Home » ಇನ್ನು ಮುಂದೆ ಪೊಲೀಸ್ ಸೇವೆ ಪಡೆಯುವುದು ತುಂಬಾ ಸುಲಭ: ಬಂದಿದೆ ಹೊಸ ಆ್ಯಪ್

ಇನ್ನು ಮುಂದೆ ಪೊಲೀಸ್ ಸೇವೆ ಪಡೆಯುವುದು ತುಂಬಾ ಸುಲಭ: ಬಂದಿದೆ ಹೊಸ ಆ್ಯಪ್

by manager manager

ಬೆಂಗಳೂರು: ಮಹಿಳೆಯರ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಹೊಸದೊಂದು ಆ್ಯಪ್ ಬಿಡುಗಡೆಯಾಗಿದೆ.

ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆಗಿನ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ಸ್ಟೇಟ್ ಪೊಲೀಸ್(Karnataka state police app – KSP) ಎಂಬ ಹೆಸರಿನ ಅಪ್ಲಿಕೇಶನ್ ಅನ್ನು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದಾರೆ.

Karnataka State Police App launched: Mobile app for citizens

ಈ ಮೂಲಕ ಪೊಲೀಸರ ಸೇವೆಯನ್ನು ಮತ್ತಷ್ಟು ಸರಳವಾಗಿ ಜನರಿಗೆ ಒದಗಿಸಲು ಸಹಕಾರಿಯಾಗಲಿದೆ.

ಹಲವಾರು ವಿಶೇಷತೆ ಇರುವ ಈ ಆ್ಯಪ್​ನಲ್ಲಿ ನೇರವಾಗಿ ದೂರು ಕೂಡಾ ದಾಖಲು ಮಾಡಬಹುದು. ಆ್ಯಪ್ ಓಪನ್ ಮಾಡಿದ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯ ಬಗ್ಗೆ ಮಾಹಿತಿ, ದೂರವಾಣಿ ಸಂಖ್ಯೆ ಮತ್ತು ರೂಟ್ ಮ್ಯಾಪ್ ತೋರಿಸುವ ಈ ಆ್ಯಪ್ ಕಳ್ಳತನವಾದ ವಾಹನಗಳ ಮಾಹಿತಿ , ನಾಪತ್ತೆಯಾಗಿರೋ ವ್ಯಕ್ತಿಗಳ ಸಹ ಲಭ್ಯವಾಗುತ್ತದೆ. ಇನ್ನು ಈ ಆ್ಯಪ್ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ ಫೋನ್ ಗಳಲ್ಲಿ ಬಳಕೆ ಮಾಡಲು ಅವಕಾಶವಿದೆ.

ಮುಖ್ಯಮಂತ್ರಿ ಶ್ರೀ ಹೆಚ್ ಡಿ ಕುಮಾರಸ್ವಾಮಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕರ್ನಾಟಕ‌ ರಾಜ್ಯ ಪೊಲೀಸ್ ಮೊಬೈಲ್ ಆಪ್…

Posted by Chief Minister of Karnataka on Thursday, June 21, 2018

ವಿಶೇಷತೆಗಳೇನು..?

