Home » ದಿನಕ್ಕೊಂದು ಹಸಿ ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?

ದಿನಕ್ಕೊಂದು ಹಸಿ ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?

by manager manager

ಕಣ್ಣೀರು ತರಿಸುವ ಈರುಳ್ಳಿಯಲ್ಲಿ ಹಲವು ಆರೋಗ್ಯಕಾರಿ ಅಂಶಗಳಿವೆ. ನಮ್ಮ ದೇಹದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಾಕಾರಿಯಾಗಿದೆ. ಆರೋಗ್ಯ ವೃದ್ಧಿಗೆ ಸಿದ್ಧೌಷಧವಾಗಿರುವ ಹಸಿ ಈರುಳ್ಳಿಯನ್ನು ಪ್ರತಿ ದಿನ ಒಂದು ಸೇವನೆ ಮಾಡಿದರೆ ಆರೋಗ್ಯಕಾರಿ ಲಾಭಗಳನ್ನು ಪಡೆಯಬಹುದು.

ಈರುಳ್ಳಿಯು ಪೋಷಕಾಂಶಗಳ ಆಗರವಾಗಿದ್ದು, ಕಡಿಮೆ ಪ್ರಮಾಣದಲ್ಲಿ ಕ್ಯಾಲರಿಯನ್ನು ಹೊಂದಿದೆ. ಪ್ರತಿನಿತ್ಯ ಈರುಳ್ಳಿ ಸೇವಿಸುವುದರಿಂದ ಹೃದಯರೋಗ ಬರುವ ಸಂಭವವನ್ನು ಕಡಿಮೆ ಮಾಡಬಹುದು. ಸಕ್ಕರೆ ಕಾಯಿಲೆ, ಬಿ.ಪಿ.ಯನ್ನು ನಿಯಂತ್ರಿಸಬಹುದು. ರೋಗ-ನಿರೋಧಕ ಶಕ್ತಿಯನ್ನು ಕಾಯ್ದಿರಿಸಿಕೊಳ್ಳಬಹುದು. ಅಲ್ಲದೆ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗದಂತೆ ಈರುಳ್ಳಿ ತಡೆಯುತ್ತದೆ.

ಈರುಳ್ಳಿ ಕಡಿಮೆ ಪ್ರಮಾಣದಲ್ಲಿ ಕ್ಯಾಲರಿಯನ್ನು ಹೊಂದಿದೆ. ಸೋಡಿಯಂ ಕಡಿಮೆ ಇದ್ದು, ಹೆಚ್ಚಿನ ನಾರಿನಾಂಶವನ್ನು ಹೊಂದಿದೆ. ಕೊಲೆಸ್ಟ್ರಾಲ್ ಇಲ್ಲ. ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ಸ್​ಗಳನ್ನು ಒಳಗೊಂಡಿದೆ. ಬಿ ಕಾಂಪ್ಲೆಕ್ಸ್, ವಿಟಮಿನ್‌ಗಳಾದ ಥಯಮಿನ್, ರಿಬೋಫ್ಲೇವಿನ್ ಮತ್ತು ಮೆಗ್ನೀಷಿಯಂ, ಫಾಸ್ಫರಸ್, ತಾಮ್ರದ ಅಂಶ ಇದರಲ್ಲಿದೆ. ಸುಮಾರು ಶೇ 10ರಷ್ಟು ನಾರಿನಂಶ ಹೊಂದಿದೆ. 100 ಗ್ರಾಂ ಸೇವನೆಯಿಂದ ಕೇವಲ ಅಲ್ಪ ಪ್ರಮಾಣದ ಕ್ಯಾಲೊರಿ ಲಭ್ಯವಿದೆ.

Health Benefits of Eating Raw Onions Everyday

ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳು:

  • ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಈರುಳ್ಳಿ ಒಳ್ಳೆಯ ಔಷಧಿ. ರಾತ್ರಿ ಊಟಕ್ಕೂ ಮುನ್ನ ಈರುಳ್ಳಿ ಸೂಪ್ ಸೇವಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
  • ಹಸಿ ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಎನ್ನುವ ರಾಸಾಯನಿಕ ಇರುತ್ತದೆ. ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಹೊರಡುವಷ್ಟು ಶಕ್ತಿಶಾಲಿ.
  • ದೇಹದ ಆರೋಗ್ಯಕ್ಕೆ ಶಕ್ತಿ ಕೊಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.
  • ಈರುಳ್ಳಿ ನಮ್ಮ ದೇಹದ ಆರೋಗ್ಯಕ್ಕೆ ಮಾತ್ರವನ್ನ ನಮ್ಮ ತ್ವಚೆಯ ಸೌಂದರ್ಯ ಹಾಗೂ ಕೂದಲ ಸೌಂದರ್ಯಕ್ಕೂ ಬಹಳ ಸಹಾಯಕ. ಕೂದಲಿನ ಆರೈಕೆಗೆ ಉತ್ತಮ ಔಷಧ.
  • ಈರುಳ್ಳಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಹೃದಯರೋಗ ಬರುವ ಸಂಭವವನ್ನು ಕಡಿಮೆ ಮಾಡಬಹುದು.
  • ಈರುಳ್ಳಿಯು ಕ್ವೆರ್ಸಿಟಿನ್ ಎನ್ನುವ ರಾಸಾಯನಿಕ ಅಂಶ ಹಾಗೂ ಸಲ್ಪರ್’ನ್ನು ಒಳಗೊಂಡಿದೆ. ಯಾವುದಾದರೂ ಕೀಟಗಳು ಕಡಿದಾಗ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಕಡಿದ ಜಾಗದಲ್ಲಿ ಜೋರಾಗಿ ಉಜ್ಜಬೇಕು. ಇದರಿಂದ ತುರಿಕೆ ಕಡಿಮೆಯಾಗುತ್ತದೆ.
  • ಈರುಳ್ಳಿ ರಸವನ್ನು ಸ್ವಲ್ಪ ಬಿಸಿ ಮಾಡಿ ಕಿವಿಯ ಒಳಗಡೆ ಹಾಕಿದರೆ ಕಿವಿನೋವು ಅಥವಾ ಕಿವಿ ಸೋರುವಿಕೆ ಕಡಿಮೆಯಾಗುತ್ತದೆ.

