Home » ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ನಿರುದ್ಯೋಗಿಗಳಿಗೆ ಬಂಪರ್ ಆಫರ್! ವಾರ್ಷಿಕ ಶೇ.6 ಬಡ್ಡಿದರದಲ್ಲಿ ರೂ.10 ಲಕ್ಷದವರೆಗೆ ಸಾಲ

ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ನಿರುದ್ಯೋಗಿಗಳಿಗೆ ಬಂಪರ್ ಆಫರ್! ವಾರ್ಷಿಕ ಶೇ.6 ಬಡ್ಡಿದರದಲ್ಲಿ ರೂ.10 ಲಕ್ಷದವರೆಗೆ ಸಾಲ

by manager manager

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ(D Devaraju Arasu Backward Classes Department) 2018-19 ನೇ ಸಾಲಿಗೆ ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವಿಧರರಿಗೆ ಸ್ವಯಂ ಉದ್ಯೋಗ ಸಾಲ ಸೌಲಭ್ಯವನ್ನು ಪಡೆಯಲು ದಿನಾಂಕ 03/10/2018 ರಂದು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿ ಅರ್ಜಿ ಅಹ್ವಾನಿಸಿಲಾಗಿದೆ.

ವಾರ್ಷಿಕ ಶೇ.6ರ ಬಡ್ಡಿದರದಲ್ಲಿ ಗರಿಷ್ಠ ರೂ.10 ಲಕ್ಷಗಳ ವರೆಗೆ ಸಾಲ ಸೌಲಭ್ಯವನ್ನು ನಿರುದ್ಯೋಗಿ ಪದವಿಧರರು ಪಡೆಯಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

– ಈ ಇಲಾಖೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ನಿರುದ್ಯೋಗಿ ಪದವಿಧರರು ನಿಗದಿತ ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಅರ್ಜಿ ಪಡೆಯಬಹುದು. ಅಥವಾ

– ಇಲಾಖೆಯ ಅಧಿಕೃತ ವೆಬ್‌ಸೈಟ್‌ ನಲ್ಲಿ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

– ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಅವರು ವಾಸಿಸುತ್ತಿರುವ ಆಯಾ ಜಿಲ್ಲೆಯ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಸಲ್ಲಿಸಬಹುದು. ಹಾಗೂ ಈ ಕಛೇರಿಗಳಲ್ಲಿಯೂ ಅರ್ಜಿಯನ್ನು ಪಡೆಯಬಹುದು.

– ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ತಿಳಿಯಬಹುದು.

ಅರ್ಜಿಸಲ್ಲಿಸಲು ಬೇಕಾದ ಸಾಮಾನ್ಯ ಅರ್ಹತೆಗಳು ಇವು..

– ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ ಮತ್ತು 3ಬಿ ಗೆ ಸೇರಿದವರಾಗಿರಬೇಕು. (ವಿಶ್ವಕರ್ಮ ಅದರ ಉಪ ಸಮುದಾಯಗಳನ್ನು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರಡುಪಡಿಸಿ).

– ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/ ಗಳು, ಪಟ್ಟಣ ಪ್ರದೇಶದವರಿಗೆ ರೂ.55,000 ಗಳ ಒಳಗಿರಬೇಕು.

– ಅರ್ಜಿದಾರರು ಅಂಗೀಕೃತ ವಿಶ್ವವಿದ್ಯಾನಿಲಯದಲ್ಲಿ ಪದವಿಧರರಾಗಿದ್ದು, ನಿರುದ್ಯೋಗಿಗಳಾಗಿರಬೇಕು.

– ಅರ್ಜಿದಾರರು ಆಧಾರ್ ಸಂಖ್ಯೆ ಹೊಂದಿರಬೇಕು.

– ಅರ್ಜಿದಾರರು IFSC ಕೋಡ್ ಹೊಂದಿರುವ ರಾಷ್ಟ್ರೀಕೃತ/ ಗ್ರಾಮೀಣ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು.

– ಅರ್ಜಿದಾರರ ವಯಸ್ಸು ಕನಿಷ್ಠ 25 ರಿಂದ ಗರಿಷ್ಠ 40 ವರ್ಷಗಳ ಮಿತಿಯಲ್ಲಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20/10/2018

-ಈ ಮೇಲಿನ ದಿನಾಂಕದ ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕು ಸ್ವೀಕರಿಸಲಾಗುವುದಿಲ್ಲ.

ಅರ್ಜಿದಾರರು ಸ್ವಯಂ ಉದ್ಯೋಗ ಸಾಲ ಪಡೆಯಲು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು ಯಾವುವು? ಎಂದು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.

ನಿರುದ್ಯೋಗಿ ಪದವಿಧರರು ಸ್ವಯಂ ಉದ್ಯೋಗ ಸಾಲ ಸೌಲಭ್ಯವನ್ನು ಪಡೆಯಲು ಅರ್ಹರಾದ ನಂತರ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಯಲು ಈ ಲಿಂಕ್ ಕ್ಲಿಕ್‌ ಮಾಡಿ

Backward Classes Department announced Loan facility to unemployed degree holders up to Rs.10 lakhs at annual 6% interest. To know full details read this article.

You may also like