Home » ಮಕ್ಕಳಿಗಾಗಿ ಈ ಕತೆ : ಸೌಲಭ್ಯಕ್ಕಿಂತ ಸ್ವತಂತ್ರವೇ ಸುಖ

ಮಕ್ಕಳಿಗಾಗಿ ಈ ಕತೆ : ಸೌಲಭ್ಯಕ್ಕಿಂತ ಸ್ವತಂತ್ರವೇ ಸುಖ

by manager manager

ಒಂದು ಹಳ್ಳಿಯಲ್ಲಿ ಸ್ವತಂತ್ರವಾಗಿ ಜೀವಿಸುತ್ತಿದ್ದ ಇಲಿ ಗುಡ್ಡು ತನ್ನ ಪಾಡಿಗೆ ಹಾಡುತ್ತ ಕುಣಿಯುತ್ತ ತನಗೆ ಬೇಕಾದ ಅಹಾರವನ್ನು ಹುಡುಕಿ ತಿನ್ನುತ್ತ ಬಹಳ ಸಂತೋಷವಾಗಿತ್ತು, ಗುಡ್ಡುವನ್ನು ಬೇಟಿಯಾಗಲು ಬರುವ ಸಿಟಿ ಇಲಿ ಪಿಂಟು. “ಹೇ ಏನೋ ಗುಡ್ಡು ನಿನ್ಗೆ ಸಿಟಿಗೆ ಬಾ ಬಾ ಅಂತ ಕರ್ದು ಕರ್ದು ಸಾಕಾಯ್ತು ಕಣೋ ಯಾಕೋ ಸಿಟಿ ಅಂದ್ರೆ ಅಷ್ಟ್ ಭಯನಾ” ಎನ್ನುವ ಪಿಂಟುಗೆ “ಇಲ್ಲ ಕಣೋ ನಾನು ಇಲ್ಲೆ ತುಂಬ ಆರಾಮವಾಗಿ ಇದ್ದೀನಿ” ಎನ್ನುವ ಗುಡ್ಡು.

“ಸರಿ ಬಾ ಊಟ ಮಾಡು” ಎಂದು ತನ್ನ ಬಿಲದಲ್ಲಿದ್ದ ತರಕಾರಿ, ಗೆಡ್ಡೆ ಗೆಣಸನ್ನು ಕೊಡುತ್ತಿರುವಾಗ “ಥೂ ಇನ್ನು ನೀನು ಇದನ್ನೆ ತಿಂತ ಇದ್ದೀಯಾ, ನಮ್ ಸಿಟಿಲೀ ಏನೇನ್ ಸಿಗುತ್ತೆ ಗೊತ್ತ ಫೀಜ, ಬರ್ಗರ್, ಕೇಕ್ ಎಲ್ಲ ಸಿಗುತ್ತೆ ಅದನ್ನ ಒಂದು ಸಲನಾದ್ರು ನೋಡಿದ್ದೀಯಾ ನೀನು” ಎನ್ನುವ ಪಿಂಟು. ಗುಡ್ಡು ಇಲಿಗೆ ಅದರ ಬಗ್ಗೆ ಮೋಹ ಜಾಸ್ತಿ ಆಗುತ್ತೆ “ಹೌದ ಅದೆಲ್ಲ ತುಂಬ ರುಚಿಯಾಗಿರುತ್ತ” ಎಂದು ಪ್ರಶ್ನಿಸುವ ಗುಡ್ಡುಗೆ “ಹೌದು ಕಣೋ ಅಲ್ಲಿ ಇನ್ನೂ ವೈರೈಟಿ ಫುಡ್ ಸಿಗುತ್ತೆ” ಎಂದು ಗುಡ್ಡುಗೆ ಸಿಟಿ ಭೂತವನ್ನು ಬೆನ್ನಿಗೆ ಅಂಟುವಂತೆ ಮಾಡಿ ಅಲ್ಲಿಂದ ಹೊರಟು ಹೋಗುವ ಪಿಂಟು.

ಗುಡ್ಡು ಸಿಟಿಯ ಬಗ್ಗೆ ಯೋಚ್ನೆ ಮಾಡುತ್ತ ಮಾಡುತ್ತ ಊಟ, ತಿಂಡಿ, ನಿದ್ದೆ ಎಲ್ಲವನ್ನು ಬಿಟ್ಟು ಬಿಡುತ್ತೆ “ನಾನ್ ಸಿಟಿಗೆ ಹೋಗ್ಲೇಬೇಕು ಈ ಹಳ್ಳಿಲೀ ಏನು ಇಲ್ಲ ನನಗೆ ಸುಖ ಬೇಕು” ಎಂದು ಯೋಚಿಸಿ ಹಳ್ಳಿಯನ್ನು ಬಿಡಲು ನಿರ್ಧರಿಸುತ್ತೆ. ತನ್ನ ಎಲ್ಲಾ ಸಾಮಾಗ್ರಿಗಳನ್ನು ಫ್ಯಾಕ್ ಮಾಡಿಕೊಂಡು ಹೊರಡುವಾಗ ಅಲ್ಲಿಗೆ ಬರುವ ಇನ್ನೊಂದು ಹಳ್ಳಿ ಇಲಿಯು ಎಲ್ಲಿಗೆ ಎಂದು ಕೇಳುತ್ತೆ ಅದಕ್ಕೆ ಗುಡ್ಡು ಇಲಿಯು “ನಾನು ಸಿಟಿಗೆ ಹೋಗ್ತಾ ಇದ್ದೀನಿ ಅಲ್ಲಿ ನಾನು ಐಷರಾಮಿಯಾಗಿ ಬದುಕ್ತೀನಿ” ಎಂದು ಹೇಳುತ್ತೆ.

