Home » ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳಲು ಈ 5 ಸರಳ ಸಲಹೆಗಳು ಸಾಕು..!

ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳಲು ಈ 5 ಸರಳ ಸಲಹೆಗಳು ಸಾಕು..!

by manager manager
Fitness tips in Kannada language and diet fitness tips in kannada

ದಿನವಿಡೀ ಟಿವಿ ಮುಂದೆ ಕೂರೋದು, ದಿನನಿತ್ಯ ಹೆಚ್ಚು ಎಣ್ಣೆ ಪದಾರ್ಥಗಳನ್ನು ತಿನ್ನುವುದು, ಸರಿಯಾದ ಆಹಾರ ಕ್ರಮ ಇಲ್ಲಿದಿರುವುದು, ಆಹಾರ ಪದ್ದತಿ ಬಗ್ಗೆ ಸ್ವಲ್ಪವೂ ತಲೆನೇ ಕೆಡಿಸಿಕೊಳ್ಳದಿರುವುದು.. ಇದೆಲ್ಲದರ ಪರಿಣಾಮ ಒಂದಲ್ಲ ಒಂದು ದಿನ ನಮ್ಮ ದೇಹದ ಗಾತ್ರ, ತೂಕದ ಬಗ್ಗೆ ಮತ್ತು ಅಂದದ ಬಗ್ಗೆ ನಮಗೆ ತಲೆನೋವು ತರುತ್ತದೆ.(fitness tips in kannada language)

ದೇಹದ ಫಿಟ್‌ನೆಸ್ ನಿರ್ವಹಣೆ ಒಂದು ಕಲೆಯೂ ಹೌದು, ನಮ್ಮ ಮಾನಸಿಕ ಮತ್ತು ಜ್ಞಾಪಕ ಶಕ್ತಿ ಹಿತದೃಷ್ಠಿಯಿಂದ ಅನಿವಾರ್ಯವೂ ಹೌದು. ಕೆಲವರಿಗೆ ದೇಹದ ತೂಕ ಹೆಚ್ಚಿಸುವ ಮತ್ತು ಇಳಿಸುವುದು ಸುಲಭವಾದರೆ, ಇನ್ನೂ ಕೆಲವರಿಗೆ ಕಠಿಣ ಮತ್ತು ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಇನ್ನೂ ಕೆಲವರು ತಮ್ಮ ಹೊಟ್ಟೆ ಕರಗಿಸಲು ದಿನನಿತ್ಯ ಏನೇ ಕಸರತ್ತು ಮಾಡಿದರೂ ಹೊಟ್ಟೆ ಕರಗದಿರುವ ಉದಾಹರಣೆಗಳಿವೆ. ಅದಕ್ಕೆ ಕಾರಣ ಅವರ ಆಹಾರ ಪದ್ಧತಿಯೂ ಆಗಿರಬಹುದು.

ದೇಹದ ಫಿಟ್‌ನೆಸ್ ವಿಷಯಕ್ಕೆ ಬಂದ್ರೆ ಪ್ರತಿಯೊಬ್ಬರಿಗೂ ಮಾದರಿ ಆಗಿ ನಿಲ್ಲುವವರು ಭಾಗಶಃ ಸಿನಿಮಾ ಕ್ಷೇತ್ರದವರೂ. ಹೇಗೆ ಅಂದ್ರೆ.. ನಿರ್ದೇಶಕರುಗಳು ಅವರನ್ನೂ ವಿಭಿನ್ನ ಸಿನಿಮಾಗಳಿಗೆ ವಿಭಿನ್ನ ಬಾಡಿ ಲಾಂಗ್ವೇಜ್ ಅನ್ನು ಪೋಷಿಸಲು ಹೇಳಿ.. ಫಿಟ್‌ನೆಸ್ ಅನ್ನು ಹೇಗೆ ಬೇಕೋ ಹಾಗೆ ಮಾರ್ಪಾಡು ಮಾಡಿಸುತ್ತಾರೆ. ಅದಕ್ಕೆ ಇವರೆಲ್ಲ ಫಿಟ್‌ನೆಸ್ ವಿಷಯದಲ್ಲಿ ಮೊದಲ ಸ್ಫೂರ್ತಿ ಎಂದರೆ ತಪ್ಪಾಗಲಾರದು.

