Home » ಹೆಚ್ಚಿದ ಆಹಾರ ಕಲಬೆರಕೆ ಜಾಲ; ಯಾವ ಆಹಾರದಲ್ಲಿ ಯಾವ್ಯಾವ ಪದಾರ್ಥ ಕಲಬೆರಕೆ ಗೊತ್ತೇ?

ಹೆಚ್ಚಿದ ಆಹಾರ ಕಲಬೆರಕೆ ಜಾಲ; ಯಾವ ಆಹಾರದಲ್ಲಿ ಯಾವ್ಯಾವ ಪದಾರ್ಥ ಕಲಬೆರಕೆ ಗೊತ್ತೇ?

by manager manager

ದುಡ್ಡು ಕಡಿಮೆ, ಕ್ವಾಂಟಿಟಿ ಹೆಚ್ಚು ಆಹಾರಕ್ಕೆ ಜನರು ಮುಗಿ ಬೀಳುವುದು ಹೊಸದೇನಲ್ಲ. ಆದರೆ ಅದೇ ಆಹಾರ ನಮ್ಮ ದೇಹಕ್ಕೆ ಮಾರಕವಾಗುತ್ತಿದೆ ಎಂದರೆ ಬಹುಬೇಗ ನಂಬದೇ ಇರಬಹುದು. ಆದರೆ ಇದು ನಿಜ. ಇತ್ತೀಚಿನ ದಿನಗಳಲ್ಲಿ ಆಹಾರ ಕಲಬೆರಕೆ ಎಂಬುದು ದಿನದಿಂದ ದಿನಕ್ಕೆ ಅಧಿಕ ವಾಗುತ್ತಿದೆ. ಅದೃಷ್ಟವಶಾತ್ ತಂತ್ರಜ್ಞಾನ ಅಭಿವೃದ್ಧಿ ಪಡಿಸುವವರು ಆಹಾರಗಳಲ್ಲಿ ಕಲಬೆರಕೆ ಕಂಡುಹಿಡಿಯಲು ಅಷ್ಟೇ ವೇಗವಾಗಿ ಅಗತ್ಯ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಬಳಕೆಗೂ ಮುಂದಾಗಿದ್ದಾರೆ. ಅಷ್ಟೇವೇಗವಾಗಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚುತ್ತಿದ್ದಾರೆ.

ಆಹಾರ ಕಲಬೆರಕೆ ಜಾಲ ಇಂದು ಹೇರಳವಾಗಿ ಹೆಚ್ಚಿದೆ ಎಂಬುದನ್ನು ದಿನನಿತ್ಯ ಸುದ್ದಿ ವಾಹಿನಿಗಳನ್ನು ಗಮನಿಸುವವರಿಗೆ ತಿಳಿದೇ ಇರುತ್ತದೆ. ಇಂದಿನ ನಮ್ಮ ಲೇಖನದಲ್ಲಿ ಯಾವ ಆಹಾರದಲ್ಲಿ ಯಾವ ಪದಾರ್ಥಗಳನ್ನು ಕಲಬೆರಕೆ ಆಗಿ ಉಪಯೋಗಿಸಲಾಗುತ್ತದೆ ಎಂಬುದರ ಮಾಹಿತಿ ಈ ಕೆಳಗೆ ನೀಡುತ್ತಿದ್ದೇವೆ. ಇದನ್ನು ಓದಿದವರು ಆಯಾ ಆಹಾರ ಪಾದಾರ್ಥ ಖರೀದಿಸುವಾಗ, ಸೇವಿಸುವಾಗ ತಮ್ಮ ಗಮನಕ್ಕೆ ಬಂದರು ಬರಬಹುದು ಒಮ್ಮೆ ಯೋಚಿಸಿದರೆ..

ಯಾವ ಆಹಾರದಲ್ಲಿ ಯಾವ ಕಲಬೆರಕೆ ಇರುತ್ತದೆ?

ಹಣ್ಣುಗಳು – ಬಣ್ಣ, ವ್ಯಾಕ್ಸ್ ಬಳಕೆ

ಸೊಪ್ಪು – ಕಳೆ ಗಿಡಗಳ ಮಿಶ್ರಣ, ಕೀಟ ನಾಶಕ ಬಳಕೆ

ಮಾವು – ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡಲಾಗುತ್ತದೆ.

