Home » ಸರ್ದಾರ್ ಪಟೇಲರ ವಿಶ್ವದ ಅತಿ ಎತ್ತರದ ಪ್ರತಿಮೆ ಲೋಕಾರ್ಪಣೆ; ಇತರೆ ಎತ್ತರದ ಪ್ರತಿಮೆಗಳು ಯಾವುವು?

ಸರ್ದಾರ್ ಪಟೇಲರ ವಿಶ್ವದ ಅತಿ ಎತ್ತರದ ಪ್ರತಿಮೆ ಲೋಕಾರ್ಪಣೆ; ಇತರೆ ಎತ್ತರದ ಪ್ರತಿಮೆಗಳು ಯಾವುವು?

by manager manager

Sadar Vallabhbhai Patel Statue Monument kannada

ಇಂದು ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧರಾದ ಸರ್ದಾರ್ ವಲ್ಲಭಬಾಯಿ ಪಟೇಲ್‌(Sardar Vallabhbhia Patel) ರವರ ಜನ್ನದಿನವನ್ನು ಸಂಭ್ರಮಿಸುತ್ತಿದ್ದೇವೆ. ಅವರ ಜನ್ಮದಿನದ ಸಂತೋಷದ ಜೊತೆಗೆ ವಿಶ್ವದಲ್ಲೇ ಅತಿ ಎತ್ತರದ 182 ಮೀಟರ್‌ನ ಅವರ ಏಕತೆಯ ಪ್ರತಿಮೆಯನ್ನು ಉದ್ಘಾಟಿಸಿದ್ದು ಭಾರತ ಸಂಭ್ರಮಿಸುತ್ತಿದೆ. ಸರ್ದಾರ್ ವಲ್ಲಭಬಾಯಿ ಪಟೇಲರ್‌ ರವರ ಮೇರು ವ್ಯಕ್ತಿತ್ವದಷ್ಟೇ ಎತ್ತರವಾದದ್ದು ಅವರ ಏಕತೆಯ ಪ್ರತಿಮೆ.

ಸರ್ದಾರ್ ವಲ್ಲಭಬಾಯಿ ಪಟೇಲ್(Sardar Vallabhbhai Patel) ರವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕರು. ರೈತರ ಕಲ್ಯಾಣಕ್ಕಾಗಿ ಬದ್ಧರಾಗಿದ್ದವರು. ರಾಜರ ಆಳ್ವಿಕೆಯಲ್ಲಿ ಹರಿದು ಹಂಚಿದ್ದ 550 ಪ್ರಾಂತ್ಯಗಳನ್ನು ಒಗ್ಗೂಡಿಸಿ ಸಂಯುಕ್ತ ಭಾರತ ಕಟ್ಟಿದ ಅವರು ಸ್ವತಂತ್ರ ಭಾರತದ ಶಿಲ್ಪಿ ಎಂದೇ ಹೆಸರಾಗಿದ್ದವರು.

ಸರ್ದಾರ್ ಪಟೇಲ್‌ ರವರ ವ್ಯಕ್ತಿತ್ವಕ್ಕೆ ತಕ್ಕನಾದ ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆಯ ಮೂಲಕ ಇಂದು ಉಪಕಾರ ಸ್ವರಣೆಯುಳ್ಳ ಭಾರತ ಶ್ರೇಷ್ಠ ವ್ಯಕ್ತಿಗೆ ಗೌರವ ನಮನವನ್ನು ಏಕತೆಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ರವರು ಉದ್ಘಾಟಿಸುವ ಮೂಲಕ ಸಲ್ಲಿಸಲಾಗಿದೆ.

ಏಕತೆಯ ಪ್ರತಿಮೆಯ ಬಗ್ಗೆ ಒಂದಿಷ್ಟು ಮಾಹಿತಿ

ಉದ್ಘಾಟನೆ : ದಿನಾಂಕ 31 ಅಕ್ಟೋಬರ್ 2018

ಸ್ಥಳ : ಸರ್ದಾರ್ ಸರೋವರ ಅಣೆಕಟ್ಟು, ಕೆವಾಡಿಯಾ ಗ್ರಾಮ, ನರ್ಮದಾ, ಗುಜರಾತ್.

ಪ್ರತಿಮೆಯ ಎತ್ತರ : ಸರ್ದಾರ್ ಪಟೇಲ್‌ ರ ಏಕತೆಯ ಪ್ರತಿಮೆಯ ಹೆಸರು 182 ಮೀಟರ್ (597,11 ಅಡಿಗಳು)

ಸರ್ದಾರ್ ಪಟೇಲ್‌ ರ ಪ್ರತಿಮೆಯ ವಿನ್ಯಾಸಕಾರ: ರಾಮ್ ವಿ ಸುತಾರ್

ಸರ್ದಾರ್ ಪಟೇಲ್‌ ರ ಪ್ರತಿಮೆಯ ಶಿಲ್ಪಿ: ಜೋಸೆಫ್ ಮೆನ್ನಾ

ವಿಶ್ವದ ಅತಿ ಎತ್ತರದ ಪ್ರತಿಮೆಗಳ ಪಟ್ಟಿ

– ಚೀನಾ ದಲ್ಲಿರುವ ಬುದ್ಧನ ಸ್ಪ್ರಿಂಗ್ ಟೆಂಪಲ್ ಪ್ರತಿಮೆ 153 ಮೀಟರ್ ಎತ್ತರವಿದೆ.

– ಮ್ಯಾನ್ಮಾರ್ ನಲ್ಲಿರುವ ಲೇಕ್ಯುಯಾನ್ ಸೆತ್ಕಯಾರ್ ಪ್ರತಿಮೆ 116 ಮೀಟರ್ ಎತ್ತರವಿದೆ.

– ಜಪಾನ್ ನಲ್ಲಿರುವ ಉಶಿಕುದಯಬುತ್ಸು ಪ್ರತಿಮೆ 110 ಮೀಟರ್ ಎತ್ತರವಿದೆ.

– ಅಮೆರಿಕಾದಲ್ಲಿರುವ ಸ್ಟ್ಯಾಚು ಆಫ್ ಲಿಬರ್ಟಿ ಪ್ರತಿಮೆ 97 ಮೀಟರ್ ಎತ್ತರವಿದೆ.

– ಥೈಲ್ಯಾಂಡ್ ನಲ್ಲಿನ ಗ್ರೇಟ್ ಬುದ್ಧ ಪ್ರತಿಮೆ 91 ಮೀಟರ್ ಎತ್ತರವಿದೆ.

– ರಷ್ಯಾದ ಮದರ್ ಲ್ಯಾಂಡ್ ಕಾಲ್ಸ್ 87 ಮೀಟರ್ ಎತ್ತರವಿದೆ.

World’s most tallest statue’s list including Sadar Vallabhbhabai Patel Statue Monument.

You may also like