Health Benefits of Eating Raw Onions Everyday

  • ತಲೆಯಲ್ಲಿ ಯಾವುದಾದರೊಂದು ಭಾಗದಲ್ಲಿ ಕೂದಲುಗಳು ಜಾಸ್ತಿ ಉದುರುತ್ತಿದೆ ಎಂದಾಗ ಆ ಭಾಗದಲ್ಲಿ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಚೆನ್ನಾಗಿ ಉಜ್ಜಬೇಕು. ಆಗ ಕೂದಲ ರಂಧ್ರಗಳು ತೆರೆದುಕೊಂಡು ಪುನಃ ಕೂದಲು ನಿಧಾನವಾಗಿ ಬೆಳೆಯಲು ಸಾಧ್ಯವಾಗುತ್ತದೆ.
  • ಈರುಳ್ಳಿ ಪೀಸ್ ಹಣೆಯ ಮೇಲಿಟ್ಟರೆ ಜ್ವರ ಕಡಿಮೆಯಾಗುತ್ತದೆ. ಈರುಳ್ಳಿ ರಸಕ್ಕೆ ಸ್ವಲ್ಪ ಬೆಲ್ಲ ಅಥವಾ ಜೇನುತುಪ್ಪ ಬೆರೆಸಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ. ಇದಲ್ಲದೆ, ಈರುಳ್ಳಿಯನ್ನು ಹಾಗೆಯೇ ತಿನ್ನುವುರಿಂದ ಗಂಟಲು ನೋವು ಕಡಿಮೆಯಾಗುತ್ತದೆ.
  • ಈರುಳ್ಳಿಯು ನೈಸರ್ಗಿಕವಾಗಿ ರಕ್ತವನ್ನು ತೆಳು ಮಾಡುವ ಗುಣ ಹೊಂದಿದೆ. ಆದ್ದರಿಂದ ರಕ್ತಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ರಕ್ತವು ಕ್ಲಾಟ್ ಆಗದಂತೆ ತಡೆಯುತ್ತದೆ.
  • ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.
  • ಈರುಳ್ಳಿ ದೇಹದ ಆರೋಗ್ಯವಷ್ಟೇ ಅಲ್ಲದೆ, ಸೌಂದರ್ಯ ವೃದ್ಧಿಗೂ ಸಹಕಾರಿಯಾಗಿದ್ದು,
  • ದೇಹದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಕೆಲಸವನ್ನೂ ಈರುಳ್ಳಿ ಮಾಡುತ್ತದೆ.

Health Benefits of Eating Raw Onions Everyday

100 ಗ್ರಾಂ ಈರುಳ್ಳಿಯಲ್ಲಿರುವ ಅಂಶಗಳು:

  1. ಪ್ರೊಟೀನ್ 1.83 ಗ್ರಾಂ.
  2. ಕೊಬ್ಬು, ಕೊಲೆಸ್ಟ್ರಾಲ್ ಇಲ್ಲ ನಾರಿನಾಂಶ 2.6 ಗ್ರಾಂ.
  3. ಫೋಲಿಕ್ ಆ್ಯಸಿಡ್ 64 ಮೈಕ್ರೊ ಗ್ರಾಂ.
  4. ನಿಯಾಸಿನ್ 0.525 ಮಿ.ಗ್ರಾಂ.
  5. ವಿಟಮಿನ್ ಎ 997 ಐ.ಯು.
  6. ವಿಟಮಿನ್ ಸಿ 18.8 ಮಿ.ಗ್ರಾಂ.
  7. ವಿಟಮಿನ್ ಇ 0.55 ಮಿ.ಗ್ರಾಂ.
  8. ವಿಟಮಿನ್ ಕೆ 207 ಮೈಕ್ರೊ ಗ್ರಾಂ.
  9. ಸೋಡಿಯಂ 16 ಮಿ.ಗ್ರಾಂ.
  10. ಪೊಟಾಷಿಯಂ 276 ಮಿ.ಗ್ರಾಂ.
  11. ಕ್ಯಾಲ್ಸಿಯಂ 72 ಮಿ.ಗ್ರಾಂ.

Onions make you cry, but you will only laugh in the long run. Such wonderful benefits of onions are. Onion is the main ingredient in most of the widely used home remedies for many diseases. raw onions have higher levels of organic sulfur compounds that provide many benefits.

You may also like