Home » ಅರಸು ಹಿಂದುಳಿದ ವರ್ಗಗಳ ಇಲಾಖೆಯ ಸಾಲ ಸೌಲಭ್ಯಕ್ಕಾಗಿ ಸಲ್ಲಿಸಬೇಕಾದ ದಾಖಲೆಗಳು ಯಾವುವು? ಇಲ್ಲಿದೆ ಮಾಹಿತಿ..

ಅರಸು ಹಿಂದುಳಿದ ವರ್ಗಗಳ ಇಲಾಖೆಯ ಸಾಲ ಸೌಲಭ್ಯಕ್ಕಾಗಿ ಸಲ್ಲಿಸಬೇಕಾದ ದಾಖಲೆಗಳು ಯಾವುವು? ಇಲ್ಲಿದೆ ಮಾಹಿತಿ..

by manager manager

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ 2018-19 ನೇ ಸಾಲಿಗೆ ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವಿಧರರು ಸ್ವಯಂ ಉದ್ಯೋಗ ಸಾಲ ಸೌಲಭ್ಯವನ್ನು ಪಡೆಯಲು ಈ ಕೆಳಗಿನ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

1. ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ. (ಎಲ್ಲಾ ಕಾಲಂಗಳಲ್ಲಿ ವಿವರಗಳನ್ನು ಭರ್ತಿ ಮಾಡಬೇಕು. ಬರೆಯದೇ ಇದ್ದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು)

2. ಅರ್ಜಿದಾರರ ಹಾಗೂ ಜಾಮೀನುದಾರರ ಪಾಸ್‌ ಪೋರ್ಟ್ ಅಳತೆಯ ತಲಾ 1 ಭಾವಚಿತ್ರಗಳನ್ನುಅರ್ಜಿಗೆ ಅಂಟಿಸಬೇಕು.

3. ಅರ್ಜಿದಾರರು ಹಿಂದುಳಿದ ವರ್ಗಗಳಿಗೆ ತಾವು ಸಂಬಂಧಪಟ್ಟ ಜಾತಿಗೆ ಸೇರಿರುವ ಬಗ್ಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಮೂಲ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/ ಗಳು, ಪಟ್ಟಣ ಪ್ರದೇಶದವರಿಗೆ ರೂ.55,000 ಗಳ ಒಳಗಿರಬೇಕು. ಎನ್‌ಬಿಸಿಎಫ್‌ಡಿಸಿ ಯೋಜನೆಗಳಲ್ಲಿ ನಗರ ಪ್ರದೇಶದವರಿಗೆ ವಾರ್ಷಿಕ ವರಮಾನ ರೂ.1.20,000 ಗಳು, ಗ್ರಾಮೀಣ ಪ್ರದೇಶದವರಿಗೆ ರೂ.98,000 ಗಳಿಗಿಂತ ಕಡಿಮೆ ಇರಬೇಕು.

4. ವಯಸ್ಸಿನ ದೃಡೀಕರಣಕ್ಕೆ ದಾಖಲೆ.

5. ವಾಸ ಸ್ಥಳ/ವಿಳಾಸ ದೃಢೀಕರಣಕ್ಕೆ ಪಡಿತರ ಚೀಟಿ/ಆಧಾರ ಕಾರ್ಡ್/ಚುನಾವಣಾ ಗುರುತಿನ ಚೀಟಿಯ ಜೆರಾಕ್ಸ್ ಪತ್ರಿಯನ್ನು ಲಗತ್ತಿಸಬೇಕು.

6. ಬ್ಯಾಂಕ್ ಖಾತೆಯ ನಂಬರ್ ಮತ್ತು ವಿಳಾಸವಿರುವ ಭಾಗದ ಜೆರಾಕ್ಸ್ ಪತ್ರಿಯನ್ನು ಲಗತ್ತಿಸಬೇಕು. ಇಲ್ಲಿದೆ ಇದ್ದಲ್ಲಿ ಅರ್ಜಿ ತಿರಸ್ಕೃತವಾಗುವುದು.

