Home » SBI, LPG ಗ್ರಾಹಕರು ಈ ಕಾರ್ಯಗಳನ್ನು ನ.30 ರೊಳಗೆ ಕಡ್ಡಾಯವಾಗಿ ಮುಗಿಸಲೇಬೇಕು?

SBI, LPG ಗ್ರಾಹಕರು ಈ ಕಾರ್ಯಗಳನ್ನು ನ.30 ರೊಳಗೆ ಕಡ್ಡಾಯವಾಗಿ ಮುಗಿಸಲೇಬೇಕು?

by manager manager

SBI LPG customers should update their kyc and mobile number before november 30

ಬ್ಯಾಂಕ್ ಕ್ಷೇತ್ರ, ಟೆಲಿಕಾಂ, ಏವಿಯೇಷನ್ ಹಾಗೂ ಇತರೆ ಹಲವು ಕ್ಷೇತ್ರಗಳಲ್ಲಿ ಡಿಸೆಂಬರ್ 1 ನೇ ದಿನಾಂಕದಿಂದ ಹಲವು ಆಡಳಿತಾತ್ಮಕ ಮತ್ತು ಸೇವೆಗಳ ನಿಯಮಗಳು ಬದಲಾವಣೆ ಆಗಲಿವೆಯಂತೆ. ಆದ್ದರಿಂದ SBI ನೆಟ್‌ ಬ್ಯಾಂಕಿಂಗ್ ಬಳಕೆದಾರರು, LPG ಬಳಕೆದಾರರು ಕೆಲವು ಬಹುಮುಖ್ಯ ಮಾಹಿತಿಯನ್ನು ಅಪ್‌ಡೇಟ್ ಮಾಡಬೇಕಾಗಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.

SBI ನೆಟ್‌ ಬ್ಯಾಂಕಿಂಗ್

SBI ಬ್ಯಾಂಕ್ ಖಾತೆದಾರರು ನೆಟ್‌ ಬ್ಯಾಂಕಿಂಗ್ ಬಳಸುತ್ತಿದ್ದಲ್ಲಿ ಡಿಸೆಂಬರ್ 1, 2018 ರ ಒಳಗಾಗಿ ಬ್ಯಾಂಕ್ ಖಾತೆಗೆ ತಮ್ಮ ಮೊಬೈಲ್ ನಂಬರ್ ಅನ್ನು ನೋಂದಣಿ ಮಾಡಬೇಕು. ಒಂದು ವೇಳೆ ನಂಬರ್ ಅಪ್‌ಡೇಟ್ ಮಾಡದಿದ್ದಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಈ ಮಾಹಿತಿಯನ್ನು ಎಸ್‌ಬಿಐ ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಿದೆ. ಗ್ರಾಹಕರು ತಮ್ಮ ಹತ್ತಿರದ ಎಸ್‌ಬಿಐ ಬ್ರ್ಯಾಂಚ್ ಗೆ ತೆರಳಿಯೂ ಮೊಬೈಲ್ ನಂಬರ್ ಅನ್ನು ನೋಂದಣಿ ಮಾಡಿಸಿ ಎಂದು ತಿಳಿಸಿದೆ.

LPG ಗ್ರಾಹಕರಿಗೂ ಸೂಚನೆ

ಮೂಲಗಳ ಪ್ರಕಾರ ಡಿಸೆಂಬರ್ 1 ರಿಂದ ಸುಮಾರು 1 ಕೋಟಿ LPG ಗ್ಯಾಸ್ ಕನೆಕ್ಷನ್ ರದ್ದಾಗಲಿದೆ ಎಂಬ ಮಾಹಿತಿ ತಿಳಿದಿದೆ. KYC ಮಾಹಿತಿ ಅಪ್‌ಡೇಟ್ ಮಾಡದ ಗ್ರಾಹಕರ LPG ಕನೆಕ್ಷನ್‌ಗಳು ಇವು ಎನ್ನಲಾಗಿದೆ. ಆದ್ದರಿಂದ ನವೆಂಬರ್ 30 ರ ಒಳಗೆ LPG ಸೌಲಭ್ಯ ಬಯಸುವವರು ಭಾರತ್ ಗ್ಯಾಸ್, HP ಗ್ಯಾಸ್, ಇಂಡೇನ್ ಗ್ಯಾಸ್ ಕಂಪನಿಗಳೊಂದಿಗೆ ತಮ್ಮ ಕೆವೈಸಿ ಮಾಹಿತಿ ಅಪ್‌ಡೇಟ್ ಮಾಡಲು ಅವಕಾಶ ನೀಡಲಾಗಿದೆ.

ಪಿಂಚಣಿದಾರರಿಗೂ ಸೂಚನೆ

SBI ಪಿಂಚಣಿ ದಾರರಿಗೆ ಡಿಸೆಂಬರ್ 1 ರಿಂದ ಪ್ರಕ್ರಿಯೆ ಶುಲ್ಕ ವಿಧಿಶಲಾಗುತ್ತದೆಯಂತೆ. ಹಾಗೂ ನಿವೃತ್ತ ವೇತನದಾರರು ನವೆಂಬರ್ 30 ರೊಳಗೆ ಲೈಫ್ ಸರ್ಟಿಫಿಕೇಟ್ ನೀಡದಿದ್ದರೇ ಅವರಿಗೂ ಪಿಂಚಣಿ ಸೌಲಭ್ಯ ಸಿಗುವುದಿಲ್ಲವಂತೆ. ಅಲ್ಲದೇ SBI ವ್ಯಾಲೆಟ್ ಮತ್ತು ಬಡ್ಡಿ ಮುಂದಿನ ತಿಂಗಳಿನಿಂದ ಕೆಲಸ ಸ್ಥಗಿತಗೊಳಿಸಲಿದೆಯಂತೆ.

SBI, LPG customers should update their kyc and mobile number before november 30. Read more here

You may also like