Home » ಮಕ್ಕಳಿಗಾಗಿ ಈ ಕತೆ : ಆನೆಯ ಗೆಳೆತನ

ಮಕ್ಕಳಿಗಾಗಿ ಈ ಕತೆ : ಆನೆಯ ಗೆಳೆತನ

by manager manager

ಕಾಡಿನಲ್ಲಿ ತನ್ನ ಎಲ್ಲಾ ಕುಟುಂಬದವರನ್ನು ಕಳೆದುಕೊಂಡಿರುವ ಆನೆಯೊಂದು ಅಳುತ್ತ ಸಾಯಲು ಹೋಗುತ್ತಿರುತ್ತದೆ ಅದನ್ನು ನೋಡಿ ಅಲ್ಲಿಗೆ ಬರುವ ಒಂದು ಇರುವೆಯು “ನಿಲ್ಲು ನಿನ್ಗೆ ಸಾಯೋ ಅಂತದ್ದು ಏನ್ ಆಗಿದೆ” ಎಂದು ಕೇಳುತ್ತದೆ. “ನನಗೆ ನನ್ನವÀರು ಅಂತ ಯಾರು ಇಲ್ಲ ಅದಕ್ಕೆ ಒಂಟಿ ಆಗಿರೋದಕ್ಕೆ ಆಗ್ತ ಇಲ್ಲ ನಾನ್ ಸಾಯ್‍ಬೇಕು” ಎನ್ನುವ ಆನೆ ಮಾತಿಗೆ ಇರುವೆಯು “ಅಯ್ಯೊ ಅಷ್ಟೇನ ಯಾರನ್ನಾದ್ರು ಗೆಳೆತನ ಮಾಡ್ಕೊಂಡ್ರೆ ಆಯ್ತಪ್ಪ” ಎಂದು ಸಲಹೆಯನ್ನು ಕೊಡುತ್ತದೆ. “ನನ್ ಜೊತೆ ಯಾರ್ ಗೆಳೆತನ ಮಾಡ್ತಾರೆ” ಎಂದು ಕೇಳುವ ಆನೆಗೆ. ಸಾಯೋಕೆ ಪ್ರಯತ್ನ ಪಡ್ತಾ ಇರೋ ನಿನ್ಗೆ ಸ್ನೇಹಿತರನ್ನ ಮಾಡ್ಕೋಳೊಕೆ ಪ್ರಯತ್ನ ಪಡೋಕೆ ಆಗಲ್ವಾ” ಎನ್ನುತ್ತೆ ಆ ಮಾತಿನಂತೆ ಆನೆಯು ಗೆಳೆತನವನ್ನು ಮಾಡಿಕೊಳ್ಳಲೇ ಬೇಕೆಂದು ಅಲ್ಲಿಂದ ಹೊರಡುತ್ತದೆ.

ಮೊದಲಿಗೆ ಮರದ ಮೇಲೆ ಆಟವಾಡುತ್ತಿರುವ ಕೋತಿಯ ಬಳಿ ಬರುವ ಆನೆಯು “ಪ್ಲೀಸ್ ನನ್ನ ಸ್ನೇಹಿತ ಆಗ್ತೀಯಾ ನೀನು” ಎಂದು ಕೇಳುತ್ತದೆ. ಅದಕ್ಕೆ ಕೋತಿಯು “ನೀನ್ನ ಜೊತೆ ಸ್ನೇಹ ನಿನ್ನ ದೇಹ ನೋಡು ನಿನ್ಗೆ ಮರ ಹತ್ತೋಕೆ ಬರಲ್ಲ” ಹಾಗೆ ಹೀಗೆ ಎಂದು ಹವಹೇಳನ ಮಾಡಿ ಕಳುಹಿಸುತ್ತದೆ.

ಆನೆಯು ನಂತರದಲ್ಲಿ ಮೊಲದ ಹತ್ತಿರ ಬರುತ್ತದೆ ಅದರ ಬಳಿಯು ಸಹ “ನನ್ನ ಸ್ನೇಹಿತ ಆಗ್ತೀಯಾ” ಎಂದು ಕೇಳುತ್ತದೆ. ಆಗ ಮೊಲವು “ನೀನ್ ನೋಡಿದ್ರೆ ಕಪ್ಪುಗಿದ್ಯ ನನ್ನ ನೋಡು ಎಷ್ಟ್ ಬಿಳಿಗಿದ್ದೀನಿ ಅದನ್ನ ಬಿಡು ನನ್ನಷ್ಟು ಸ್ಪೀಡಾಗಿ ಓಡೋಕೆ ಆಗುತ್ತ ನಿನ್ಗೆ ಹೋಗ್ ಹೋಗ್” ಎಂದು ಕಳುಹಿಸುತ್ತದೆ.

ಮತ್ತೆ ಸಪ್ಪೆ ಮೊರೆ ಹಾಕಿಕೊಂಡು ಹೋಗುತ್ತಿರುವಾಗ ಒಂದು ಕಾಡೆಮ್ಮೆ ಸಿಗುತ್ತದೆ ಅದರ ಬಳಿ ಹೋಗಿ ನನ್ನ ಸ್ನೇಹಿತ ಆಗ್ತೀಯಾ ಎಂದಾಗ “ನೀನು ನಮ್ ಗುಂಪವ್ನು ಅಲ್ಲ ಅದಕ್ಕೆ ನಿನ್ನ ನನ್ನ ಸ್ನೇಹಿತನನ್ನಾಗಿ ಮಾಡ್ಕೋಳೋಕೆ ಆಗಲ್ಲ” ಎಂದು ಹೇಳುತ್ತದೆ ಅಲ್ಲು ಆನೆಗೆ ನೀರಾಸೆ. ಅಲ್ಲಿ ನರಿಯು ಸಿಗುತ್ತದೆ ಅದರೊಂದಿಗೂ ಸಹ “ನನ್ನ ಸ್ನೇಹಿತ ಆಗ್ತೀಯಾ” ಎಂದಾಗ “ನಿನ್ ಜೊತೆಗೆ ನಿನ್ಗೆ ದಪ್ಪ ದೇಹವಿದೆ ಅಷ್ಟೆ ಬುದ್ದಿಯು ಸಾಸವೆ ಕಾಳಿನಷ್ಟು ಇಲ್ಲ ನಾನು ಬುದ್ದಿವಂತರ ಜೊತೆಗೆ ಮಾತ್ರ ಸ್ನೇಹ ಮಾಡೋದು” ಎಂದು ಹೇಳಿ ನರಿ ಹೋಗುತ್ತದೆ.

