Home » ಶೇ.10 ಮೀಸಲಾತಿ ಯಾರೆಲ್ಲಾ ಪಡೆಯಬಹುದು? ಅರ್ಹತೆಗಳು ಏನು?

ಶೇ.10 ಮೀಸಲಾತಿ ಯಾರೆಲ್ಲಾ ಪಡೆಯಬಹುದು? ಅರ್ಹತೆಗಳು ಏನು?

by manager manager

ನರೇಂದ್ರ ಮೋದಿ ನೇತೃತ್ವದ ಯೂನಿಯನ್ ಕ್ಯಾಬಿನೆಟ್ ಇಂದು (ಸೋಮವಾರ ಜನವರಿ 01) ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜಾತಿಯವರಿಗೆ(Upper Caste) ಉದ್ಯೋಗದಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡ 10 ರಷ್ಟು ಮೀಸಲಾತಿಯನ್ನು ನೀಡಲು ಅನುಮೋದನೆ ನೀಡಿದೆ.

ಶೇಕಡ 10 ಮೀಸಲಾತಿ ಪಡೆಯಲಿರುವ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜಾತಿಯವರು ಉದ್ಯೋಗದಲ್ಲಿ ಈ ಮೀಸಲಾತಿಯನ್ನು ಪಡೆಯಬಹುದು. ಹಾಗೂ ಶಿಕ್ಷಣ ಸಂಸ್ಥೆಗಲ್ಲಿ ಉನ್ನತ ಶಿಕ್ಷಣಕ್ಕಾಗಿ ದಾಖಲಾತಿ ಪಡೆಯುವ ಸಂದರ್ಭದಲ್ಲಿ ರಿಸರ್ವೇಶನ್ ಸಹ ಪಡೆಯಬಹುದು.

ಶೇಕಡ 10 ಮೀಸಲಾತಿಗೆ ಯಾರೆಲ್ಲಾ ಅರ್ಹರು (who are eligible for 10 percent quota) ಎಂಬ ಮಾಹಿತಿ ಈ ಕೆಳಗಿನಂತಿದೆ.

– ವಾರ್ಷಿಕವಾಗಿ ಶೇಕಡ 8 ಲಕ್ಷ ರೂಗಳಿಗಿಂತ ಕಡಿಮೆ ಸಂಪಾದನೆ ಮಾಡುವ ಮೇಲ್ಜಾತಿಯವರು

– ಐದು ಹೆಕ್ಟೇರ್ ಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಮೇಲ್ಜಾತಿಯವರು

– ಶೇಕಡ 10 ಮೀಸಲಾತಿ ಹೊಂದಲು ಸ್ಥಳೀಯವಾಗಿ 1000 sq ft ಗಿಂತ ಕಡಿಮೆ ಮನೆ ಜಾಗ ಹೊಂದಿರುವವರು

– 100 ಗಜಗಳಿಗಿಂತ ಕಡಿಮೆ ವಸತಿ ನೆಲೆಯನ್ನು ಹೊಂದಿರುವವರು

– ಪುರಸಭೆ ಎಂದು ಗುರುತಿಸದ ಪ್ರದೇಶದಲ್ಲಿ ಸ್ವಂತ 200 ಚ.ಗಜಕ್ಕಿಂತ ಕಡಿಮೆ ಪ್ರದೇಶದ ವಸತಿ ನೆಲೆ ಹೊಂದಿರುವವರು.

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ಯವರಿಗಾಗಿ ಘೋಷಣೆ ಮಾಡಿರುವ ಶೇಕಡ 10 ಮೀಸಲಾತಿಯನ್ನು ನರೇಂದ್ರ ಮೋದಿ ನೇತೃತ್ವದ ಯೂನಿಯನ್ ಕ್ಯಾಬಿನೆಟ್ ಮಂಗಳವಾರ ಬಿಲ್ ಮಂಡಿಸಿ ಸಂವಿಧಾನಿಕ ತಿದ್ದುಪಡಿಯನ್ನು ಮಾಡುವ ಸಾಧ್ಯತೆ ಇದೆ.

Prime Minister Narendra Modi headed Union Cabinet approved a 10 percent reservation for economically backward classes of the nation. Here is who are eligible for 10 percent reservation quota..

You may also like