Home » ಹೈದರಾಬಾದ್ ಕರ್ನಾಟಕ ಗ್ರೂಪ್ ಎ & ಬಿ ತಾಂತ್ರಿಕ(RPC) ಹುದ್ದೆಗಳ ನೇಮಕ: ಅರ್ಜಿ ಆಹ್ವಾನ

ಹೈದರಾಬಾದ್ ಕರ್ನಾಟಕ ಗ್ರೂಪ್ ಎ & ಬಿ ತಾಂತ್ರಿಕ(RPC) ಹುದ್ದೆಗಳ ನೇಮಕ: ಅರ್ಜಿ ಆಹ್ವಾನ

by manager manager

RPC Group A Group B technical posts recruitment 2018 Hyderabad Karnataka

RPC Group A Group B technical posts recruitment 2018 Hyderabad Karnataka.

ಕರ್ನಾಟಕ ಲೋಕಸೇವಾ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಹಾಗೂ ಆಯ್ಕೆ ವಿಧಾನದ ಮೂಲಕ ಹೈದರಾಬಾದ್ ಕರ್ನಾಟಕ ವೃಂದದ ವಿವಿಧ ಇಲಾಖೆಗಳ ಉಳಿಕೆ ಮೂಲ ವೃಂದದ(RPC) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಪ್ರಕಟಣೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ನಿಯಮಗಳು 2006 ಮತ್ತು 2015ರ ತಿದ್ದುಪಡಿ ನಿಯಮಗಳನ್ವಯ ಹೈದರಾಬಾದ್ ಕರ್ನಾಟಕ ವೃಂದದ ಉಳಿಕೆ ಗ್ರೂಪ್ A ಮತ್ತು ಗ್ರೂಪ್ B ವೃಂದದ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಹೊರಡಿಸಿರುವ ಅಧಿಸೂಚನೆ ಇದಾಗಿದೆ.

ಗ್ರೂಪ್ A ಹುದ್ದೆಗಳು

ಹುದ್ದೆಯ ಹೆಸರು : ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ ವಿಮಾ ವೈದ್ಯಾಧಿಕಾರಿ

ಒಟ್ಟು ಹುದ್ದೆಗಳ ಸಂಖ್ಯೆ : 16

ವೇತನ ಶ್ರೇಣಿ: ರೂ.52650-97100

ಗ್ರೂಪ್ B ಹುದ್ದೆಗಳು

ಹುದ್ದೆಯ ಹೆಸರು : ತೋಟಗಾರಿಕೆ ಇಲಾಖೆಯಲ್ಲಿನ ಸಹಾಯಕ ತೋಟಗಾರಿಕೆ ಅಧಿಕಾರಿ

ಒಟ್ಟು ಹುದ್ದೆಗಳ ಸಂಖ್ಯೆ : 88

ವೇತನ ಶ್ರೇಣಿ: ರೂ.40900-78200

ಹುದ್ದೆಯ ಹೆಸರು : ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರು

ಒಟ್ಟು ಹುದ್ದೆಗಳ ಸಂಖ್ಯೆ : 01

ವೇತನ ಶ್ರೇಣಿ : ರೂ.43100-83900

ಹುದ್ದೆಯ ಹೆಸರು : ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿ

ಒಟ್ಟು ಹುದ್ದೆಗಳ ಸಂಖ್ಯೆ : 05

ವೇತನ ಶ್ರೇಣಿ : ರೂ.43100-83900

ಅರ್ಜಿಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ: 17-12-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-01-2019

ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 17-01-2019

ಸೂಚನೆ: ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ ಪ್ರತ್ಯೇಕ ಹುದ್ದೆಗೆ ಪ್ರತ್ಯೇಕ ಶುಲ್ಕ ಪಾವತಿಸಬೇಕು.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ರೂ 600

ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.300

ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.50

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : ಶುಲ್ಕ ವಿನಾಯಿತಿ ನೀಡಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ

ಸಾಮಾನ್ಯ ಪತ್ರಿಕೆ(200 ಅಂಕಗಳು) ಮತ್ತು ನಿರ್ದಿಷ್ಟ ಪತ್ರಿಕೆ(200 ಅಂಕಗಳು) ಒಟ್ಟಾರೆ ಎರಡು ಪ್ರಶ್ನೆ ಪತ್ರಿಕೆಗಳಿರುತ್ತವೆ.

– ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮ(Syllabus) ವಿಷಯಗಳನ್ನು ನೋಡಲು ಕ್ಲಿಕ್ ಮಾಡಿ

ಶೈಕ್ಷಣಿಕ ವಿದ್ಯಾರ್ಹತೆ:

ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅನುಸೂಚಿಯಲ್ಲಿ ಆಯಾ ಹುದ್ದೆಗಳ ಮುಂದೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. ಪ್ರಕಟಣೆಯನ್ನು ಓದಿ ತಿಳಿಯಲು ಕ್ಲಿಕ್ ಮಾಡಿ

ವಯೋಮಿತಿ :

ಅರ್ಜಿಸುವ ಕೊನೆಯ ದಿನಾಂಕದೊಳಗೆ ಕನಿಷ್ಟ 18 ವರ್ಷ ಗರಿಷ್ಠ 35 ವರ್ಷ ಪೂರೈಸಿರಬೇಕು.

ಸಾಮಾನ್ಯ ವರ್ಗ ಗರಿಷ್ಠ : : 35 ವರ್ಷ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : 40 ವರ್ಷ

ಪ್ರವರ್ಗ 2ಎ/ಬಿ/3ಎ/3ಬಿ : : 38 ವರ್ಷ

ಮಾಜಿ ಸೈನಿಕ ಅಭ್ಯರ್ಥಿಗಳು : ಗರಿಷ್ಠ ವಯೋಮಿತಿಯಲ್ಲಿಅವರುಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ವರ್ಷಗಳು ಜೊತೆಗೆ 03 ವರ್ಷಗಳ ಸಡಿಲಿಕೆ ಅನ್ವಯವಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಭರ್ತಿ ಮಾಡಿಬೇಕು. ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯ

– ಭಾವಚಿತ್ರ ಮತ್ತು ಸಹಿ

– ವಯೋಮಿತಿಗೆ ಆಧಾರವಾಗಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ

– ವಿದ್ಯಾರ್ಹತೆ ದಾಖಲೆ

– ಮೀಸಲಾತಿಗೆ ಕೋರಿದ್ದರೆ ಸಂಬಂಧಿಸಿದ ದಾಖಲೆಗಳು

RPC ಹೈದರಾಬಾದ್ ಕರ್ನಾಟಕ ನೇಮಕಾತಿ ಪ್ರಕಟಣೆಗಾಗಿ ಮತ್ತು ಇತರೆ ಮಾಹಿತಿಗಾಗಿ ಕ್ಲಿಕ್ ಮಾಡಿ 

Karnataka Public Service Commission has invited application for the recruitment of Hyderabad Karnataka Group A and Group B Technical posts R.P.C. Read more here..

You may also like