Home » ಸಾವಿರ ಮಾತ್ರೆಗಳಿಗೆ ಸಮ ಡ್ರ್ಯಾಗನ್ ಫ್ರೂಟ್: ಈ ಹಣ್ಣು ತಿನ್ನುವುದರಿಂದ ಇಷ್ಟೆಲ್ಲ ಲಾಭವಿದೆ..!

ಸಾವಿರ ಮಾತ್ರೆಗಳಿಗೆ ಸಮ ಡ್ರ್ಯಾಗನ್ ಫ್ರೂಟ್: ಈ ಹಣ್ಣು ತಿನ್ನುವುದರಿಂದ ಇಷ್ಟೆಲ್ಲ ಲಾಭವಿದೆ..!

by manager manager

ಹಾಂಗ್’ಕಾಂಗ್, ಸಿಂಗಾಪುರ್, ಮಲೇಶಿಯಾ, ರಷ್ಯಾ, ಜಪಾನ್‍’ಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಣ್ಣಿನ ಹೆಸರು ‘ಡ್ರ್ಯಾಗನ್ ಫ್ರೂಟ್’ ( Dragon Fruit). ಕ್ಯಾಕ್ಟಸ್ ನ ಒಂದು ವರ್ಗಕ್ಕೆ ಸೇರಿದ ಈ ಹಣ್ಣು ದಕ್ಷಿಣ ಅಮೆರಿಕಾ ಮೂಲದ್ದಾಗಿದೆ. ವಿಶೇಷವಾಗಿ ಏಷ್ಯನ್ ಮೂಲದ ಜನರಿಗೆ ಈ ಹಣ್ಣು ಎಂದರೆ ಪ್ರಾಣ. ಇದು ಹಲವಾರು ಪೌಷ್ಟಿಕಾಂಶದ ಪದಾರ್ಥಗಳೊಂದಿಗೆ ನೀರು ಮತ್ತು ಇತರ ಪ್ರಮುಖ ಖನಿಜಗಳನ್ನು ಒಳಗೊಂಡಿದೆ.

ಈ ಹಣ್ಣನ್ನು ಕನ್ನಡದಲ್ಲಿ ಪಿಟಾಹಾಯ ಹಣ್ಣು ಎಂದು ಕರೆಲಾಗುತ್ತದೆ. ಪಿಂಕ್ ಬಣ್ಣದಲ್ಲಿರುವ ಈ ಹಣ್ಣು ನೋಡಲು ಡ್ರಾಗನ್ ಆಕೃತಿ ಹೋಲುವುದಕ್ಕೆ ಡ್ರ್ಯಾಗನ್ ಫ್ರೂಟ್ ಎಂದು ಕರೆಯುತ್ತಾರೆ. ಈ ಹಣ್ಣು ಬಿಳಿ ಮತ್ತು ತಿಳಿಗೆಂಪು ಬಣ್ಣದಲ್ಲಿರಲಿದ್ದು, ತಿರುಳಿನಲ್ಲಿ ಚಿಕ್ಕ ಕಪ್ಪು ಬೀಜಗಳಿರುತ್ತವೆ. ರುಚಿಯಲ್ಲಿ ಕಿವಿ, ಪೈನಾಪಲ್ ಅನ್ನು ಹೋಲುವ ಈ ಬಹುಪಯೋಗಿ ಹಣ್ಣಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಆನ್ಲೈನ್ ಮಾರುಕಟ್ಟೆಗಳಲ್ಲಿ ಒಂದು ಕೆಜಿ ಡ್ರ್ಯಾಗನ್ ಫ್ರೂಟ್ ಬೆಲೆ ಬರೋಬ್ಬರಿ 100ರಿಂದ 150 ರೂ.ಗಳವರೆಗೂ ಇದೆ.

15 Health Benefits of Dragon Fruit

ವಿಶೇಷತೆ ಏನು..?