“ಲೋ ಗುಡ್ಡು ಗೊತ್ತಿಲ್ಲದ ಜಾಗಕ್ಕೆ ಹೋಗೋ ಮುಂಚೆ ಒಂದು ಸಲ ಯೋಚ್ನೆ ಮಾಡೋ” ಎಂದು ಕಿವಿ ಮಾತನ್ನು ಹೇಳಿದರು ಅದಕ್ಕೆ ಸೊಪ್ಪು ಹಾಕದೆ ಅಲ್ಲಿಂದ ಹೊರಡುವ ಗುಡ್ಡು. ಸಿಟಿಗೆ ಎಂಟ್ರಾಗುವ ಗುಡ್ಡುಗೆ ಅಲ್ಲಿನ ವಾಹನಗಳ ಓಡಾಟ, ಹೊಗೆ, ಬೃಹತ್ ಕಟ್ಟಡಗಳು ಎಲ್ಲವನ್ನು ನೋಡಿ ಭಯದಿಂದ ಪಿಂಟುವನ್ನು ಹುಡುಕುತ್ತದೆ ಕೊನೆಗೂ ಪಿಂಟು ಮನೆಯ ಹತ್ತಿರ ಬಂದಾಗ ಗುಡ್ಡುವಿಗೆ ಆಶ್ಚರ್ಯ ಇಷ್ಟೊಂದು ದೊಡ್ಡ ಮನೆ ಇದ್ಯಾ ಇವ್ನ ಹತ್ರ ಎನ್ನುತ್ತಿರುವಾಗ ಮನೆ ಒಳಗೆ ಹೋಗಿ ನೋಡಿದರೆ ಆ ಮನೆಯಲ್ಲಿ ಒಂದು ಸಣ್ಣ ಬಿಲವಿದ್ದು ಅದರೊಳಗೆ ಹೋಗುವ ಗುಡ್ಡುವಿಗೆ ಕತ್ತಲೆ ಆವರಿಸುತ್ತದೆ. ಆಗಲೇ ಪಿಂಟು “ಬಾ ಗುಡ್ಡು ಊಟ ಮಾಡ್ಕೊಂಡು ಬರೋಣ” ಎಂದು ಒಂದು ದೊಡ್ಡ ಟೇಬಲ್ ಬಳಿ ಕರೆದ್ಯೊಯುತ್ತದೆ ಅಲ್ಲಿ ನಾನಾ ರೀತಿಯ ಭೋಜನ ಸಿದ್ದವಿರುತ್ತದೆ ಅದನ್ನು ನೋಡಿ ಗುಡ್ಡುವಿಗೆ ತುಂಬ ಸಂತೋಷವಾಗಿ ತುಂಬ ಹೊಟ್ಟೆ ಹಸಿವು ಇದ್ದ ಕಾರಣ ಬೇಗನೆ ಟೇಬಲ್ ಏರಿ ಅದನ್ನು ತಿನ್ನಲು ಹೋಗಬೇಕು ಅಷ್ಟರಲ್ಲಿ ಮನೆಯಲ್ಲಿದ್ದ ಜನ ಅಲ್ಲಿಗೆ ಬರುತ್ತಾರೆ ಅದನ್ನು ನೋಡಿ ಅವಿತು ಕೊಳ್ಳಲು ಜಾಗ ಹುಡುಕುವ ಪಿಂಟು ಅದನ್ನು ನೋಡಿ ಗುಡ್ಡುವಿಗೆ ಏನು ಮಾಡಬೇಕು ಎಂದು ತಿಳಿಯದೆ ಅಲ್ಲೆ ಅವಿತುಕೊಳ್ಳುತ್ತದೆ.