ಸಿಹಿ ತಿಂಡಿಗಳು – ರಾಸಾಯನಿಕ ಬಣ್ಣ, ಅಲ್ಯುಮಿನಿಯಮ್ ಮಿಶ್ರಿತ ಸಿಲ್ವರ್ ಲೇಪನ, ಕಳಪೆ ಕೋವಾ

ಹಾಲು – ಡಿಟರ್ಜೆಂಟ್, ಯೂರಿಯಾ, ಹಿಟ್ಟಿನಂತ ಪದಾರ್ಥಗಳು

ತುಪ್ಪ – ವನಸ್ಪತಿ, ಪ್ರಾಣಿ ಕೊಬ್ಬು, ಆಲೂಗಡ್ಡೆ, ಗೆಣಸು

ಅಡುಗೆ ಎಣ್ಣೆ – ಟಿಒಸಿಪಿ (ಟ್ರೈ ಆರ್ಥೋ ಕ್ರೆಸಿಲ್ ಫಾಸ್ಟೆಟ್), ಪೆಟ್ರೋಲಿಯಂ ಮೂಲದ ಎಣ್ಣೆ

ಜೇನು ತುಪ್ಪ – ಸಕ್ಕರೆ ಪಾಕ, ಸಿಹಿ ಪದಾರ್ಥಗಳ ಮಿಶ್ರಣ

ಸಕ್ಕರೆ – ಸೀಮೆ ಸುಣ್ಣ, ಗಾಜಿನ ಚೂರು

ಬೇಳೆ ಕಾಳುಗಳು – ಬೆಣಚುಕಲ್ಲು, ಕಲ್ಲು, ಒಣಹುಲ್ಲು, ಕಡ್ಡಿ, ಕಳೆ ಬೀಜಗಳು, ಚೂರಾದ ಧಾನ್ಯಗಳು, ಕೀಟಗಳು, ಹಿಕ್ಕೆ,

ಗೋದಿ, ಮೈದಾ ಹಿಟ್ಟು – ಹೊಟ್ಟು

ಮೆಣಸು – ಪರಂಗಿ ಬೀಜ, ಒಣಗಿದ ಹಿಪ್ಪು ನೇರಳೆ ಕಾಯಿಗಳು

ಕೇಸರಿ – ತೆಂಗಿನ ನಾರು, ಬಣ್ಣ

ಕಾಫಿ ಪುಡಿ – ಹುಣಸೆ ಬೀಜದ ಪುಡಿ, ಮರದ ಹೊಟ್ಟು

ಚಹಾ ಪುಡಿ – ಬಳಕೆಯಾದ ಚಹಾಪುಡಿ ಬಣ್ಣ ಕಟ್ಟುವುದು, ಕಬ್ಬಿಣದ ಚೂರುಗಳ ಬೆರಕೆ

ಮೆಣಸಿಕಕಾಯಿ ಪುಡಿ – ಬಣ್ಣದಿಂದ ಕೂಡಿದ ಮರದ ಹೊಟ್ಟು

ಉಪ್ಪು – ಸೀಮೆ ಸುಣ್ಣದ ಹರಳುಗಳು, ಗಾಜಿನ ಪುಡಿಗಳು

ಲವಂಗ – ಮರದ ಚೂರು, ಎಣ್ಣೆತೆಗೆದ ಲವಂಗ, ಹಿಕ್ಕೆ

ಚಕ್ಕೆ – ಇತರ ಮರಗಳ ಚಕ್ಕೆ

ಜೀರಿಗೆ – ಕಳೆ ಗಿಡಗಳ ಬೀಜಗಳು

ಸೇಬು – ಮೇಣದ ಲೇಪ

ಗೆಣಸು -ರೆಡ್ ಆಕ್ಸೈಡ್ ಲೇಪ

ಅವರೆಕಾಯಿ – ಎಣ್ಣೆ ಲೇಪದ ಮೂಲಕ ಕೃತಕ ಸೊಗಡು ಸೃಷ್ಟಿ

ಹಸಿ ಬಟಾಣಿ – ಕೃತಕ ಬಣ್ಣ

ರಾಗಿ – ರಾಸಾಯನಿಕ ಬಣ್ಣ

ಕೋಳಿ, ಕುರಿ – ಹೆಚ್ಚು ಬೇಗ ಬೆಳವಣಿಗೆಯಾಗಲು ಮತ್ತು ತೂಕ ಹೆಚ್ಚು ಬರಲು ಆಂಟಿಬಯೋಟಿಕ್, ಸ್ಟಿರಾಯ್ಡ್ ನೀಡುವುದು

ಕಲಬೆರಕೆಯ ದುಷ್ಪರಿಣಾಮಗಳು ಯಾವುದು?

– ಮಧುಮೇಹ

– ರಕ್ತದೊತ್ತಡ

– ಬೊಜ್ಜು

– ಹೃದಯಘಾತ

– ಕ್ಯಾನ್ಸರ್

– ಅಲರ್ಜಿ

– ಚರ್ಮದ ಕಾಯಿಲೆಗಳು

– ಗ್ಯಾಸ್ಟ್ರಿಕ್

– ಮೆದುಳಿನ ಸಮಸ್ಯೆ

– ಶ್ವಾಸಕೋಶ ಸಮಸ್ಯೆ

– ಕಿಡ್ನಿ ಸಮಸ್ಯೆ

– ಉದರ ಸಂಬಂಧಿ ಕಾಯಿಲೆಗಳು

-ಅಲ್ಜೈಮರ್, ಪಾರ್ಕಿನ್‌ಸನ್‌ನಂಥ ಕಾಯಿಲೆಗಳಿಗೂ ಪರೋಕ್ಷವಾಗಿ ಕಲಬೆರಕೆ ಕಾರಣವಾಗಿದೆ.

You may also like