ಅಂದಹಾಗೆ ಇಲ್ಲಿ ನಾವು ಕೆಲವು ಸರಳ ಮತ್ತು ಯಶಸ್ವಿ ಫಿಟ್‌ನೆಸ್ ಸಲಹೆಗಳನ್ನು ನೀಡಿದ್ದು, ಅಟ್‌ಲಿಸ್ಟ್ ಈ ಕೆಲವು ಟಿಪ್ಸ್‌ಗಳನ್ನು ಫಾಲೋ ಮಾಡಿದರೂ ನಿಮ್ಮ ದೇಹ ನೀವು ಹೇಳಿದ ಹಾಗೆ ಕೇಳುವಲ್ಲಿ ಸಂಶಯವೇ ಬಾರದು.(fitness tips in kannada language)

ದಿನನಿತ್ಯ ವ್ಯಾಯಾಮ

ದಿನಿನಿತ್ಯ ಕೇವಲ 1 ಗಂಟೆ ಸಮಯವನ್ನು ಓಡಲು ಮತ್ತು ವಾಕ್‌ ಮಾಡಲು ಮೀಸಲಿರಿಸಿದರೆ ಯಾವುದೇ ನಷ್ಟ ಆಗುವುದಿಲ್ಲ. ಇದರಿಂದ ನಿಮ್ಮ ದಿನಿನಿತ್ಯ ಕೆಲಸಗಳಲ್ಲಿ ಇನ್ನೂ ಹೆಚ್ಚು ಚುರುಕಾರಿ ಇರುತ್ತೀರಿ. ಕೊಬ್ಬು ಹೆಚ್ಚಿದಲ್ಲಿ ಸ್ವಲ್ಪ ಹೆಚ್ಚು ವೇಗದ ರನ್ನಿಂಗ್, ವರ್ಕ್‌ಔಟ್ ಇರಲಿ. ಆದರೆ ಈ ಹೆಚ್ಚಿನ ವರ್ಕ್‌ಔಟ್‌ಗಳನ್ನು ನೀವು ಫಿಟ್‌ನೆಸ್‌ಗಾಗಿ ವ್ಯಾಯಾಮ ಪ್ರಾರಂಭಿಸಿದ ದಿನವೇ ಮಾಡಬೇಡಿ. ಕಾರಣ ದೇಹದ ಅಂಗಾಂಗಗಳು ಮತ್ತು ಮಜಲ್ಸ್‌ಗಳನ್ನು ಕೆಲವು ದಿನ ವಾರ್ಮ್‌ ಮಾಡದಿದ್ದರೇ ಹೆಚ್ಚು ನೋವು ಅನುಭವಿಸುವ, ಕಿರಿಕಿರಿ ಉಂಟಾಗುವ ಸಂಭವ ಹೆಚ್ಚು.

ವ್ಯಾಯಾಮ ಮಾಡುವಾಗ ಹೆಚ್ಚು ಹೈಡ್ರೇಟೆಡ್ ಆಗಿರಿ. ಅಂದರೆ ದೇಹದಲ್ಲಿ ನೀರಿನಂಶ ಹಿಡಿದಿಡುವ ಆಹಾರ ಪದಾರ್ಥಗಳನ್ನು, ಪ್ರೋಟೀನ್‌ ಯುಕ್ತ ಆಹಾರಗಳನ್ನು ಸೇವಿಸಿರಿ.

ಸರಿಯಾದ ಆಹಾರ ಕ್ರಮದ ಜೊತೆಗೆ ಪ್ರೋಟೀನ್ ಆಹಾರಗಳು

ದೇಹದ ತೂಕ ಕಡಿಮೆ ಮಾಡುವ ವೇಳೆ ಹೆಚ್ಚು ಸುಗರ್ ಅಂಶ ಇರುವ ಪದಾರ್ಥಗಳನ್ನು ತಿನ್ನಬಾರದು. ಫಿಟ್‌ನೆಸ್‌ ನಿರ್ವಹಣೆ ಮಾಡಲು ಆರಂಭ ಮಾಡಿದವರಿಗೆ ಹಣ್ಣು ಮತ್ತು ಹಸಿರು ತರಕಾರಿ ಪದಾರ್ಥಗಳು ಅತ್ಯುತ್ತಮ ಆಹಾರ. ದಿನದ ಕಸರತ್ತು ಮುಗಿಸಿದ ಮೇಲೆ ಕೇವಲ ಒಂದು ಸೇಬು ತಿನ್ನುವುದರಿಂದ 3-4 ಗಂಟೆಗಳ ಕಾಲ ಹೊಟ್ಟೆ ಹಸಿವಿನಿಂದ ದೂರ ಇರಬಹುದು. ಇದರಿಂದ ಹೊಟ್ಟೆಯನ್ನು ಬಹುಬೇಗ ಕಡಿಮೆ ಮಾಡಬಹುದು. ಹಸಿರು ಬೀನ್ಸ್ ಮತ್ತು ಗೆಡ್ಡೆಕೋಸುಗಳು ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತವೆ.

