Home » ನಲಪಾಡ್​ಗೆ ಜಾಮೀನು ಮಂಜೂರು: 116 ದಿನಗಳ ಜೈಲುವಾಸ ಅಂತ್ಯ

ನಲಪಾಡ್​ಗೆ ಜಾಮೀನು ಮಂಜೂರು: 116 ದಿನಗಳ ಜೈಲುವಾಸ ಅಂತ್ಯ

by manager manager

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 3 ತಿಂಗಳಿನಿಂದ ಜೈಲಿನಲ್ಲಿದ್ದ ಮಹಮ್ಮದ್ ನಲಪಡ್ (Mohammed Nalapad)ಗೆ ಕೊನೆಗೂ ಹೈಕೋರ್ಟ್ ಜಾಮೀನು(Bail) ನೀಡಿದೆ. ನಿನ್ನೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ತೀರ್ಪನ್ನು ಗುರುವಾರಕ್ಕೆ ಮುಂದೂಡಿತ್ತು.

ಜಾಮೀನು ನೀಡುವಂತೆ ಕೋರಿ ಹೈಕೋರ್ಟ್’ಗೆ ನಲ್‍ಪಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಜಾನ್ ಮೈಕೆಲ್ ಕುನ್ನಾ ಅವರ ಏಕಸದಸ್ಯ ಪೀಠ ಜಾಮೀನು(Bail) ಮಂಜೂರು ಮಾಡಿದೆ. 2 ಲಕ್ಷ ರೂ ಬಾಂಡ್, ಇಬ್ಬರ ಶೂರಿಟಿ ಪಡೆದು ಜಾಮೀನು ನೀಡಲಾಗಿದೆ. ಹಾಗೂ ಸಾಕ್ಷ್ಯನಾಶಕ್ಕೆ ಪ್ರಯತ್ನಿಸಬಾರದೆಂಬ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಾಗಿದೆ. ಒಟ್ಟಾರೆ ಶಾಸಕ ಪುತ್ರನ 116 ದಿನಗಳ ಜೈಲುವಾಸಕ್ಕೆ ಕೊನೆಗೂ ಅಂತ್ಯ ಸಿಕ್ಕಂತಾಗಿದೆ.

ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಫೆ.17ರಂದು ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದರು. ಫೆಬ್ರವರಿಯಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಲಪಾಡ್ ಸಲ್ಲಿಸಿದ್ದ ಎಲ್ಲಾ ಜಾಮೀನು ಅರ್ಜಿಗಳನ್ನೂ ಸೆಷೆನ್ಸ್ ಕೋರ್ಟು ವಜಾಗೊಳಿಸಿತ್ತು.

Shantinagar MLA NA Haris son Mohammed Nalapad Haris gets bail in high court. Nalapad and his 6 associates allegedly assaulted Vidvat, in an uptown cafe in Bengaluru. Nalapad was arrested on February 19. Karnataka High Court grants conditional bail to Nalapad.

You may also like