ಕಡಿಮೆ ಕ್ಯಾಲೋರಿ ಹೊಂದಿರುವ ಈ ಹಣ್ಣು ಅನೇಕ ರೋಗಗಳಿಗೆ ರಾಮಬಾಣ. ಇದರಲ್ಲಿ ಹೆಚ್ಚಿನ ನಾರಿನಾಂಶ, ಪ್ರೋಟೀನ್ಸ್, ಲಿಯೋ ಕ್ಯಾಪಸ್, ವಿಟಮಿನ್-ಸಿ, ಕಾರ್ಟಿನ್ ಸೇರಿದಂತೆ, ಖನಿಜಾಂಶಗಳಾದ ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣಾಂಶ, ಪೋಟೋ ನ್ಯೂಟ್ರಿಯೆಂಟ್ಸ್, ಓಮೇಗಾ-3 ಮತ್ತು ಒಮೇಗಾ-6 ಫೇತ್ ಆಸಿಡ್ಸ್ ಅಂಶ ಇದೆ. ಹೀಗಾಗಿ ಇದರ ಒಂದು ಹಣ್ಣು ಸಾವಿರ ಮಾತ್ರೆಗಳಿಗೆ ಸಮ ಎಂದು ನಂಬಲಾಗಿದೆ.

ಡ್ರ್ಯಾಗನ್ ಫ್ರೂಟ್ ತಿನ್ನುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲ ಲಾಭವಿದೆ

  1. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.
  2. ರಕ್ತ ಹೀನತೆ ದೂರ ಮಾಡುತ್ತದೆ.
  3. ಜೀರ್ಣ ಶಕ್ತಿ ಹೆಚ್ಚಿಸುತ್ತದೆ.
  4. ಕ್ಯಾನ್ಸರ್’ಗೆ ರಾಮಬಾಣ.
  5. ಮಧುಮೇಹ ನಿಯಂತ್ರಣ, ಗರ್ಭಿಣಿಯರಿಗೆ ಹೆಚ್ಚಿನ ಪೌಷ್ಟಿಕಾಂಶ ಒದಗಿಸುತ್ತದೆ.
  6. ವಿಟಮಿನ್ ಸಿ ಹಾಗೂ ಎ ಅಂಶಗಳು ಹೆಚ್ಚಿದ್ದು, ಮೆದುಳು ಚುರುಕುಗೊಳಿಸುತ್ತದೆ.
  7. ಉಸಿರಾಟದ ತೊಂದರೆ ನಿವಾರಣೆ, ಮೂಳೆ, ಹಲ್ಲುಗಳನ್ನು ಬಲಿಷ್ಠಗೊಳಿಸುತ್ತದೆ.
  8. ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ.
  9. ಚರ್ಮದ ಕಾಂತಿಯನ್ನು ಹೆಚ್ಚಿಸುವುದಲ್ಲದೇ, ಬಿಳಿಯ ರಕ್ತಕಣಗಳನ್ನು ಹೆಚ್ಚಿಸುವ ಈ ಹಣ್ಣು, ಡೆಂಘೀ ಜ್ವರಕ್ಕೆ ಸಿದ್ಧ ಔಷಧ ಎಂದು ನಂಬಲಾಗಿದೆ.
  10. ಡ್ರಾಗನ್ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ರ್ಟಾಲ್ ತೊಲಗುತ್ತದೆ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುತ್ತದೆ, ಅಧಿಕ ತೂಕ ಕಡಿಮೆ ಯಾಗುತ್ತದೆ.
  11. ಮುಖ್ಯವಾಗಿ ಈ ಹಣ್ಣಿನಲ್ಲಿ ಒಮೇಗಾ 3, ಪ್ಯಾಟಿ ಆಸಿಡ್ ಗಳು ಹೃದಯದ ಆರೋಗ್ಯಕ್ಕೆ ಸಹಕರಿಸುತ್ತದೆ.
  12. ಇನ್ನು ಡ್ರಾಗನ್ ಹಣ್ಣಿನಲ್ಲಿ ಫೈಬರ್ ಹೇರಳವಾಗಿರುತ್ತದೆ. ಇದು ಗ್ಯಾಸ್, ಅಸಿಡಿಟಿ, ಮಲಬದ್ದತೆಯನ್ನು ಕಡಿಮೆ ಮಾಡುತ್ತದೆ.
  13. ರಕ್ತ ಸಂಚಲನ ಉತ್ತಮ ಗೊಳ್ಳುತ್ತದೆ, ರಕ್ತದೊತ್ತಡ ನಿಯಂತ್ರಣದಲ್ಲಿರಿತ್ತದೆ.
  14. ಡ್ರಾಗನ್ ಹಣ್ಣಿನಲ್ಲಿ ವಿಟಮಿನ್-ಸಿ ಹೆಚ್ಚಾಗಿರುತ್ತದೆ.ಇದು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.
  15. ಶ್ವಾಸಕೋಶ ಸಮಸ್ಯೆಗಳಿಂದ ಉಪಶಮನ ಕೂಡ ಪಡೆಯಬಹುದು.

