Home » ಪಂಚತಂತ್ರ ಕಥೆಗಳು: ಮಕ್ಕಳಿಗೆ ಹೇಳಿ ಮೊಲ ಮತ್ತು ಸಿಂಹ, ತಕ್ಕಡಿ ತಿಂದ ಇಲಿಯ ಈ ಕಥೆ

ಪಂಚತಂತ್ರ ಕಥೆಗಳು: ಮಕ್ಕಳಿಗೆ ಹೇಳಿ ಮೊಲ ಮತ್ತು ಸಿಂಹ, ತಕ್ಕಡಿ ತಿಂದ ಇಲಿಯ ಈ ಕಥೆ

by manager manager

ಮೊಲ ಮತ್ತು ಸಿಂಹ :-

ಒಂದು ಕಾಡಿನಲ್ಲಿ ಪ್ರಾಣಿಗಳೆಲ್ಲ ಸೇರಿ ಸಿಂಹ ರಾಜನ ಬಗ್ಗೆ ಮಾತಾಡುತ್ತಿದ್ದವು. ಅದರಲಿದ್ದ ಕರಡಿಯು “ಸಿಂಹ ರಾಜನಿಂದ ಪಾರಾಗಲು ಒಂದು ಉಪಾಯವನ್ನು ಹುಡುಕಿದ್ದೀವಿ, ಯಾಕೆ ಅಂದ್ರೆ ನಮ್ಮಲ್ಲಿ ಒಬ್ಬೊಬ್ಬರನ್ನು ತಿಂದು ತೇಗೋದೆ ಅವನ ಕೆಲ್ಸ, ಆ ಕೆಲ್ಸಕ್ಕೆ ನಾಂದಿ ಹಾಡ್ಲೆ ಬೇಕು” ಎನ್ನುತ್ತಿರುವಾಗ ಒಂದು ಉಪಾಯ ಹೊಳೆದು ಸಿಂಹನ ಬಳಿ ಹೋಗಿ “ಸಿಂಹ ರಾಜ ನೀವು ಬೇಟೆ ಮಾಡುವ ಕೆಲಸವನ್ನು ಬಿಟ್ಟುಬಿಡಿ ನೀವು ಗುಹೆಯಲ್ಲೆ ಇರಿ ನಾವು ಪ್ರತಿದಿನ ಒಂದೊಂದು ಪ್ರಾಣಿಯನ್ನು ನಿಮ್ಮ ಗುಹೆಗೆ ಕಳುಹಿಸುತ್ತೇವೆ” ಎಂದಾಗ ಸಿಂಹಕ್ಕೆ ಅದು ಸರಿ ಎನಿಸಿ “ಸರಿ ಒಳ್ಳೆಯ ಉಪಾಯ ಹಾಗೆ ಮಾಡಿ” ಎಂದು ವಿಶ್ರಾಂತಿ ಪಡೆಯಲು ಹೊರಡುತ್ತದೆ. ಮೊದಲ ದಿನವೇ ಮತ್ತೆ ಗುಂಪು ಸೇರಿ ಮೊಲವನ್ನು ಕಳುಹಿಸಬೇಕು ಎಂದು ಚರ್ಚೆ ಮಾಡಲಾಯಿತು ಆದರೇ ಮೊಲಕ್ಕೆ ಸಾಯಲು ಇಷ್ಟವಿಲ್ಲದೆ ಗೊಂದಲಕ್ಕೆ ಒಳಗಾಗಿ ಯೋಚಿಸ ತೊಡಗಿತು. ಕೊನೆಗೂ ಒಂದು ಉಪಾಯ ಹೊಳೆದು ಸಿಂಹದ ಗುಹೆಯ ಬಳಿ ಎಷ್ಟು ಹೊತ್ತಾದರೂ ಮೊಲ ಹೋಗಲೇ ಇಲ್ಲ ಸಿಂಹಕ್ಕೆ ಹಸಿವು ಜಾಸ್ತಿಯಾಗ ತೊಡಗಿ ಸಿಟ್ಟು ನೆತ್ತಿಗೆ ಏರ ತೊಡಗಿತು. ಕೊನೆಗೂ ತುಂಬ ವಿಳಂಬ ಮಾಡಿ ಗುಹೆಯ ಹತ್ತಿರ ಬಂದಿತು. “ನೀನು ಎಷ್ಟು ತಡವಾಗಿ ಬಂದಿದ್ದೀಯಾ ಗೊತ್ತ ಎಲ್ಲಿ ನಿನ್ನ ಗುಂಪು, ನೀನ್ ಒಬ್ನೆ ನನಗೆ ಸಾಕಾಗುತ್ತ” ಎಂದೆಲ್ಲ ಪ್ರಶ್ನೆ ಮಾಡತೊಡಗಿತು. “ಇಲ್ಲ ಮಹಾರಾಜ ನಾನು ಹತ್ತು ಮೊಲಗಳ ಜೊತೆಗೆ ಬರ್ತಾ ಇದ್ದೆ ಆಗ ಅಲ್ಲಿ ಇನ್ನೊಂದು ಬಲಿಷ್ಠವಾದ ಸಿಂಹ ಬಂದು ಆ ಒಂಬತ್ತು ಮೊಲಗಳನ್ನು ತಿಂದು ಹಾಕಿದ ನಾನ್ ತಪ್ಪಿಸಿಕೊಂಡು ನಿಮ್ಗೆ ಹೇಳೋಣ ಅಂತ ಬಂದೆ” ಎಂದಾಗ “ಏನು ಇನ್ನೊಂದು ಸಿಂಹನಾ ನನಗಿಂತ ಬಲಿಷ್ಠ ಇಲ್ಲ ಅದು ಸಾಧ್ಯವೇ ಇಲ್ಲ ನಡಿ ನೋಡೋಣ” ಎಂದು ಮೊಲದ ಹಿಂದೆ ಹೋಗುತ್ತದೆ. ಆಗ ಮೊಲ ನಿಧಾನವಾಗಿ ಬಾವಿಯ ಹತ್ತಿರ ಬಂದು ಸಿಂಹವನ್ನು ಬಾವಿ ಒಳಗೆ ಬಗ್ಗಿ ನೋಡಲು ಹೇಳಿತು ಅದರಂತೆ ಬಗ್ಗಿ ನೋಡಿದ ಸಿಂಹಕ್ಕೆ ಅದರ ಪ್ರತಿಬಿಂಬವೇ ಕಾಣಿಸಿತು ಅದನ್ನೇ ಇನ್ನೊಂದು ಸಿಂಹವೆಂದು ತಿಳಿದು ಘರ್ಜನೆ ಮಾಡ ತೊಡಗಿತು ಅದರಂತೆ ಆ ಪ್ರತಿಬಿಂಬವು ಘರ್ಜನೆ ಮಾಡಿತು ಆ ಸಿಂಹವನ್ನು ಈಗಲೇ ಕೊಲ್ಲುವೇ ಎಂದು ಬಾವಿಗೆ ಹಾರಿತು. ಮೊಲಕ್ಕೆ ತನ್ನ ಉಪಾಯ ಫಲಿಸಿತು ಸಿಂಹ ಸತ್ತು ಹೋಯ್ತು ಅಂತ ಸಂತೋಷದಿಂದ ಕುಣಿದಾಡಿತು. ಇದು “ಶಕ್ತಿಗಿಂತ ಯುಕ್ತಿ ಮೇಲು” ಎಂಬುದನ್ನು ತಿಳಿಸುತ್ತದೆ.

