Home » ನಿಮ್ಮ ಆಧಾರ್ ಮಾಹಿತಿಯನ್ನು ಯಾರು? ಎಲ್ಲಿ? ಬಳಕೆ ಮಾಡಿದ್ದಾರೆ ಚೆಕ್‌ ಮಾಡುವುದು ಹೇಗೆ?

ನಿಮ್ಮ ಆಧಾರ್ ಮಾಹಿತಿಯನ್ನು ಯಾರು? ಎಲ್ಲಿ? ಬಳಕೆ ಮಾಡಿದ್ದಾರೆ ಚೆಕ್‌ ಮಾಡುವುದು ಹೇಗೆ?

by manager manager

ನಿಮಗೆಲ್ಲಾ ತಿಳಿದಿರುವಂತೆ ಆಧಾರ್ ಕಾರ್ಡ್‌(Aadhaar Card) ಅನ್ನು ಪಾನ್, ಇಪಿಎಫ್, ಬ್ಯಾಂಕ್ ಹಾಗೂ ಮೊಬೈಲ್ ನಂಬರ್ ಗಳ ಜೊತೆ ಲಿಂಕ್ ಮಾಡಲಾಗಿದೆ. ಇದು ಈ ವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ಕಡ್ಡಾಯ ಎಂಬಂತೆ ಬಳಸಲಾಗಿದೆ.

ಆಧಾರ್ ಕಾರ್ಡ್‌(Aadhaar Card) ನಂಬರ್ ಮಾತ್ರವಲ್ಲದೇ, ಆಧಾರ್ ಕಾರ್ಡ್‌ ನ ನಕಲಿ ಪ್ರತಿಯನ್ನು ಇನ್ನು ಹಲವು ಕಡೆಗಳಲ್ಲಿ ದೃಢೀಕರಣವಾಗಿ ನೀಡಿರುತ್ತೀರಿ. ಆದರೆ ಕೆಲವೊಮ್ಮೆ ಆಧಾರ್ ಮಾಹಿತಿಯನ್ನು ನಿಮಗೆ ಗೊತ್ತಿಲ್ಲದೇ ಹಲವರು ದುರ್ಬ ಳಕೆ ಮಾಡುವ ಸಾಧ್ಯತೆಯು ಇರುತ್ತದೆ. ಆದ್ದರಿಂದ ಇಂದಿನ ಲೇಖನದಲ್ಲಿ ಯಾರು ನಿಮ್ಮ ಆಧಾರ್ ಮಾಹಿತಿಯನ್ನು ಯಾವಾಗ ಬಳಸಿಕೊಂಡಿದ್ದಾರೆ ಎಂಬುದನ್ನು ಒಮ್ಮೆ ಚೆಕ್ ಮಾಡಿ ತಿಳಿದುಕೊಳ್ಳುವುದು ಉತ್ತಮ. ಅದು ಹೇಗೆ ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.

1 https://uidai.gov.in/ ಈ ವೆಬ್‌ ವಿಳಾಸ ಬಳಸಿ ಓಪನ್ ಆಗುವ ಪೇಜ್‌ ನಲ್ಲಿ ನಾವು ಈ ಕೆಳಗಿನ ಫೋಟೋದಲ್ಲಿ ರೆಡ್‌ ಸರ್ಕಲ್ ನಲ್ಲಿ ಗುರುತಿಸಲಾದ “Aadhaar Authentication History” ಆಯ್ಕೆ ಮೇಲೆ ಕ್ಲಿಕ್ ಮಾಡಿ.

how to check when and where who has used your Aadhaar information 2

2 ನಂತರ ಓಪನ್ ಆದ ಪೇಜ್‌ ನಲ್ಲಿ ನಿಮ್ಮ ಆಧಾರ್ ನಂಬರ್ ಮತ್ತು ಅಲ್ಲಿಯೇ ನೀಡಿ ಕೇಳಲಾದ ಸೆಕ್ಯೂರಿಟಿ ಕೋಡ್ ನೀಡಿ, ‘Generate OTP’ ಬಟನ್ ಮೇಲೆ ಕ್ಲಿಕ್ ಮಾಡಿ

how to check when and where who has used your Aadhaar information

3 ಈಗ ನಿಮ್ಮ ಆಧಾರ್()aadhaar ನೊಂದಿಗೆ ಲಿಂಕ್ ಆದ ಮೊಬೈಲ್ ನಂಬರ್ ಗೆ OTP ಮೆಸೇಜ್ ಬರುತ್ತದೆ.