ಊಟವೆಲ್ಲ ಮುಗಿದ ಮೇಲೆ ಅಲ್ಲಿದ್ದ ಜನ ಹೊರಡುತ್ತಾರೆ. ಆಗಲಾದ್ರು ತಿನ್ನೋಣವೆಂದು ಟೇಬಲ್ ಏರುವಷ್ಟರಲ್ಲಿ ಮನೆ ಕೆಲಸದವಳು ಬಂದು ಉಳಿದಿದ್ದನ್ನು ತೆಗೆದುಕೊಂಡು ಹೋಗುತ್ತಾಳೆ. ಆಗ ಪಿಂಟು “ಬಾ ಗುಡ್ಡು ಅಡುಗೆ ಮನೆಗೆ ಹೋಗೋಣ” ಎಂದು ಹೋಗುವಾಗ ಒಂದು ಬೆಕ್ಕು ಇಬ್ಬರನ್ನು ಅಟ್ಟಿಸಿಕೊಂಡು ಬರುತ್ತೆ ಅದರಿಂದ ಬಚಾವ್ ಆಗಲು ಪರದಾಡುವ ಗುಡ್ಡು ಮತ್ತು ಪಿಂಟು ಇಲಿಗಳಿಗೆ ಪ್ರಾಣವೆ ಬಾಯಿಗೆ ಬಂದಂತಾಗುತ್ತದೆ. ಕೊನೆಗೂ ಅದರಿಂದ ತಪ್ಪಿಸಿಕೊಂಡು ಒಂದು ಡೆಸ್ಟ್ಬಿನ್‍ನೊಳಗೆ ಹೋಗುವ ಇಲಿಗಳಿಗೆ ಅಲ್ಲಿದ್ದ ಉಳಿದ ಮತ್ತು ವೇಸ್ಟ್ ತರಕಾರಿಗಳೆ ಅವತ್ತಿನ ಊಟವಾಗುತ್ತದೆ.

ಹೊರಗೂ ಬರಲಾರದೆ ಅಲ್ಲು ಇರೋಕೆ ಆಗದೆ ಒದ್ದಾಡುವ ಗುಡ್ಡುವಿಗೆ ಈ ಸಿಟಿ ಸಹವಾಸ ಸಾಕಪ್ಪ ಎಂದನಿಸುತ್ತದೆ. ಹಾಗೂ ಹೀಗೂ ಮಾಡಿ ಹೊರಬರುವ ಗುಡ್ಡು ಮತ್ತು ಪಿಂಟು ಇಲಿಗಳು ತಮ್ಮ ಬಿಲಕ್ಕೆ ಹೋಗುವಾಲೆ ಅಲ್ಲಿದ್ದ ಗಮ್ ಮೇಲೆ ಕಾಲಿಡುವ ಗುಡ್ಡು ಅಲ್ಲೆ ಅಂಟಿಕೊಳ್ಳುತ್ತೆ ಅದರಿಂದ ಬಿಡಿಸುವ ಹೊತ್ತಿಗೆ ಸಾಕಾಗಿ ಗುಡ್ಡು ಪಿಂಟುವಿಗೆ ಬೈಯಲು ಪ್ರಾರಂಭಿಸುತ್ತೆ “ನಾನ್ ಹೇಗೋ ಹಳ್ಳಿಲೀ ಸ್ವತಂತ್ರವಾಗಿ ಆರಾಮವಾಗಿ ಇದ್ದೆ ಇಲ್ಲಿಗೆ ಬಂದು ಪ್ರಾಣನೆ ಕಳ್ಕೋಳ್ಳೋ ಸ್ಥಿತಿಗೆ ಬಂದಿದ್ದಿನೀ ಅದಕ್ಕೆ ಹೇಳೋದು ದೂರದ ಬೆಟ್ಟ ನುಣ್ಣಗೆ ಅಂತ. ನೀನು ಸಾಕು ನೀನ್ ಸಿಟಿನು ಸಾಕು” ಎಂದು ಅಳಲು ಪ್ರಾರಂಭಿಸುತ್ತೆ. ಕೊನೆಗೂ ಅದರಿಂದ ಬಿಡಿಸಿಕೊಂಡು ಹೊರಬಂದ ಮೇಲೆ ಪಿಂಟು “ಎಲ್ಲ ದಿನ ಹೀಗೆ ಇರಲ್ಲ ಇವತ್ತೇನೋ ಹೀಗಾಯ್ತು” ಎಂದು ಸಬೂಬು ಹೇಳುತ್ತಿರುವಾಗ ಪಿಂಟುವಿಗೆ ಬೈದು ತನ್ನ ಹಳ್ಳಿಯ ಕಡೆ ಹೊರಡುತ್ತದೆ.

ಈ ಕತೆಯ ಸಾರಾಂಶ ಸೌಲಭ್ಯಗಳನ್ನ ಕೊಟ್ಟು ಸ್ವತಂತ್ರನ ಕೊಡ್ದೆ ಹೋದ್ರೆ ಯಾವ ಕೆಲಸನು ಯಶಸ್ಸನ್ನ ಕಾಣಲ್ಲ, ಸೌಲಭ್ಯಕ್ಕಿಂತ ಸ್ವತಂತ್ರನೇ ಮುಖ್ಯ.

ಮಕ್ಕಳಿಗಾಗಿ ಈ ಕತೆ : ಆನೆಯ ಗೆಳೆತನ

You may also like