  • ಕರ್ನಾಟಕ ಪೊಲೀಸ್ ಆ್ಯಪ್ ಅನ್ನು ಎಲ್ಲರು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು.
  • ಕರ್ನಾಟಕ ರಾಜ್ಯ ಪೊಲೀಸ್ ಆ್ಯಪ್ ಪ್ರಮುಖವಾಗಿ ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಯಲ್ಲಿ ಲಭ್ಯವಿದೆ.
  • ಪ್ರಸ್ತುತ ನಿವು ಇರುವ ಸ್ಥಳದ ಸಮೀಪದಲ್ಲಿರುವ ಹಾಗೂ ಆ ಸ್ಥಳದ ಸರಹದ್ದಿಗೆ ಒಳಪಡುವ ಪೊಲೀಸ್ ಠಾಣೆಯ ಹೆಸರು, ಪ್ರಸ್ತುತ ಸ್ಥಳದಿಂದ ಪೊಲೀಸ್ ಠಾಣೆಗೆ ಇರುವ ದೂರ, ಠಾಣೆಯ ದೂರವಾಣಿ ಸಂಖ್ಯೆ ಹಾಗೂ ಸದರಿ ಪೊಲೀಸ್ ಠಾಣೆಗೆ ತಲುಪುವ ಮಾರ್ಗದ ಮಾಹಿತಿಯನ್ನು ಆ್ಯಪ್ ಮೂಲಕ ಪಡೆದುಕೊಳ್ಳಬಹುದು.
  • ಯಾವುದಾದರು ಘಟನೆಗೆ ಸಂಬಂಧಿಸಿದಂತೆ, ಮಾಹಿತಿಯನ್ನು ಕೆ.ಎಸ್.ಪಿ ಆ್ಯಪ್ ಮೂಲಕ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಗೆ ಕಳುಹಿಸಬಹುದಾಗಿದೆ. ಆ್ಯಪ್ ರಿಜಿಸ್ಟರ್ ಮಾಡಿಕೊಂಡ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮೂಲಕ ಸ್ವೀಕೃತಿಯನ್ನು ಸಹ ಪಡೆದುಕೊಳ್ಳಬಹುದಾಗಿರುತ್ತದೆ.
  • ಪೊಲೀಸ್ ಕಂಟ್ರೋಲ್ ರೂಂನಿಂದ ತುರ್ತು ಸಂದರ್ಭಗಳಲ್ಲಿ ಆ್ಯಪ್ ಅಳವಡಿಸಿಕೊಂಡಿರುವ ಎಲ್ಲಾ ಬಳಕೆದಾರರಿಗೆ ಅವಶ್ಯಕವಾದ ಮಾಹಿತಿಯನ್ನು ರವಾನಿಸಬಹುದಾಗಿರುತ್ತದೆ.
  • ತುರ್ತು ಸಂದರ್ಭಗಳಲ್ಲಿ SOS ಬಟನ್ ಅನ್ನು ಒತ್ತುವುದರಿಂದ ಈಗಾಗಲೇ ನೀವು ನಮೂದಿಸಿರುವ ೫ ಜನ ವಿಶ್ವಾಸಾರ್ಹ ವ್ಯಕ್ತಿಗಳ ಮೊಬೈಲ್ ಸಂಖ್ಯೆಗೆ ನೀವು ಇರುವ ಸ್ಥಳದ ಮಾಹಿತಿಯನ್ನು ಒಳಗೊಂಡಂತೆ ತುರ್ತು ಎಸ್.ಎಂ.ಎಸ್ ಸಂದೇಶವನ್ನು ರವಾನಿಸಬಹುದಾಗಿರುತ್ತದೆ.
  • ಕಾಣೆಯಾದ ವ್ಯಕ್ತಿಗಳ ಮಾಹಿತಿ, ಎಫ್.ಐ.ಆರ್ ಶೋಧ ಹಾಗೂ ಕಳುವಾದ ವಾಹನಗಳ ಶೋಧ ನಡೆಸಬುದಾಗಿರುತ್ತದೆ.
  • ತುರ್ತು ಸಂಪರ್ಕಗಳಾದ ಪೊಲೀಸ್, ಅಗ್ನಿಶಾಮಕ ದಳ, ಆಂಬುಲೆನ್ಸ್, ಮಕ್ಕಳ ಸಹಾಯವಾಣಿ, ಮಹಿಳಾ ಸಹಾಯವಾಣಿ ಹಾಗೂ ಇನ್ನಿತರೆ ಸಹಾವಾಣಿಗಳಿಗೆ ಆ್ಯಪ್ ಮುಲಕ ಕರೆ ಮಾಡಬಹುದು.

new application ‘Karnataka State Police App’ released. Karnataka State Police launched New App to make cops more accessible to citizens. app was launched by Chief Minister Kumaraswamy.

You may also like