ತಕ್ಕಡಿ ತಿಂದ ಇಲಿ :-

ಒಂದು ಹಳ್ಳಿಯಲ್ಲಿ ಒಬ್ಬ ವ್ಯಾಪರಸ್ಥ ಜೀವ ಎಂಬುವನು ಇದ್ದ, ಅವನು ಒಂದು ದಿನ ಪಕ್ಕದ ಹಳ್ಳಿಯಲ್ಲಿ ಏನದ್ರೂ ವ್ಯಾಪರ ಮಾಡೋಣ ಅಂತ ದಾರಿಯಲ್ಲಿ ಹೊರಟ. “ಅಬ್ಬ ಈ ಬಿಸಿಲು, ಇದ್ಬೇರೆ ಕಬ್ಬಿಣದ ತಕ್ಕಡಿ, ಎಷ್ಟ್ ಭಾರ ಇದೆ” ಎಂದು ನೆರಳಲ್ಲಿ ಕೂತು ವಿಶ್ರಾಂತಿ ಪಡೆಯ ಬೇಕೆಂದು ಕೂರುತ್ತಾನೆ. ಅವನಿಗೆ ಅವನ ತಕ್ಕಡಿ ಅಂದ್ರೆ ತುಂಬಾನೆ ಇಷ್ಟ ಯಾಕೆ ಅಂದ್ರೆ ಅದು ಅವನ ತಾತನಿಂದ ಬಂದ ಬಳುವಾಳಿಯಾಗಿತ್ತು. ಪಕ್ಕದ ಹಳ್ಳಿಯಲ್ಲಿ ತುಂಬ ಕೆಲಸ ಇದ್ದಿದ್ದರಿಂದ ಅವನು ಆ ತಕ್ಕಡಿಯನ್ನು ತನ್ನ ಸ್ನೇಹಿತನ ಮನೆಯಲ್ಲಿ ಇರಿಸುವಂತೆ ಯೋಚನೆ ಮಾಡಿ ತನ್ನ ಸ್ನೇಹಿತನ ಮನೆಗೆ ಹೋಗಿ “ಈ ಕಬ್ಬಿಣದ ತಕ್ಕಡಿ ತುಂಬ ಭಾರ ಇದೆ, ಹಾಗಾಗೀ ಇದನ್ನ ಹೊತ್ತ್ಯೊದು ತುಂಬ ಕಷ್ಟ ನಾನು ಪಕ್ಕದ ಹಳ್ಳಿಯಲ್ಲಿ ಕೆಲಸ ಮುಗಿಸಿ ಮತ್ತೆ ಬಂದು ತೆಗೆದುಕೊಂಡು ಹೋಗುವೆ” ಎಂದು ಹೇಳಿ ತನ್ನ ಸ್ನೇಹಿತ ಮನೆಯಲ್ಲಿ ಇಟ್ಟು ಹೊರಡುತ್ತಾನೆ. ಆಗ ಆ ಸ್ನೇಹಿತ ಆ ತಕ್ಕಡಿಯನ್ನು ನೋಡಿ ಇದು ಬೆಲೆಬಾಳುವ ತಕ್ಕಡಿ ಇದನ್ನು ನಾನೇ ಇಟ್ಕೊಂಡು ಅವನಿಗೆ ಬೇರೆ ಏನನ್ನಾದ್ರು ಹೇಳಬೇಕು ಎಂದು ಯೋಚಿಸಿದ. ಅದರಂತೆ ತನ್ನ ತಕ್ಕಡಿಯನ್ನು ಹಿಂತಿರುಗಿ ಪಡೆಯಲು ಬಂದಾಗ “ನನ್ನ ತಕ್ಕಡಿಯನ್ನ ಕೊಡು ನಾನ್ ಹೊರ್ಡ್ತೀನಿ” ಎನ್ನುತ್ತಾನೆ. ಆಗ “ಇಲಿಗಳು ನಿನ್ನ ತಕ್ಕಡಿಯನ್ನ ತಿಂದು ಬಿಡ್ತು, ಆ ಇಲಿಗಳ ಕಾಟನ ಸಹಿಸ್ಕೋಳೋಕೆ ಆಗ್ತಾ ಇಲ್ಲ” ಎಂಬ ಉತ್ತರ ಬಂದಿತು. ಆಗ ಜೀವನಿಗೆ ಬಹಳ ಬೇಸರವಾಯಿತು ಇದು ಸುಳ್ಳೆಂದು ತಿಳದ ಜೀವ ಒಂದು ಉಪಾಯ ಮಾಡಿದನು ಅದರಂತೆ. “ಕೃಷ್ಟ ನಿನ್ನ ಮಗನ್ನ ಕಳುಹಿಸು ಅವನಿಗೆ ಒಂದು ಉಡುಗೊರೆ ತಂದಿದ್ದೀನಿ ಅದನ್ನ ಕೊಟ್ಟು ಕಳುಹಿಸುತ್ತೇನೆ” ಎನ್ನುವ ಮಾತನ್ನು ಕೇಳಿ. “ಹ ಖಂಡಿತ” ಎಂದು ಕೃಷ್ಣ ಸಂತೋಷದಿಂದ ಕಳುಹಿಸಿಕೊಟ್ಟ. ತುಂಬ ಸಮಯದ ನಂತರ ಮತ್ತೆ ಯೋಚಿಸುತ್ತ “ಎಲ್ಲಿ ನನ್ ಮಗ ಬರ್ಲೆ ಇಲ್ಲ” ಎಂದು ಜೀವನ ಮನೆಗೆ ಬಂದ ಕೃಷ್ಣ “ನನ್ನ ಮಗ ಎಲ್ಲಿ” ಎಂದು ಕೇಳಿದ ಅದಕ್ಕೆ ಜೀವ ತೊದಲುತ್ತ “ನಿನ್ನ ಮಗನ್ನ ಒಂದು ಹದ್ದು ತಗೊಂಡು ಹೊರ್ಟ್ ಹೋಯಿತು” ಎಂದ. ಕೋಪ ತಡೆಯದ ಕೃಷ್ಣ ಜೀವನಿಗೆ ಹೊಡೆಯಲು ಹೋಗುತ್ತಾನೆ. ಅಲ್ಲೊಂದು ಪುಟ್ಟ ಜಗಳವಾಗುತ್ತದೆ. ನಂತರ ಪಂಚಾಯ್ತಿ ಕಟ್ಟೆಯಲ್ಲಿ ಹಿರಿಯರ ಸಮ್ಮುಖದಲ್ಲಿ ವಾದ ವಿವಾದಗಳು ನಡೆಯುತ್ತವೆ. ಆಗ ಕೃಷ್ಣ “ನೋಡಿ ಸ್ವಾಮಿ ನನ್ನ ಹತ್ತು ವರ್ಷದ ಮಗನನ್ನ ಒಂದು ಹದ್ದು ಹೇಗೆ ಎತ್ಕೊಂಡು ಹೋಗೋಕೆ ಸಾಧ್ಯ ನೀವೆ ಕೇಳಿ” ಎಂದು ಪ್ರಶ್ನೆಯನ್ನು ಇಡುತ್ತಾನೆ. ಆಗ ಜೀವ “ಮತ್ತೇ ಇವ್ನು ನನ್ನ ಕಬ್ಬಿಣದ ತಕ್ಕಡಿನಾ ಇಲಿಗಳು ತಿಂದು ಹಾಕ್ದೋ ಅಂದ, ಒಂದು ಕಬ್ಬಿಣದ ತಕ್ಕಡಿನಾ ಇಲಿಗಳು ತಿನ್ನುತ್ತೇ ಅಂದ್ರೆ ಹತ್ತು ವರ್ಷದ ಬಾಲಕ್ಕನ್ನ ಹದ್ದು ಕೂಡ ಹೊತ್ತಯ್ಯಬಹುದಲ್ವ ಸ್ವಾಮಿ” ಎಂದಾಗ ಅಲ್ಲಿದ್ದವರೆಲ್ಲ ನಗುತ್ತಾರೆ. ಪಂಚಾಯಿತಿಯ ಮುಖ್ಯಸ್ಥ “ಇದ್ಕಕೆ ಉತ್ತರ ಹೇಳು ಕೃಷ್ಣ” ಎಂದಾಗ ತಬ್ಬಿಬ್ಬಾದ ಕೃಷ್ಣ “ಅದು ಅದು ನನಗೆ ಗೊತ್ತಿಲ್ಲ ಸ್ವಾಮಿ ಮನೆಲೀ ಒಂದು ಭಾರಿ ಹುಡುಕ್ತೀನಿ” ಎಂದಾಗ. ಜೀವ “ನಾನು ಕೂಡ ಎಲ್ಲ ಕಡೆ ಹುಡುಕಿ ನೋಡ್ತೀನಿ” ಎನ್ನುತ್ತಾನೆ. ಎಲ್ಲರೂ ಹೊರಡುತ್ತಾರೆ. ನಂತರೆ ಕೃಷ್ಣ ತಕ್ಕಡಿಯನ್ನ ತಂದು ಜೀವನಿಗೆ ಒಪ್ಪಿಸುತ್ತಾನೆ. ತಕ್ಷಣ ಕೃಷ್ಣನಿಗೆ ತನ್ನ ಮಗನನ್ನು ಒಪ್ಪಿಸುತ್ತಾನೆ. ಈ ಕತೆಯ ಅರ್ಥ “ದುರಾಸೆಯೇ ದುಃಖದ ಮೂಲ” ಎಂಬುದು.

ಕೃಷ್ಣನ ತೊಡೆಯ ಮೇಲೆ ಪ್ರಾಣ ಬಿಟ್ಟ ರಾಧೆಯ ಕಥೆ..

You may also like