Home » ರುಚಿಯಾದ ಕಾಯಿ ದೋಸೆ ಮಾಡಿ ಸವಿಯಿರಿ

ರುಚಿಯಾದ ಕಾಯಿ ದೋಸೆ ಮಾಡಿ ಸವಿಯಿರಿ

by manager manager

ಇಂದಿನ ವೆರೈಟಿ ದೋಸೆಗಳಲ್ಲಿ ಕಾಯಿ ದೋಸೆಯ ಬಗ್ಗೆ ತಿಳಿದುಕೊಳ್ಳೋಣ. ಮೆತ್ತಗಿನ ಈ ದೋಸೆಗಳು ತಿನ್ನಲು ಬಲು ರುಚಿಯಾಗಿರುತ್ತದೆ. ತೆಂಗಿನಕಾಯಿ ಅಥವಾ ಎಳೆನೀರಿನ ದಪ್ಪಪದರದ ಗಂಜಿ ಬಳಸಿ ಕಾಯಿ ದೋಸೆ ತಯಾರು ಮಾಡಬಹುದು. ಬರಿ ಮಸಾಲೆ ದೋಸೆ, ಪ್ಲೇನ್ ದೋಸೆ, ಈರುಳ್ಳಿ ದೋಸೆಯಂತವನ್ನು ತಿಂದು ಬೇಜಾರಾದವರು ಕಾಯಿ ದೋಸೆ ಮಾಡಿ ಸವಿಯಬಹುದು. ಕನ್ನಡ ಅಡ್ವೈಜರ್ ಇಂದು ಕಾಯಿ ದೋಸೆ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದೆ.

ಬೇಕಾಗುವ ಸಾಮಗ್ರಿಗಳು

  • ಒಂದು ಲೋಟ ಅಕ್ಕಿ. (ಇಡ್ಲಿ ಅಕ್ಕಿ)
  • ಉದ್ದಿನಬೇಳೆ ಸ್ವಲ್ಪ
  • ಕಾಯಿತುರಿ
  • 1 ಚಿಕ್ಕ ಚೆಮಚ ಮೆಂತ್ಯ
  • ರುಚಿಗೆ ತಕ್ಕಸ್ಟು ಉಪ್ಪು
  • ತಯಾರಿಸಲು ಸ್ವಲ್ಪ ಎಣ್ಣೆ ಹಾಗೂ ಅಗತ್ಯವಿದಲ್ಲಿ ತುಪ್ಪ

ತಯಾರಿಸುವ ವಿಧಾನ

ಅಕ್ಕಿ, ಉದ್ದಿನಬೇಳೆ ಹಾಗೂ ಮೆಂತ್ಯವನ್ನು ತೊಳೆದು ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ನೆನಸಿಟ್ಟ ಅಕ್ಕಿ, ಉದ್ದಿನಬೇಳೆಗೆ ಕಾಯಿತುರಿ ಮತ್ತು ಸ್ವಲ್ಪವೇ ನೀರು ಸೇರಿಸಿ ರುಬ್ಬಿ ಪಾತ್ರೆಗೆ ಹಾಕಿಟ್ಟುಕೊಳ್ಳಿ. ಹಿಟ್ಟಿಗೆ ಉಪ್ಪು, ದೋಸೆ ಹಿಟ್ಟಿನ ಹದಕ್ಕೆ ಅಗತ್ಯವಿರುವ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಿ. ಒಲೆಯ ಮೇಲೆ ತವಾ ಇರಿಸಿ ಕಾದ ಮೇಲೆ ತವಾಗೆ ಎಣ್ಣೆ ಸವರಿ ದೋಸೆ ಹಾಕಿ ಮುಚ್ಚಳ ಹಾಕಿರಿ (ದೊಸೆಯನ್ನು ದಪ್ಪ ಪದರ ಹಾಗೂ ತೆಳ್ಳಗೆ ಮಾಡಿಕೊಳ್ಳಬಹುದು). ಒಂದುವರೆ ನಿಮಿಷದ ನಂತರ ಮುಚ್ಚಳ ತೆಗೆದು ದೋಸೆಯನ್ನು ತೆಗೆದು ತಟ್ಟೆಗೆ ಹಾಕಿಕೊಂಡರೆ (ಇದನ್ನು ಮುಗುಚಿ ಹಾಕಬೇಕಾಗಿಲ್ಲ) ಚಟ್ನಿ, ಭಾಜಿ ಅಥವಾ ಚಟ್ನಿ ಪುಡಿಯೊಂದಿಗೆ ಕಾಯಿ ದೋಸೆ ಸವಿಯಲು ಸಿದ್ದ.

Coconut dosa is a popular breakfast dish. It is popular in Karnataka. This coconut dosa is a nice variation to usual dosa varieties. Quick and easy to make this dosa for breakfast. Learn how to make Instant Coconut Dosa Recipe at home.

You may also like