7. ರೂ.1 ಲಕ್ಷಗಳಿಗಿಂತ ಹೆಚ್ಚಿನ ಸಾಲಕ್ಕೆ ಅರ್ಜಿದಾರರು/ಜಾಮೀನುದಾರರು ಸಾಲದ ಭದ್ರತೆಗೆ ನೀಡುವ ಸ್ಥೀರಾಸ್ತಿಯ ಕಂದಾಯ ದಾಖಲೆಗಳು.

8. ಸಾರಿಗೆ ವಲಯ ಯೋಜನೆಯಲ್ಲಿ ಸಾಲ ಪಡೆಯಲು ಡ್ರೈವಿಂಗ್ ಲೈಸೆನ್ಸ್ ಜೆರಾಕ್ಸ್ ಪ್ರತಿ.

9. ಅರ್ಜಿಯನ್ನು ಕಛೇರಿಗೆ ನೀಡಿದ ನಂತರ ಸ್ವೀಕೃತಿ ಪತ್ರವನ್ನು ಮರೆಯದೇ ಪಡೆಯಬೇಕು.

ಅರ್ಜಿಯ ಪ್ರಕಟಣೆಯನ್ನು ಪಿಡಿಎಫ್‌ನಲ್ಲಿ ಓದಲು ಕ್ಲಿಕ್‌ ಮಾಡಿ. 

ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್‌ ಮಾಡಿ 

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ 2018-19 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವಿಧರರು ಸ್ವಯಂ ಉದ್ಯೋಗ ಸಾಲ ಸೌಲಭ್ಯವನ್ನು ಪಡೆಯಲು ಅರ್ಹರಾದ ನಂತರ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

1. ಸಾಲದ ಭದ್ರತೆಗೆ ಕಾನೂನು ಭದ್ರತಾ ದಾಖಲೆಗಳು(ಮಂಜೂರಾತಿ ಆದೇಶದಲ್ಲಿ ತಿಳಿಸಿರುವಂತೆ ನಿಗದಿತ ಮೌಲ್ಯದ ಛಾಪಾ ಕಾಗದಗಳಲ್ಲಿ)

2. ಅರ್ಜಿದಾರರು ಸ್ಥಳೀಯ ಬ್ಯಾಂಕ್/ಹಣಕಾಸು ಸಂಸ್ಥೆಗಳಲ್ಲಿ ಸಾಲ ಹೊಂದಿಲ್ಲದಿರುವುದಕ್ಕೆ ಬೇಬಾಕಿ ಪತ್ರ ಫಲಾನುಭವಿ ಆಯ್ಕೆ ಆದ ನಂತರ ನೀಡಬೇಕು.

3.ಅರ್ಜಿದಾರರು/ಜಾಮೀನುದಾರರು ಆಸ್ತಿ ಮತ್ತು ಋಣಭಾರದ ಸ್ವಯಂ ಘೋಷಣೆ. ಸಾಲ ಮಂಜೂರು ಆದ ನಂತರ ಒದಗಿಸುವುದು.

4. ಸರ್ಕಾರಿ ನೌಕರರು ಜಾಮೀನು ನೀಡಿದ್ದಲ್ಲಿ, ಸೇವಾವಧಿ ದೃಡೀಕರಣ.

5.ಘಟಕಗಳಿಗೆ ಅಗತ್ಯವಿದ್ದಲ್ಲಿ ಗ್ರಾಮ ಪಂಚಾಯಿತಿ/ಪಟ್ಟಣ ಪಂಚಾಯಿತಿಗಳಿಂದ ಲೈಸೆನ್ಸ್/ ಪರವಾನಗಿ ಪತ್ರ.

Backward Classes Department announced Loan facility to unemployed degree holders up to Rs.10 lakhs at annual 6% interest. All details of to be summited documents to Backward Classes Department are here.

You may also like

1 comment

Comments are closed.