Home » ರಕ್ತದಾನ ಮಾಡುವುದರಿಂದ ಇಷ್ಟೊಂದೆಲ್ಲಾ ಲಾಭಗಳಿವೆಯಾ..!

ರಕ್ತದಾನ ಮಾಡುವುದರಿಂದ ಇಷ್ಟೊಂದೆಲ್ಲಾ ಲಾಭಗಳಿವೆಯಾ..!

by manager manager

ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ‘ರಕ್ತದಾನ’ ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ದಾನ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಹೀಗಾಗಿಯೆ ರಕ್ತದಾನವನ್ನು ಜೀವದಾನ ಎಂದು ಕರೆಯಲಾಗುತ್ತದೆ. ಇಂದು ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರೆದರೂ, ರಕ್ತಕ್ಕೆ ಪರ್ಯಾಯವಿಲ್ಲ. ರಕ್ತವನ್ನು ಕೃತಕವಾಗಿ ತಯಾರಿಸುವುದು ಅಸಾಧ್ಯ. ಆದುದರಿಂದ ರಕ್ತದಾನ ಮಾಡಿ ಜೀವ ಉಳಿಸಿ.

ರಕ್ತದಾನ ಮಹಾದಾನ. ಒಂದು ಯೂನಿಟ್ ರಕ್ತದಾನವನ್ನು ಮಾಡುವುದರಿಂದ ಮೂರು ಜನರ ಜೀವ ಉಳಿಸಬಹುದಾಗಿದೆ. ರಕ್ಷದಾನ ಕೇವಲ ಒಂದು ಜೀವ ಮಾತ್ರ ಉಳಿಸದೇ ರಕ್ಷದಾನ ಮಾಡಿದದವರಲ್ಲಿ ಆರೋಗ್ಯಕರವಾದ ಜೀವನ ಶೈಲಿ ವಿಸ್ತರಣೆಯಾಗುವುದು. ಭಾರತ ದೇಶದಲ್ಲಿ ಪ್ರತಿ 2 ಸೆಕೆಂಡಿಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇದೆ. ಹೀಗಾಗಿ ಕನ್ನಡ ಅಡ್ವೈಜರ್ ಇಂದು ರಕ್ತದಾನದ ಮಹತ್ವ ಹಾಗೂ ಮಾಹಿತಿಗಳನ್ನು ತಿಳಿಸಿಕೊಡುತ್ತಿದೆ.

health benefits of donating blood in kannada 2

ರಕ್ತದಾನ ಮಾಡುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು:

– ರಕ್ತದಾನ ಮಾಡುವುದರಿಂದ ನಿಮ್ಮ ಶರೀರದಲ್ಲಿ ಹೊಸ ರಕ್ತ ಉತ್ಪತಿಯಾಗುತ್ತದೆ.

– ಹೊಸ ರಕ್ತ ದೇಹದಲ್ಲಿನ ರಕ್ತ ಸಂಚಾರ ಕಾರ್ಯತತ್ಪರತೆ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ.

– ರಕ್ತದಲ್ಲಿ ಕೊಬ್ಬಿನಾಂಶ ಕರಗಿಸಿ ರಕ್ತ ಸುಲಲಿತ ಸಂಚಾರಕ್ಕೆ ಸಹಾಯ.

– ಶೇಕಡಾ 80 ಕ್ಕಿಂತಲೂ ಹೆಚ್ಚು ಮನುಷ್ಯನ ಹೃದಯಾಘಾತವನ್ನು ತಡೆಯಲು ರಕ್ತದಾನ ಸಹಾಯಕ.

– ರಕ್ತದ ಒತ್ತಡ, ಇತರೆ ಹಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ.

Benefits of donating blood in kannada 3

ಯಾರೆಲ್ಲಾ ರಕ್ತದಾನ ಮಾಡಬಹುದು ?

– ರಕ್ತದಾನವನ್ನು ಯಾರು ಬೇಕಾದರೂ ಸುಖಾಸುಮ್ಮನೆ ದಾನ ಮಾಡಲು ಆಗುವುದಿಲ್ಲ. ಒಬ್ಬರ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ತೆಗೆದುಕೊಂಡರೂ ಸಹ ಅದು ಆರೋಗ್ಯವಂತನ ರಕ್ಷವಾಗಿರಬೇಕು. ಹಾಗೂ ರಕ್ತವು ಇನ್ನೊಬ್ಬರಿಗೆ ನೀಡಲು ಯೋಗ್ಯವಾಗಿರಬೇಕು. ಅದಕ್ಕಾಗಿಯೇ ರಕ್ತ ತೆಗೆದುಕೊಳ್ಳುವ ಮೊದಲು ಹಲವು ವಿಧದ ಪರೀಕ್ಷೆಗಳನ್ನು ರಕ್ತಕೊಡುವವರಲ್ಲಿ ನಡೆಸಲಾಗುತ್ತದೆ.

– ರಕ್ತದಾನಿಯ ದೇಹದ ತೂಕ ಕನಿಷ್ಠ ಪಕ್ಷ 45 ಕೆ.ಜಿ ಗಿಂತ ಹೆಚ್ಚಿರಬೇಕು.

– ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.05 ಗ್ರಾಂಗಿಂತ ಹೆಚ್ಚು ಇರಲೇಬೇಕು.

– ದೇಹದ ಉಷ್ಣತೆ 37.50 ಗಿಂತ ಜಾಸ್ತಿ ಇರಬಾರದು ಮತ್ತು ಜ್ವರವಿರಬಾರದು.

– ಪುರುಷರು 3 ತಿಂಗಳಿಗೊಮ್ಮೆ ಮತ್ತು ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

– ನೀವು ಆರೋಗ್ಯವಂತರಾಗಿದ್ದಲ್ಲಿ ಮಾತ್ರ ರಕ್ತದಾನ ಮಾಡಬಹುದು.