15 Health Benefits of Dragon Fruit

ರೈತರಿಗೂ ಲಾಭದಾಯಕ..!

ಕಡಿಮೆ ಮಳೆ, ಸಮಶೀತೋಷ್ಣ ಹವಾಗುಣದಲ್ಲಿ ಈ ಹಣ್ಣು ಬೆಳೆಯುವುದು ಸೂಕ್ತ. ನಾಟಿ ಮಾಡಿದ ಒಂದೇ ವರ್ಷದಲ್ಲಿ ಹಣ್ಣು ಬಿಡುವ ಡ್ರ್ಯಾಗನ್ ಸಸಿಯ ರೆಂಬೆಗಳನ್ನು ಕತ್ತರಿಸಿ ನೆಟ್ಟು ಪ್ರದೇಶ ವಿಸ್ತರಣೆ ಮಾಡಬಹುದು. ಮೇ-ಜೂನ್‌ನಲ್ಲಿ ಹೂ ಬಿಟ್ಟು ಅಕ್ಟೋಬರ್-ಡಿಸೆಂಬರ್‌ ಅವಧಿಯಲ್ಲಿ ಆರು ಬಾರಿ ಹಣ್ಣು ಕೀಳಬಹುದು. ಪ್ರತಿ ಎಕರೆಗೆ 1700 ಸಸಿ ನೆಡಬಹುದು. ಪ್ರತಿ ಹೆಕ್ಟೇರ್’ಗೆ 15-18 ಟನ್‌ ಇಳುವರಿ ಮತ್ತು 6ರಿಂದ 8 ಲಕ್ಷ ರೂ. ಆದಾಯ ಪಡೆಯುಬಹುದು. ಹನಿ ನೀರಾವರಿಯಲ್ಲೂ ಬೆಳೆಯುವ ಡ್ರ್ಯಾಗನ್’‌ಗೆ ರೋಗ ಬಾಧೆ ಅತಿವಿರಳ.

ಡ್ರ್ಯಾಗನ್ ಹಣ್ಣುಗಳನ್ನು ಎಲ್ಲಿ ಖರೀದಿಸಬಹುದು?

ಡ್ರ್ಯಾಗನ್ ಹಣ್ಣುಗಳನ್ನು(Dragon fruits) ಮೆಟ್ರೋ ಸಿಟಿಗಳಲ್ಲಿ ಖರೀದಿಸಬಹುದು. ಹಾಗೂ ಇ-ಕಾಮರ್ಸ್ ತಾಣಗಳಾದ ಆಮೆಜಾನ್ ಮತ್ತು ಇನ್ನೂ ಕೆಲವು ತಾಣಗಳಲ್ಲಿ ಖರೀದಿಸಬಹುದು. ಅಮೆಜಾನ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ.

Dragon fruit is the fruit of several cactus species. The plant is native to southern Mexico and Central America. The taste is like a combination of a kiwi and pineapple. it contains small amounts of several nutrients and is a good source of vitamin C and iron.

You may also like