4 ನಂತರ ಸ್ಕ್ರೀನ್ ನಲ್ಲಿ ಯಾವ ದೃಡೀಕರಣಗಳಿಗಾಗಿ ನಿಮ್ಮ ಆಧಾರ್ ಬಳಸಲಾಗಿದೆ ಎಂಬ ಮಾಹಿತಿಯನ್ನು ತಿಳಿಯಲು “demographic, biometric, OTP, All’ ಆಯ್ಕೆಗಳನ್ನು ನೀಡಲಾಗುತ್ತದೆ. ಅವುಗಳಲ್ಲಿ ನಿಮಗೆ ಇಷ್ಟದ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು.

5 ನಂತರ ಯಾವ ದಿನಾಂಕದಿಂದ, ಎಲ್ಲಿಯವರೆಗೆ ತಿಳಿಯಲು ಬಯಸುವಿರಿ ಎಂಬುದನ್ನು ತಿಳಿಯಲು ದಿನಾಂಕ ಆಯ್ಕೆ ಮಾಡಬೇಕು. ಆದರೆ ಇದು 6 ತಿಂಗಳ ಒಳಗೆ ಇರಬೇಕು.

6 ಎಷ್ಟು ದಾಖಲೆಗಳನ್ನು ನೋಡಬೇಕು ಸಹ ಮಾಹಿತಿ ನೀಡಬೇಕಾಗಿದ್ದು, ಗರಿಷ್ಠ 50 ಸಂಖ್ಯೆವರೆಗೆ ಆಯ್ಕೆ ಮಾಡಬಹುದಾಗಿದೆ.

7 ನಂತರ ಮೊಬೈಲ್‌ ನಲ್ಲಿ ಸ್ವೀಕರಿಸಲಾದ OTP ನಂಬರ್ ಅನ್ನು ನೀಡಿ ‘Submit’ ಮೇಲೆ ಕ್ಲಿಕ್ ಮಾಡಿ.

8 ಈ ಹಂತದಲ್ಲಿ ಓಪನ್ ಆದ ವೆಬ್‌ ಪೇಜ್‌ ನಲ್ಲಿ ನಿಮ್ಮ ಆಧಾರ್ ಮಾಹಿತಿ ದೃಢೀಕರಣಕ್ಕಾಗಿ ಕೇಳಲಾದ ಇತಿಹಾಸವನ್ನು ದಿನಾಂಕ, ಸಮಯ ಮತ್ತು ಯಾವ ವಿಧದ ದೃಢೀಕರಣಕ್ಕಾಗಿ ಎಂಬುದನ್ನು ತಿಳಿಯಬಹುದು. ಆದರೆ ಯಾವ ಸಂಸ್ಥೆ(ಯಾರು) ದೃಢೀಕರಣಕ್ಕಾಗಿ ಕೇಳಿದ್ದಾರೆ ಎಂಬುದು ತಿಳಿದಿಲ್ಲ.

9 ನಿಮಗೆ ತಿಳಿದ ಮಾಹಿತಿಯಿಂದ ಇಮೇಲ್ ನ ಇಂಬಾಕ್ಸ್ ಸಹಾಯದೊಂದಿಗೆ ಯಾರು ಆಧಾರ್ ದೃಢೀಕರಣಕ್ಕಾಗಿ ಕೇಳಿದ್ದಾರೆ ಎಂಬುದು ತಿಳಿಯುತ್ತದೆ. ಅಲ್ಲದೇ ಪ್ರತಿ ದೃಢೀಕರಣಕ್ಕೆ ಸೆಂಟ್ರಲ್ ಐಡೆಂಟಿಟೀಸ್ ಡಾಟಾ ರೆಪಾಸಿಟರಿ(CIDR) ಅನುಮತಿ ನೀಡಿರುವುದು ಇಮೇಲ್ ಬರುತ್ತದೆ. ಅಲ್ಲಿ ಯಾವ ರೀತಿಯ ದೃಢೀಕರಣಕ್ಕಾಗಿ ಆಧಾರ್ ಮಾಹಿತಿ ಬಳಸಲಾಗಿದೆ ಎಂಬುದು ತಿಳಿಯುತ್ತದೆ.

10 ನೀವೇನಾದರೂ ಯಾವುದೇ ಕಾರಣಕ್ಕೆ ಆಧಾರ್ ಬಳಸದೇ ದೃಢೀಕರಣದ ನೋಟಿಫಿಕೇಶನ್ ಬಗ್ಗೆ ಇಮೇಲ್ ಮೆಸೇಜ್ ಬಂದಲ್ಲಿ ಇಮೇಲ್‌ ನಲ್ಲಿ ನಮೂದಿಸಲಾದ ಏಜೆನ್ಸಿಯನ್ನು ಪ್ರಶ್ನೆ ಮಾಡಬಹುದು. ಅಥವಾ ಇತರೆ ತನಿಖೆ ಮಾಡಬಹುದು.

How to check when and where who has used your Aadhaar Card information know in kannada.

You may also like