ಫಿಟ್‌ನೆಸ್ ನಿರ್ವಹಣೆ ಮಾಡುವವರಿಗೆ ಚಿಕೆನ್, ಮೀನು, ಮಾಂಸ ಪರ್ಯಾಯವಾದ ಉತ್ತಮ ಆಹಾರಗಳು. ಇವುಗಳಲ್ಲಿ ಪ್ರೋಟೀನ್ ಮತ್ತು ನ್ಯುಟ್ರಿಯಂಟ್ಸ್‌ ಇರುವುದರಿಂದ ದೇಹದ ಮಜಲ್ಸ್‌ಗಳನ್ನು ಫಿಟ್‌ ಆಗಿ ಇಡುತ್ತವೆ.

ದೇಹದ ತೂಕ ಮತ್ತು ಆಹಾರ ಸೇವನೆ ಪ್ರಮಾಣ ಟ್ರ್ಯಾಕ್ ಮಾಡಿ

ದಿನನಿತ್ಯ ಎಷ್ಟು ಕ್ಯಾಲೋರಿ ಆಹಾರ ಸೇವನೆ ಮಾಡಿದಿರಿ ಎಂಬುದರ ಟ್ರ್ಯಾಕ್ ಮಾಡುವುದರಿಂದ ಹೇಗೆ ಮತ್ತು ಎಷ್ಟು ಅವಧಿ ವರ್ಕ್‌ ಔಟ್ ಮಾಡಬೇಕು ಎಂಬುದನ್ನು ಪ್ಲಾನ್ ಮಾಡಬಹುದು. ಈ ಯೋಜನೆ ದೇಹದ ತೂಕ ಹೆಚ್ಚಿಸಿ ಬಾಡಿ ಬಿಲ್ಡ್ ಮಾಡುವವರಿಗೆ ಮತ್ತು ತೂಕ ಇಳಿಸಿಕೊಳ್ಳುವ ಇಬ್ಬರಿಗೂ ಹೆಚ್ಚು ಸಹಾಯಕಾರಿ.

ಆರೋಗ್ಯಕರ ನಿದ್ದೆ ಮಾಡಲು ಮರೆಯದಿರಿ

ರಾತ್ರಿ ಪಾಳಯ ಆಗಲಿ ಅಥವಾ ಹಗಲು ವೇಳೆ ಆಗಲಿ ಕೆಲಸ ಮಾಡುವವರು ಕನಿಷ್ಠ 8 ಗಂಟೆ ಕರ್ತವ್ಯ ನಿರತರಾಗಿರುತ್ತೀರಿ. ಇಂತಹವರು ದೇಹದ ಬ್ಯಾಟರಿ ಚಾರ್ಜ್‌ಗಾಗಿ ಕನಿಷ್ಟ 6 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಲು ಮರೆಯದಿರಿ. ಸರಿಯಾಗಿ ನಿದ್ರೆ ಮಾಡದಿದ್ದಲ್ಲಿ ಅಂತಹವರು ಹೆಚ್ಚು ವರ್ಕ್‌ ಔಟ್ ಮಾಡುವುದು ಯೋಗ್ಯವಲ್ಲ. ಅದಾಗ್ಯೂ ಎಂದಿನಂತೆ ವರ್ಕ್‌ ಔಟ್ ಮಾಡಿದ್ದಲ್ಲಿ ರಾತ್ರಿ ವೇಳೆ ನಿದ್ರೆಗೆ ತೊಂದರೆ ಉಂಟಾಗಬಹುದು.

ಸ್ಫೂರ್ತಿದಾಯಕವಾಗಿರಿ

ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳಲು ಅತಿಮುಖ್ಯವಾದುದು ಪ್ರೇರಣೆ. ಆದ್ದರಿಂದ ಯಾವಾಗಲು ಫಿಟ್‌ನೆಸ್ ಗುರಿ ಮತ್ತು ಸಕಾರಾತ್ಮಕ ಚಿಂತನೆಯನ್ನು ಕಾಪಾಡಿಕೊಳ್ಳಿ. ಇದು ಸಾಧ್ಯವಾದಲ್ಲಿ ಕಂಡಿತ ನೀವು ಬಯಸಿದ ದೇಹದ ಫಿಟ್‌ನೆಸ್ ನಿಮ್ಮದಾಗುತ್ತದೆ.

Fitness tips in kannada language, simple fitness tips, diet fitness plan in kannada, kannada body fitness tips are here.

You may also like