– ನಮ್ಮ ಶರೀರವು 5000ಮಿ.ಲಿ. ರಕ್ತವನ್ನು ಹೊಂದಿದೆ ಮತ್ತು 350 ಮಿ.ಲಿ. ರಕ್ತವನ್ನು ಮಾತ್ರ ರಕ್ತದಾನದ ಸಮಯದಲ್ಲಿ ಪಡೆದುಕೊಳ್ಳಲಾಗುತ್ತದೆ. ಹೀಗೆ ದಾನ ಮಾಡಿದ ರಕ್ತವನ್ನು ನಿಯಮಿತವಾದ ಆಹಾರವನ್ನು ಸೇವಿಸುವುದರಿಂದ ಶರೀರವು ಮತ್ತೆ ಕೆಲವೇ ವಾರಗಳಲ್ಲಿ ಉತ್ಪಾದಿಸಿಕೊಳ್ಳುತ್ತದೆ.

– ಮಧುಮೇಹ ರೋಗಿಗಳಾಗಿದ್ದರೆ ಮಾತ್ರೆ ತೆಗೆದುಕೊಂಡು ನಿಯಂತ್ರಣದಲ್ಲಿರುವ ಮಧುಮೇಹ ರೋಗಿಗಳು ಸಹ ರಕ್ತದಾನ ಮಾಡಬಹುದು.

Benefits of donating blood in kannada 4

ಯಾರು ರಕ್ತದಾನ ಮಾಡಲು ಯೋಗ್ಯರಲ್ಲ? 

– ಹೃದಯ ಸಂಬಂಧ ಕಾಯಿಲೆ, ಯಕೃತ್ತಿನ ಕಾಯಿಲೆ, ಮೂತ್ರಪಿಂಡದ ಕಾಯಿಲೆ, ಅರ್ಬುದ ರೋಗ (ಕ್ಯಾನ್ಸರ್), ಅಪಸ್ಮಾರ, ಕ್ಷಯರೋಗ ಇತ್ಯಾದಿ ರೋಗಗಳಿಂದ ಬಳಲುತ್ತಿರುವವರು ರಕ್ತದಾನ ಮಾಡಬಾರದು. ಅಧಿಕ ರಕ್ತದೊತ್ತಡ, ನಿಯಂತ್ರಣವಿಲ್ಲದ ಮಧುಮೇಹ ರೋಗದಿಂದ ಬಳಲುತ್ತಿರುವವರು ರಕ್ತದಾನ ಮಾಡದಿರುವುದು ಉತ್ತಮ.

– ಮದ್ಯಪಾನ ಮತ್ತು ಮಾದಕ ದ್ರವ್ಯಸೇವನೆ ಮಾಡಿದಾಗ ರಕ್ತದಾನ ಮಾಡಬಾರದು. ಅಂತಹವರು 72 ಗಂಟೆಗಳ ನಂತರ ರಕ್ತದಾನ ಮಾಡಬಹುದು.

– ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆದಿದ್ದರೆ ಚಿಕಿತ್ಸೆ ಪಡೆದ ನಂತರದ 3 ತಿಂಗಳು ನಂತರ ರಕ್ತದಾನ ಮಾಡಬಹುದು

– ಹಿಂದಿನ 3 ತಿಂಗಳಲ್ಲಿ ತಾವು ರಕ್ತ ಅಥವಾ ರಕ್ತದ ಅಂಶ ಪಡೆದಿದ್ದಲ್ಲಿ, ಅಂಥವರು ರಕ್ತದಾನ ಮಾಡಬಾರದು

– ಮಹಿಳೆಯರು ತಿಂಗಳ ಮುಟ್ಟಿನ ಸಮಯದಲ್ಲಿ, ಗರ್ಭಿಣಿಯಾಗಿದ್ದಾಗ, ಎದೆಹಾಲು ಉಣಿಸುತ್ತಿರುವಾಗ ಮತ್ತು ಹೆರಿಗೆಯ ನಂತರ 6 ತಿಂಗಳವರೆಗೆ ರಕ್ತದಾನ ಮಾಡಬಾರದು.

– ಇನ್ಸುಲಿನ್ ತೆಗೆದುಕೊಳ್ಳುತ್ತಿರುವ ಮಧುಮೇಹ ರೋಗಿಗಳು ರಕ್ತದಾನ ಮಾಡಬಾರದು.

– ಕಾಮಾಲೆ (ಜಾಂಡಿಸ್) ಮತ್ತು ಹೆಚ್.ಐ.ವಿ. (ಏಡ್ಸ್) ಮತ್ತು ಸಿಫಿಲಿಸ್ ಮುಂತಾದ ಲೈಂಗಿಕ ಕಾಯಿಲೆ ಇರುವವರು ರಕ್ತದಾನ ಮಾಡಬಾರದು.

– ವಾಂತಿ, ಬೇಧಿ ಮತ್ತು ಜ್ವರದಿಂದ ಬಳಲುತ್ತಿರುವವರು ರಕ್ತದಾನ ಮಾಡಬಾರದು.

– ಅಲರ್ಜಿ ಮತ್ತು ವಿಪರೀತ ಆಸ್ತ್ಮ ರೋಗಗಳಿಂದ ಬಳಲುತ್ತಿರುವವರು ರಕ್ತದಾನ ಮಾಡದಿರುವುದೇ ಉತ್ತಮ.

Donating blood not only save a life, it will help lot of health benefits. From donating blood you can lose weight, reduce your risk of heart disease and cancer. here is list of health benefits from blood donating.

You may also like