕಾಗುವ ಸಾಮಾಗ್ರಿಗಳು

  1. ಬೋನ್‌ಲೆಸ್‌ ಚಿಕನ್‌ – 1/2 kg
  2. ಜೋಳದ ಹಿಟ್ಟು – 1/2 ಕಪ್‌
  3. ಬೆಳ್ಳುಳ್ಳಿ ಪೇಸ್ಟ್ – 1/2 ಚಮಚ
  4. ಕತ್ತರಿಸಿದ ಹಸಿ ಮೆಣಸಿನಕಾಯಿ – 2
  5. ಎಣ್ಣೆ – 1/2 ಕಪ್‌
  6. 1 ಮೊಟ್ಟೆ
  7. ಶುಂಠಿ – 1/2 ಚಮಚ
  8. ಕ್ಯಾಪ್ಸಿಕಂ 1
  9. ಈರುಳ್ಳಿ – 2 ಕಪ್‌
  10. ಸೋಯಾ ಸಾಸ್ 1 ಚಮಚ
  11. ರುಚಿಗೆ ತಕ್ಕಷ್ಟು ಉಪ್ಪು

how to make chilli chicken: Try out this easy recipe

ಮಾಡುವ ವಿಧಾನ:

ಕೋಳಿಯ ಮಾಂಸ ತುಂಡುಗಳನ್ನು ಕತ್ತರಿಸಿ ಚೆನ್ನಾಗಿ ತೊಳೆಯಿರಿ. ಮೊದಲಿಗೆ ಒಂದು ಬೌಲ್‌ಗೆ ಕೋಳಿ ಮಾಂಸ, ಮೊಟ್ಟೆ, ಶುಂಠಿ, ಬೆಳ್ಳುಳ್ಳಿ, ಜೋಳದ ಹಿಟ್ಟು, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ 2 ಗಂಟೆ ಫ್ರಿಜ್’‌ನಲ್ಲಿ ಇಡಿ. ನಂತರ ಫ್ರಿಜ್‌ನಿಂದ ಹೊರತೆಗೆದು 15 ನಿಮಿಷ ಇಡಿ.

ಈಗ ಸ್ಟೌ ಮೇಲೆ ಪಾತ್ರೆ ಇಟ್ಟು ಎಣ್ಣೆಯನ್ನು ಬಿಸಿ ಮಾಡಿ, ಎಣ್ಣೆ ಕಾದ ನಂತರ ಮಿಕ್ಸ್ ಮಾಡಿದ ಚಿಕನ್ ಅನ್ನು ಕಬಾಬ್‌ ರೀತಿಯಲ್ಲಿ ಫ್ರೈ ಮಾಡಿ. ಅದಾದ ಬಳಿಕ ಮತ್ತೊಂದು ಪ್ಯಾನ್ ಗೆ 2 ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ 2-3 ನಿಮಿಷ ಫ್ರೈ ಮಾಡಿ. ಇದಕ್ಕೆ ಹಸಿ ಮೆಣಸಿನಕಾಯಿ, ಕ್ಯಾಪ್ಸಿಕಂ ಹಾಕಿ ಮಿಕ್ಸ್‌ ಮಾಡಿ. ಇದೇ ಸಮಯದಲ್ಲಿ ಸೋಯಾ ಸಾಸ್‌, ಚಿಕನ್, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ. ನಂತರ ಅದನ್ನು ತಟ್ಟೆಗೆ ಹಾಕಿದರೆ ಚಿಲ್ಲಿ ಚಿಕನ್ ಸವಿಯಲು ಸಿದ್ದ.

chilli chicken is one of the most popular indo-chinese style chicken. learn with easy how to make chilli chicken recipe. Here’s how you can make this quick chicken recipe at home using easily available ingredients.

You may also like