Home » ಪೋಷಕಾಂಶಗಳ ಆಗರ ನುಗ್ಗೆಸೊಪ್ಪು

ಪೋಷಕಾಂಶಗಳ ಆಗರ ನುಗ್ಗೆಸೊಪ್ಪು

by manager manager

ನುಗ್ಗೆಸೊಪ್ಪು ಉತ್ತಮ ಔಷಧೀಯ ಗುಣಗಳ್ಳುಳ್ಳ ಆಹಾರ ಪದಾರ್ಥವಾಗಿದೆ. ಇದು ರುಚಿಕರವೂ, ಹೆಚ್ಚಿನ ನಾರು ಹೊಂದಿರುವ ಸೊಪ್ಪೂ ಆಗಿರುವ ಕಾರಣ ದಕ್ಷಿಣ ಭಾರತದಲ್ಲಿ ಸಾಂಬಾರ್ ಅಥವಾ ಪಲ್ಯದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ.

ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಮಂಡಿನೋವು, ಮುಟ್ಟಿನ ಸಮಸ್ಯೆ, ಲೈಂಗಿಕ ನಿರಾಸಕ್ತಿ, ಚರ್ಮರೋಗ, ಭೇದಿ, ಹೃದಯರೋಗ, ಕೀಲುನೋವು ಸೇರಿದಂತೆ ಅನೇಕ ರೋಗಗಲಿಗೆ ರಾಮಬಾಣವಾಗಿದೆ. ನುಗ್ಗೆಕಾಯಿಯಂತೆ ನುಗ್ಗೆ ಸೊಪ್ಪಿನಲ್ಲಿಯೂ ಹಲವಾರು ಆಂಟಿ ಆಕ್ಸಿಡೆಂಟ್ಗಳೂ ಮತ್ತು ಇತರ ಅಗತ್ಯ ಪೋಷಕಾಂಶಗಳೂ ಲಭ್ಯವಿದ್ದು ಮುಖ್ಯವಾಗಿ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುವಲ್ಲಿ ಹಾಗೂ ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುವಲ್ಲಿ ಸಹಾಕವಾಗುತ್ತದೆ.

health benefits of drumstick leaves

ನುಗ್ಗೆಸೊಪ್ಪಿನಿಂದ ಆರೋಗ್ಯಕ್ಕಾಗುವ ಲಾಭಗಳು:

