Home » BSNL ಬ್ರಾಡ್‌ಬ್ಯಾಂಡ್ ಪ್ಲಾನ್: 30 ದಿನಕ್ಕೆ 500GB ಡಾಟಾ

BSNL ಬ್ರಾಡ್‌ಬ್ಯಾಂಡ್ ಪ್ಲಾನ್: 30 ದಿನಕ್ಕೆ 500GB ಡಾಟಾ

by manager manager

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿಮಿಟೆಡ್(BSNL) ಈಗ ಇತರೆ ಖಾಸಗಿ ಟೆಲಿಕಾಂಗಳಾದ ರಿಲಾಯನ್ಸ್ ಜಿಯೋ, ಭಾರತಿ ಏರ್‌ಟೆಲ್, ಐಡಿಯಾ ಸೆಲ್ಯೂಲಾರ್ ಮತ್ತು ವೊಡಾಫೋನ್‌ಗಳಿಗೆ ಸೆಡ್ಡು ಹೊಡೆಯಲು ಸತಾಯಗತಾಯ ತೀರ್ಮಾನಿಸಿರುವಂತಿದೆ.

ಬಿಎಸ್‌ಎನ್‌ಎಲ್‌ ಆದ್ದರಿಂದಲೇ ಹಲವು ರೀತಿಯ ಆಕರ್ಷಕ ಡಾಟಾ ಪ್ಲಾನ್‌ಗಳನ್ನು ತನ್ನ ಗ್ರಾಹಕರಿಗೆ ನಿರಂತರ ನೀಡುತ್ತಿದೆ. ಅದರ ಜೊತೆಗೆ ಈಗ ಹೊಸ ಎರಡು ಬ್ರಾಡ್‌ಬ್ಯಾಂಡ್‌ ಪ್ಲಾನ್ ಅನ್ನು ಅತೀ ಕಡಿಮೆ ಬೆಲೆಗೆ ಆಫರ್ ಮಾಡಿದೆ.

ಬಿಎಸ್‌ಎನ್‌ಎಲ್‌ ಈಗ ಹೊರತಂದಿರುವ ಹೊಸ ಆಫರ್ ಹೆಸರು ‘ದಿ ಫೈಬ್ರೊ ಕಾಂಬೊ ಯುಎಲ್‌ಡಿ 777’. ಈ ಡಾಟಾ ಪ್ಲಾನ್‌ನಲ್ಲಿ ಗ್ರಾಹಕರಿಗೆ 50mbps ವೇಗದ 500MB ಡಾಟಾ 30 ದಿನಗಳ ವರೆಗೆ ರೂ.777 ಕ್ಕೆ ಸಿಗಲಿದೆ. ಇದರ ಜೊತಗೆ ಫೈಬ್ರೊ ಕಾಂಬೊ ಯುಎಲ್‌ಡಿ 1277 ಪ್ಲಾನ್ ಸಹ ಇದ್ದು, ರೂ 1277 ಗೆ 100mbps ವೇಗದ 750GB ಡಾಟಾವು ದೊರೆಯಲಿದೆ.

ಬಿಎಸ್ಎನ್ಎಲ್‌ ನ ಈ ಎರಡು ಪ್ಲಾನ್‌ಗಳು ಇತರೆ ಟೆಲಿಕಾಂಗಳಿಗೆ ಬಿಗ್‌ ಕಾಂಪಿಟೇಶನ್ ನೀಡುವಲ್ಲಿ ಯಾವುದೇ ಸಂಶಯವಿಲ್ಲ.

BSNL broadband plans: you can get 500GB data for 30days just at 777. Kannadaadvisor giving Full details here.

You may also like