ಹೀಗೆ ಒಂದಲ್ಲ ಒಂದು ಕಾರಣಕ್ಕೆ ಆನೆಯನ್ನು ಯಾವ ಪ್ರಾಣಿಯು ತನ್ನ ಸ್ನೇಹಿತ ಎಂದು ಒಪ್ಪಿಕೊಳ್ಳುವುದಿಲ್ಲ ಆದರೂ ಆನೆ ತನ್ನ ಹಠವನ್ನು ಬಿಡದೆ ಸ್ನೇಹಿತರಿಗೊಸ್ಕರ ಹುಡುಕಿ ಹುಡುಕಿ ಸಾಕಾಗಿ ಮಲಗಿರುತ್ತದೆ ಆಗ ಎಲ್ಲ ಪ್ರಾಣಿಗಳು ಅರಚುತ್ತ ಓಡಿಬರುತ್ತಿರುವುದು ಕಾಣಿಸುತ್ತದೆ ಅದನ್ನು ನೋಡಿ ಗಾಬರಿಯಿಂದ ಅಲ್ಲಿ ಓಡಿಹೋಗುತ್ತಿದ್ದ ಒಂದು ಪ್ರಾಣಿಯನ್ನು ಕೇಳಿದಾಗ ಸಿಂಹವೊಂದು ಆ ಪ್ರಾಣಿಗಳನ್ನು ತಿನ್ನಲು ಅಟ್ಟಡಿಸಿಕೊಂಡು ಬರುತ್ತಿರುವ ವಿಷಯ ತಿಳಿಯುತ್ತದೆ. ಆಗ ತಾನು ಏನನ್ನಾದರೂ ಮಾಡಲೇಬೇಕೆಂದು ಸಿಂಹದ ಎದುರು ನಿಂತು “ಇವರನ್ನ ತಿನ್ನೋಕೆ ನಾನು ಬಿಡೋದಿಲ್ಲ” ಎಂದು ಹೇಳುತ್ತ ನಿಲ್ಲುತ್ತದೆ. “ಏಯ್ ನೀನ್ ಯಾರೋ ನನ್ನ ತಿನ್ನೋಕೆ ಬಿಡೊದಿಲ್ಲ ಅಂತ ಹೇಳೋಕೆ ನಾನು ಈ ಕಾಡಿನ ರಾಜ ನೀನ್ ಅಡ್ಡ ಬಂದ್ರೆ ನೀನ್ ಕತೆನು ಸಹ ಮುಗಿಯುತ್ತೆ” ಎನ್ನುತ್ತ ಸಿಂಹ ಆನೆಯ ಮೇಲೆ ಬೀಳುತ್ತದೆ ಆನೆಯು ತುಂಬ ಸಮಯದವರೆಗೆ ಸಿಂಹದ ಜೊತೆಗೆ ಕಾದಾಡುತ್ತದೆ ಕೊನೆಗೆ ತನ್ನ ಸೊಂಡಿಲಿನಿಂದ ಸಿಂಹವನ್ನು ಎತ್ತಿ ಬಿಸಾಕುತ್ತದೆ ಸಿಂಹಕ್ಕೆ ಪೆಟ್ಟಾಗಿ ಅಲ್ಲಿಂದ ಓಡುತ್ತದೆ.

ಆಗ ಆನೆಯ ಬಳಿ ಬರುವ ಕೋತಿ, ಮೊಲ, ಕಾಡೆಮ್ಮೆ, ನರಿ ಮತ್ತು ಇನ್ನೀತರ ಪ್ರಾಣಿಗಳು ಆನೆಯ ಬಳಿ ಕ್ಷಮೆ ಕೇಳಿ ಎಲ್ಲಾ ಪ್ರಾಣಿಗಳು ಆನೆಯನ್ನು ತಮ್ಮ ಸ್ನೇಹಿತನೆಂದು ಒಪ್ಪಿಕೊಳ್ಳುತ್ತವೆ.

ಈ ಕತೆಯ ಸಾರಾಂಶ ಸ್ನೇಹವನ್ನು ಗಾತ್ರ, ಬಣ್ಣ, ಜಾತಿ, ಬುದ್ದಿವಂತಿಕೆಯಲ್ಲಿ ಅಳೆಯಬೇಡಿ ಬದಲಿಗೆ ನಂಬಿಕೆ, ಪ್ರೀತಿ, ಗೌರವದಿಂದ ಸ್ನೇಹವನ್ನ ಸ್ವೀಕರಿಸಿ ಎಂಬುದು.

BSNL ನಿಂದ ರೂ.599 ಕ್ಕೆ ಪ್ರತಿದಿನ 5GB ಡಾಟಾ: ಇತರೆ ಉಪಯೋಗಗಳು ಏನೆಲ್ಲಾ ಇವೆ ಗೊತ್ತೇ?

You may also like