 1. ನುಗ್ಗೆಸೊಪ್ಪಿನಲ್ಲಿ ಸಕ್ಕರೆ ಅಂಶ ಇಲ್ಲ. ಅಲ್ಲದೇ ರಕ್ತದೊತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಈಗಾಗಿ ಬಿ.ಪಿ ಇರುವವರು ನುಗ್ಗೆಸೊಪ್ಪು್ಪ ಸೇವಿಸುವುದು ಒಳ್ಳೆಯದು.
 2. ನೀರಿನಲ್ಲಿ ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂಗ ರಕ್ತಶುದ್ದಿಯಾಗಿ, ಆರೋಗ್ಯ ವೃದ್ದಿಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸುತ್ತದೆ.
 3. ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರ.
 4. ಬೇಯಿಸಿ ಬಸಿದ ನುಗ್ಗೆಸೊಪ್ಪಿನ ರಸಕ್ಕೆ ನಿಂಬೆ ರಸ ಹಿಂಡಿ ಸೇವಿಸಬೇಕು. ಒಂದು ವಾರ ಕಾಲ ಪ್ರತಿದಿನ ಬೆಳಿಗ್ಗೆ ಒಂದು ಬಟ್ಟಲು ರಸ ಸೇವಿಸುತ್ತಿದ್ದರೆ ತಲೆ ಸುತ್ತುವಿಕೆ ನಿವಾರಣೆಯಾಗುತ್ತದೆ.
 5. ಒಂದೇ ಕಡೆ ತಲೆ ನೋಯುತ್ತಿದ್ದರೆ, ನಾಲ್ಕೈದು ತೊಟ್ಟು ನುಗ್ಗೆ ಸೊಪ್ಪಿನ ರಸವನ್ನು ಎಡ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಬಲ ಕಿವಿಗೂ, ಬಲ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಎಡಕಿವಿಗೂ ಬಿಡುವುದರಿಂದ ಗುಣಮುಖ ಕಂಡುಬರುತ್ತದೆ. ಈ ಕ್ರಮವನ್ನು ದಿನಕ್ಕೆ ಒಂದುಸಾರಿಯಂತೆ ಮೂರು ದಿನಗಳವರೆಗೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
 6. ಎಕ್ಕ ಮತ್ತು ನುಗ್ಗೆಯ ಎಲೆಗಳನ್ನು ನುಣ್ಣಗೆ ಅರೆದು ಮೂಲವ್ಯಾಧಿಯಲ್ಲಿ ಕಾಣಿಸಿಕೊಳ್ಳುವ ಮೊಳಕೆಗಳಿಗೆ ಹಚ್ಚಿದರೆ ಅದು ನಾಶವಾಗುತ್ತದೆ.
 7. ಪೆಟ್ಟು ಬಿದ್ದು ಊದಿಕೊಂದಿರುವಾಗ ಹುರಿದ ನುಗ್ಗೆ ಸೊಪ್ಪನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಊದಿಕೊಂಡಿರುವ ಭಾಗಕ್ಕೆ ಬಿಸಿಬಿಸಿಯಾಗಿ ಶಾಖ ಕೊಟ್ಟರೆ, ಊತ ಮತ್ತು ನೋವು ಕಡಿಮೆಯಾಗುತ್ತದೆ.
 8. ನುಗ್ಗೆಸೊಪ್ಪಿನ ರಸದಲ್ಲಿ ಒಂದೆರಡು ಮೆಣಸುಕಾಳು ಅರೆದು ಕಪಾಲಗಲ ಮೇಲೆ ಹಚ್ಚಿದರೆ ತಲೆನೋವು ನಿವಾರಣೆಯಾಗುತ್ತದೆ.
 9. ನುಗ್ಗೆಸೊಪ್ಪಿನೊಂದಿಗೆ ಹೂವನ್ನು ಬಳಸಬಹುದು. ಹೂವನ್ನು ಹಾಲಿನಲ್ಲಿ ಚೆನ್ನಾಗಿ ಬೇಯಿಸಿ ಅದಕ್ಕಿ ಜೇನುತುಪ್ಪ ಸೇರಿಸಿ, ಸೇವಿಸುವುದರಿಂದ ಲೈಂಗಿಕ ಕ್ರಿಯಾಶಕ್ತಿ ಹೆಚ್ಚಾಗುತ್ತದೆ.
 10. ನುಗ್ಗೆಕಾಯಿ ಊಟ ಮಾಡುವುದರಿಂದ ಸಂಧಿವಾತ, ನಿರ್ವೀರ್ಯತೆ, ನರಗಳ ದೌರ್ಬಲ್ಯ ಮಲಬದ್ದತೆ ಇತ್ಯಾದಿ ರೋಗಗಳು ಗುಣವಾಗುತ್ತವೆ.
 11. ಜಂತು ಹುಳುಗಳಿಂದ ಉಂಟಾಗುವ ಹಾನಿಯನ್ನು ನಿವಾರಿಸಲು ನುಗ್ಗೆ ಕಾಯಿಯನ್ನು ಆಗಾಗ್ಗೆ ಊಟದಲ್ಲಿ ಉಪಯೋಗಿಸುವುದು ಲೇಸು.
 12. ನುಗ್ಗೆಸೊಪ್ಪನ್ನು ದಂಟಿನಿಂದ ಬಿಡಿಬಿಡಿಯಾಗಿ ಬಿಡಿಸಿ ನೇರವಾಗಿ ತಿಳಿಸಾರು, ಮಜ್ಜಿಗೆ ಹುಳಿ, ತಂಬುಳಿ, ಮೊದಲಾದ ರೂಪದಲ್ಲಿಯೂ ಸೇವಿಸಬಹುದು. ಈ ರೀತಿ ಮಾಡುವುದರಿಂದ ದೇಹ ಬೇಕಾದ ಉಷ್ಣಾಂಶ ಹಾಗೂ ಪೋಷಕಾಂಶಗಳನ್ನು ಸುಲಭವಾಗಿ ಪಡೆಯಬಹುದು.

health benefits of drumstick leaves

ನುಗ್ಗೆ ಸೊಪ್ಪಿನಲ್ಲಿರುವ ಪೋಷಕಾಂಶಗಳು

 • ನಿಂಬೆ, ಕಿತ್ತಲೆಗಳಿಗಿಂತ 7 ಪಟ್ಟು ಅಧಿಕವಾದ ಸಿ ಜೀವಸತ್ವವು ನುಗ್ಗೆಸೊಪ್ಪಿನಲ್ಲಿದೆ.
 • ಕ್ಯಾರೆಟ್​ಗಿಂತ 4 ಪಟ್ಟು ಅಧಿಕ ವಿಟಮಿನ್ ಎ ನುಗ್ಗೆ ಸೊಪ್ಪಿನಲ್ಲಿದೆ.
 • ಒಂದು ಚಮಚ ಒಣಗಿದ ನುಗ್ಗೆಸೊಪ್ಪಿನ ಪುಡಿಯು ನಮಗೆ ಒಂದು ದಿನಕ್ಕೆ ಸಾಕಾಗುವಷ್ಟು ವಿಟಮಿನ್ ಎ ನಿಡುತ್ತದೆ
 • ಹಾಲಿಗಿಂತ 4 ಪಟ್ಟು ಅಧಿಕ ಕ್ಯಾಲ್ಷಿಯಂನ್ನು ನುಗ್ಗೆಸೊಪ್ಪು ಹೊಂದಿದೆ.
 • ಪಾಲಕ್​ಗಿಂತ 6 ಪಟ್ಟು ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶವನ್ನು ಹೊಂದಿದೆ.
 • 3 ಪಟ್ಟು ಬಾಳೆಹಣ್ಣಿಗಿಂತ ಹೆಚ್ಚು ಪೊಟ್ಯಾಶಿಯಂ
 • 2 ಪಟ್ಟು ಮೊಸರಿಗಿಂತ ಅಧಿಕ ಪೋ›ಟೀನ್​ನ್ನು ಹೊಂದಿದೆ.
 • ಬಾದಾಮಿಗಿಂತ 3 ಪಟ್ಟು ಹೆಚ್ಚು ವಿಟಮಿನ್‌ ಇ
 • ಮೊಟ್ಟೆಯ ಬಿಳಿಯ ಭಾಗಕ್ಕಿಂತ 2 ಪಟ್ಟು ಹೆಚ್ಚು ಪ್ರೊಟೀನ್‌

health benefits of drumstick leaves

ಅತಿಯಾದರೆ ಆಪತ್ತು..!

ನುಗ್ಗೆಸೊಪ್ಪಿನಲ್ಲಿ ಅಧಿಕ ಔಷಧೀಯ ಗುಣವಿದೆ ಎಂದು ಅದನ್ನು ಮಿತಿಮೀರಿ ಸೇವಿಸದಂತೆ ವೈದ್ಯರು ಎಚ್ಚರಿಸುತ್ತಾರೆ. ಇದು ಅತಿಯಾದ ವಿರೇಚಕ ಗುಣ ಹೊಂದಿರುವ ಕಾರಣ, ಹೊಟ್ಟೆನೋವು, ಬೇಧಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

drumstick leaves(Moringa leaves) good for health. these leaves are loaded with nutritional contents as they are rich in vitamins, essential amino acids, minerals, energy, water and more. in this article kannadaadvisor gives health benefits of drumstick leaves.

You may also like